ಮ್ಯಾಂಗೋ ಜುಲೇಪ್: ಮಾವಿನಕಾಯಿಯಿಂದ ತಯಾರಿಸುವ ಪಾನೀಯ ಇದಾಗಿದ್ದು, ಮಾವಿನಕಾಯಿಯ ತಿರುಳನ್ನು ಕುದಿಸಿ ಇದಕ್ಕೆ ಉಪ್ಪು, ಸಕ್ಕರೆ, ಜೀರಿಗೆ, ಪುದಿನಾ ಸೇರಿಸಿ ತಯಾರಿಸಲಾಗುತ್ತದೆ.
ಮಾವಿನಹಣ್ಣಿನಿಂದ ರುಚಿಯಾದ ಪಾಯಸವನ್ನೂ ತಯಾರಿಸಬಹುದು. ಇದಕ್ಕೆ ನಿಮಗೆ ಹೆಚ್ಚು ಸಾಮಗ್ರಿಗಳ ಅವಶ್ಯಕತೆಯೂ ಇಲ್ಲ. ಸಕ್ಕರೆ, ತುಪ್ಪ, ಬೆಲ್ಲ, ಗೊಡಂಬಿ, ದ್ರಾಕ್ಷಿ ಇಷ್ಟಿದ್ದರೆ ಮಾವಿನಹಣ್ಣಿನ ಪಾಯಸ ತಿನ್ನಲು ಸಿದ್ಧ.
ಮಾವಿನ ನಿಂಬೆ ಪಾನಕ: ಮಾವಿನಹಣ್ಣು ಹಾಗೂ ಮಾವಿನ ಕಾಯಿ ಸೇರಿಸಿ ಅದರಿಂದ ಪ್ಯೂರಿ ತಯಾರಿಸಿ ಇದಕ್ಕೆ ನೀರು, ನಿಂಬೆರಸ, ಜೇನುತುಪ್ಪ ಸೇರಿಸಿ ರುಚಿಯಾದ ನಿಂಬೆ ಪಾನಕ ತಯಾರಿಸಿದರೆ ಅದರ ರುಚಿಗೆ ಎಲ್ಲರೂ ಫಿದಾ ಆಗುತ್ತಾರೆ.
ಬಿಸಿಲು ಮಳೆಯ ಈ ವಾತಾವರಣಕ್ಕೆ ಹೇಳಿ ಮಾಡಿಸಿದ್ದು ಮ್ಯಾಂಗೋ ಕುಲ್ಫಿ. ಮ್ಯಾಂಗೋ ಕುಲ್ಫಿ ಮಕ್ಕಳಿಗೆ ಸಖತ್ ಇಷ್ಟ ಆಗುತ್ತೆ.
ಮಾವಿನಹಣ್ಣಿನ ಪೂರಿ ಮಾವಿನ ಸೀಸನ್‌ನ ಸ್ಪೆಷಲ್ ರೆಸಿಪಿ. ಗೋಧಿ ಅಥವಾ ಮೈದಾಹಿಟ್ಟಿನೊಂದಿಗೆ ಮಾವಿನಹಣ್ಣಿನ ತಿರುಳು ಸೇರಿಸಿ ನಾದಿ ತಯಾರಿಸಿದ ಪೂರಿ ಸಖತ್ ಟೇಸ್ಟಿ.
ಮಾವಿನ ಪುಡ್ಡಿಂಗ್ ಕೂಡ ಬಹಳ ವಿಶೇಷ ರೆಸಿಪಿ. ಹಾಲು, ಸಕ್ಕರೆ, ತುಪ್ಪು, ಮಾವಿನಹಣ್ಣು ಇದನ್ನೆಲ್ಲಾ ಸೇರಿಸಿ ತಯಾರಿಸಬಹುದಾದ ರೆಸಿಪಿ ಇದು.
ಮಾವಿನಹಣ್ಣಿನ ರಾಯತ ಕೂಡ ಬಿಸಿಲು ಮಳೆ ಇರುವ ವಾತಾವರಣಕ್ಕೆ ಹೇಳಿ ಮಾಡಿಸಿದ್ದು. ಮೊಸರು, ಮಾವಿನಕಾಯಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಗೂ ಸ್ವಲ್ಪ ಖಾರದಪುಡಿ ಸೇರಿಸಿ ತಯಾರಿಸುವ ರಾಯತದ ರುಚಿಯನ್ನು ಸವಿದೇ ನೋಡಬೇಕು.