ಹತ್ತೇ ನಿಮಿಷದಲ್ಲಿ ತಯಾರಿಸಬಹುದು ಸಖತ್ ಟೇಸ್ಟಿ ಪನೀರ್ ಪರೋಟ, ರೆಸಿಪಿ ಇಲ್ಲಿದೆ 

By Reshma
Oct 02, 2024

Hindustan Times
Kannada

ಪನೀರ್ ಪರೋಟ ಸಖತ್ ರುಚಿಯಾಗಿರುತ್ತೆ. ಹಲವರಿಗೆ ಈ ಪರೋಟ ಇಷ್ಟವಾಗುತ್ತದೆ. ಮಕ್ಕಳು ಕೂಡ ಬೇಡ ಎನ್ನದೇ ತಿನ್ನುವ ರೆಸಿಪಿ ಇದು 

ಹೋಟೆಲ್‌ಗಳಲ್ಲಿ ಪನೀರ್ ಪರೋಟ ತಿಂದಿದ್ದರೆ ಅದರ ರುಚಿಗೆ ನೀವು ಫಿದಾ ಆಗಿರಬಹುದು. ಹಾಗಂತ ಇದನ್ನು ಮಾಡೋದು ಕಷ್ಟ ಏನಲ್ಲಾ, 10 ನಿಮಿಷಗಳಲ್ಲಿ ತಯಾರಿಸಬಹುದು 

ಅತ್ಯಂತ ಸುಲಭ ವಿಧಾನದ ಮೂಲಕ  ಮನೆಯಲ್ಲೇ ಪನೀರ್‌ ಪರೋಟ ಮಾಡುವುದು ಹೇಗೆ ಅಂತ ನೋಡಿ 

ಮೊದಲು ಹಿಟ್ಟಿಗೆ ಸ್ವಲ್ಪ ನೀರು ಬೆರೆಸಿಕೊಳ್ಳಿ. ತುಂಬಾ ನೀರು ಹಾಕಬೇಡಿ. ಇದನ್ನು ಸುಲಭವಾಗಿ ಉಂಡೆ ಮಾಡುವಂತೆ ಇರಬೇಕು 

ಪನೀರನ್ನು ಚಿಕ್ಕದಾಗಿ ತುರಿದುಕೊಳ್ಳಿ. ಇದಕ್ಕೆ ಕೊತ್ತಂಬರಿ ಸೊಪ್ಪು, ಖಾರದಪುಡಿ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ

ತಯಾರಿಸಿಟ್ಟುಕೊಂಡ ಹಿಟ್ಟಿನಿಂದ ಉಂಡೆ ಮಾಡಿ, ಅದರೊಳಗೆ ಪನೀರ್ ಪೇಸ್ಟ್ ತುಂಬಿಸಿ. ಇದನ್ನ ನಿಧಾನಕ್ಕೆ ಪರೋಟ ಆಕಾರಕ್ಕೆ ಲಟ್ಟಿಸಿ 

ಈ ಪರೋಟ ಕಾಯಿಸುವಾಗ ಎಣ್ಣೆ ಅಥವಾ ತುಪ್ಪ ಬಳಸಬಹುದು. ಇದನ್ನು ಎರಡೂ ಕಡೆ ಚೆನ್ನಾಗಿ ಬೇಯಿಸಬೇಕು 

ಈಗ ನಿಮ್ಮ ಮುಂದೆ ಪನೀರ್ ಪರೋಟ ತಿನ್ನಲು ಸಿದ್ಧ. ಇದನ್ನು ಮೊಸರಿನ ಜೊತೆ ತಿನ್ನಲು ಚೆನ್ನಾಗಿರುತ್ತದೆ 

ಕೆಂಪು ಚಟ್ನಿ ಜೊತೆ ಕೂಡ ಈ ಪರೋಟ ಸಖತ್ ಕಾಂಬಿನೇಷನ್ ಆಗಿರುತ್ತೆ, ಇದನ್ನ ಲಂಚ್‌ಬಾಕ್ಸ್‌ಗೂ ಕೂಡ ಹಾಕಬಹುದು

ನೈಸರ್ಗಿಕ ಸಿಹಿಕಾರಕವಾಗಿರುವ ಜೇನುತುಪ್ಪದ ಪ್ರಯೋಜನಗಳು ಹಲವು

freepik