ಬೇಸಿಗೆಯ ದಾಹ ತಣಿಯಲು ಮೊಸರಿನಿಂದ ತಯಾರಿಸಬಹುದಾದ 5 ವಿಶೇಷ ಪಾನೀಯಗಳಿವು
By Reshma May 09, 2024
Hindustan Times Kannada
ಬೇಸಿಗೆಯಲ್ಲಿ ಮೊಸರು ಅಥವಾ ಮಜ್ಜಿಗೆ ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.
ಮೊಸರು ಅಥವಾ ಮಜ್ಜಿಗೆ ತಿನ್ನುವುದರಿಂದ ಹೊಟ್ಟೆಯ ಆರೋಗ್ಯ ಸುಧಾರಿಸುತ್ತದೆ. ಇದು ದೇಹದ ಉಷ್ಣತೆ ಕಡಿಮೆ ಮಾಡಲು ಸಹಕಾರಿ.
ಕೆಲವರು ಮೊಸರಿಗಿಂತ ಮಜ್ಜಿಗೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಈ ಬೇಸಿಗೆಗೆ ಬೆಸ್ಟ್ ಎನ್ನಿಸುವ ಮಜ್ಜಿಗೆ ಹಾಗೂ ಮೊಸರಿನಿಂದ ತಯಾರಿಸಬಹುದಾದ 5 ಪಾನೀಯಗಳಿವು.
ಬೇಸಿಗೆಯಲ್ಲಿ ಸಾಮಾನ್ಯವಾಗಿ ನಿಂಬೆಪಾನೀಯವನ್ನು ಕುಡಿಯತ್ತಾರೆ. ಆದರೆ ನೀವು ಅದಕ್ಕೆ ಮಜ್ಜಿಗೆ ಸೇರಿಸುವ ಮೂಲಕ ಹೊಸ ರುಚಿ ತಯಾರಿಸಬಹುದು.
ಬೇಸಿಗೆಯಲ್ಲಿ ದೇಹ ತಂಪಾಗುವ ಪಾನೀಯಗಳನ್ನು ನೀವು ಹುಡುಕುತ್ತಿದ್ದರೆ ಇದು ನಿಮಗೆ ಬೆಸ್ಟ್. ಅದುವೇ ಸೌತೆಕಾಯಿ ಹಾಗೂ ಮಜ್ಜಿಗೆ ಸೇರಿಸಿ ತಯಾರಿಸಿದ ಪಾನೀಯ.
ಸೌತೆಕಾಯಿ ಸಿಪ್ಪೆ ತೆಗೆದು, ಚಿಕ್ಕದಾಗಿ ಹೆಚ್ಚಿ. ಅದಕ್ಕೆ ಹೆಚ್ಚಿದ ಪುದಿನಾಸೊಪ್ಪು, ನಿಂಬೆರಸ, ಉಪ್ಪು ಮತ್ತು ಮಜ್ಜಿಗೆ ಸೇರಿಸಿ ಚೆನ್ನಾಗಿ ಕಲೆಸಿ. ಇದನ್ನು ಗ್ಲಾಸ್‌ಗೆ ಸುರಿದು ಐಸ್‌ಕ್ಯೂಬ್ ಸೇರಿಸಿ ಕುಡಿಯಲು ಕೊಡಿ.
ಬೇಸಿಗೆ ಮಾವಿನಹಣ್ಣು ಹೇರಳವಾಗಿ ಸಿಗುವ ಕಾರಣ ಹಲವರು ಮ್ಯಾಂಗೊ ಶೇಕ್ ತಯಾರಿಸುತ್ತಾರೆ. ಮ್ಯಾಂಗೊಶೇಕ್‌ಗೆ ಹಾಲಿನ ಬದಲು ಮಜ್ಜಿಗೆ ಅಥವಾ ಮೊಸರು ಸೇರಿಸಿ. ಇದು ಹೊಸ ರುಚಿ ನೀಡುತ್ತದೆ
ಸ್ಟ್ರಾಬೆರಿ ಹಣ್ಣಿನ ಸ್ಮೂಥಿ ತಯಾರಿಸುವಾಗ ಅದಕ್ಕೆ ಮಜ್ಜಿಗೆ ತಯಾರಿಸಿ ಹೊಸ ರುಚಿ ನೀಡಬಹುದು.
ಬ್ಲೆಂಡರ್‌ನಲ್ಲಿ ಮಜ್ಜಿಗೆ, ತಾಜಾ ಸ್ಟ್ರಾಬೆರಿ, ಬಾಳೆಹಣ್ಣು, ಜೇನುತುಪ್ಪ ಸೇರಿಸಿ ರುಬ್ಬಿ, ಇದಕ್ಕೆ ಐಸ್‌ಕ್ಯೂಬ್ ಸೇರಿಸಿ. ಈಗ ನಿಮ್ಮ ಮುಂದೆ ರುಚಿಯಾದ ಮಜ್ಜಿಗೆ, ಸ್ಟ್ರಾಬೆರಿ ಸ್ಮೂಥಿ ತಯಾರಾಗುತ್ತದೆ.