ಮನೆಯಲ್ಲೇ ಮೃದು ರೋಟಿ ತಯಾರಿಸಬೇಕೆ? ಈ ಟಿಪ್ಸ್ ಗೊತ್ತಿರಲಿ
By Reshma
Jun 27, 2024
Hindustan Times
Kannada
ಮೃದುವಾದ ರೋಟಿ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಎಲ್ಲರಿಗೂ ಮನೆಯಲ್ಲಿ ಮೃದುವಾಗಿ ರೋಟಿ, ಚಪಾತಿ ಮಾಡಲು ಬರುವುದಿಲ್ಲ. ಅಂತಹವರಿಗಾಗಿ ಈ ಟಿಪ್ಸ್.
ಉತ್ತಮ ಗುಣಮಟ್ಟದ ಹಿಟ್ಟಿನಿಂದ ಚಪಾತಿ ಅಥವಾ ರೋಟಿ ತಯಾರಿಸಿದ್ರೆ ರುಚಿ, ಆಕಾರ ಎರಡೂ ಚೆನ್ನಾಗಿ ಬರುತ್ತದೆ. ಹಿಟ್ಟು ಚೆನ್ನಾಗಿಲ್ಲ ಅಂದ್ರು ಕೆಲವೊಮ್ಮೆ ಚಪಾತಿ ಗಟ್ಟಿಯಾಗುತ್ತದೆ.
ಹಿಟ್ಟು ನಾದುವ ವಿಧದಲ್ಲೂ ಚಪಾತಿ ಮೃದುವಾಗುವುದು ಅವಲಂಬಿಸಿರುತ್ತದೆ. ಅದಕ್ಕಾಗಿ ಹದಕ್ಕೆ ತಕ್ಕಂತೆ ನೀರು ಬೆರೆಸಿ ನಾದಬೇಕು.
ಹಿಟ್ಟು ನಾದಿದ ಮೇಲೆ ಕನಿಷ್ಠ 15 ರಿಂದ 20 ನಿಮಿಷ ಬಿಡಬೇಕು. ನಂತರ ರೋಲ್ ಮಾಡಿಕೊಂಡು ಉಂಡೆ ಮಾಡಬೇಕು.
ಚಪಾತಿ ಲಟ್ಟಿಸುವುದು ಕೂಡ ಕಲೆ, ಲಟ್ಟಿಸುವಾಗ ಎಲ್ಲಾ ಕಡೆ ಒಂದೇ ಹದಕ್ಕೆ ಬರುವಂತೆ ನೋಡಿಕೊಳ್ಳಬೇಕು.
ಮೊದಲು ಕಡಿಮೆ ಉರಿಯಲ್ಲಿ ಎರಡೂ ಕಡೆ ಬೇಯಿಸಿಕೊಂಡು ನಂತರ ದೊಡ್ಡ ಉರಿಯಲ್ಲಿ ಕಾಯಿಸಬೇಕು.
ನಂತರ ಎಣ್ಣೆ ಅಥವಾ ತುಪ್ಪ ಸವರಬಹುದು.
ಚಪಾತಿ ಕಾಯಿಸುವಾಗ ತವಾವನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು. ಒಂದು ಕಡೆ ಕಾಯಿಸಿ ಗುಳ್ಳೆ ಬರಲು ಆರಂಭಿಸಿದಾಗ ಇನ್ನೊಂದು ಕಡೆ ಕಾಯಿಸಬೇಕು.
ಅಸಲಿ, ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ