ಈರುಳ್ಳಿ ಚಟ್ನಿ ಈ ರೀತಿ ಮಾಡಿದ್ರೆ ಸಖತ್‌ ಟೇಸ್ಟಿ ಆಗಿರುತ್ತೆ

By Reshma
Jun 17, 2024

Hindustan Times
Kannada

ಪ್ರತಿನಿತ್ಯ ಒಂದೇ ರೀತಿ ಚಟ್ನಿ ತಿಂದು ಬೇಸರ ಆಗಿದ್ರೆ ಸ್ಪೆಷಲ್‌ ಆಗಿ ಈರುಳ್ಳಿ ಚಟ್ನಿ ಟ್ರೈ ಮಾಡಿ. ಇದು ದೋಸೆ, ಇಡ್ಲಿಗೆ ಮಾತ್ರವಲ್ಲ ಅನ್ನಕ್ಕೂ ಹೊಂದುತ್ತೆ. 

ಈರುಳ್ಳಿ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ಇದರಲ್ಲಿ ಅಗತ್ಯ ಪೋಷಕಾಂಶಗಳು ಇರುವ ಕಾರಣಕ್ಕೆ ಈರುಳ್ಳಿಯನ್ನು ಪ್ರತಿನಿತ್ಯ ಸೇವಿಸಬೇಕು ತಜ್ಞರು ಸಲಹೆ ನೀಡುತ್ತಾರೆ. 

ಹಾಗಾಗಿ ಈ ಈರುಳ್ಳಿ ಚಟ್ನಿಯನ್ನು ಒಮ್ಮೆ ಮಾಡಿಟ್ಟುಕೊಂಡರೆ ಎರಡು ತಿಂಗಳವರೆಗೆ ಬಳಸಬಹುದು. ಇದನ್ನು ಹೇಗೆ ತಯಾರಿಸೋದು ನೋಡಿ. 

ಈರುಳ್ಳಿ ಚಟ್ನಿಗೆ ಬೇಕಾಗುವ ಸಾಮಗ್ರಿಗಳು: ಈರುಳ್ಳಿ - ಅರ್ಧ ಕೆಜಿ, ಹುಣಸೆಹಣ್ಣು - ಸುಮಾರು ನಿಂಬೆಹಣ್ಣಿನ ಗಾತ್ರದ್ದು, ಜೀರಿಗೆ - 1 ಚಮಚ, ಸಾಸಿವೆ - 1 ಚಮಚ, ಮೆಂತ್ಯೆ - 1 ಚಮಚ, ಎಣ್ಣೆ - 1 ಕಪ್, ಕಾಳುಮೆಣಸು - ಐದು, ಬೆಳ್ಳುಳ್ಳಿ ಎಸಳು - 15, ಅರಿಶಿನ - ಒಂದು ಚಮಚ, ಖಾರದಪುಡಿ - 5 ಚಮಚ, ಉಪ್ಪು - ರುಚಿಗೆ, ಕೊತ್ತಂಬರಿ ಕಾಳು -1 ಚಮಚ 

ಈರುಳ್ಳಿ ಪಚಡಿ ಮಾಡಲು ಮೊದಲು ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿ, ದಪ್ಪ ಪೇಸ್ಟ್ ಮಾಡಿ ಪಕ್ಕಕ್ಕೆ ಇಡಿ. ಈಗ ಒಲೆಯ ಮೇಲೆ ಬಾಣಲೆ ಇಟ್ಟು ಸಾಸಿವೆ, ಮೆಂತ್ಯ, ಕೊತ್ತಂಬರಿ ಮತ್ತು ಜೀರಿಗೆಯನ್ನು ಹುರಿದುಕೊಳ್ಳಿ. ಅವುಗಳನ್ನು ಮಿಕ್ಸರ್‌ ಜಾರ್‌ನಲ್ಲಿ ನುಣ್ಣಗೆ ರುಬ್ಬಿಕೊಂಡು ಪಕ್ಕಕ್ಕೆ ಇರಿಸಿಕೊಳ್ಳಿ. 

ಈಗ ಅದೇ ಬಾಣಲೆಯಲ್ಲಿ ಒಂದು ಕಪ್ ಎಣ್ಣೆ ಹಾಕಿ ಸಾಸಿವೆ ಮತ್ತು ಜೀರಿಗೆಯನ್ನು ಹುರಿಯಿರಿ. ನಂತರ ಕರಿಮೆಣಸು ಸೇರಿಸಿ ಫ್ರೈ ಮಾಡಿ. ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳು ಸೇರಿಸಿ ಕೈಯಾಡಿಸಿ. ನಂತರ ಲಂಬವಾಗಿ ಕತ್ತರಿಸಿದ ಈರುಳ್ಳಿ ಚೂರುಗಳನ್ನು ಸೇರಿಸಿ ಮತ್ತು ಅವು ಮೃದುವಾಗುವವರೆಗೆ ಹುರಿದುಕೊಳ್ಳಿ. ಈರುಳ್ಳಿ ಮೃದುವಾದಾಗ ಉರಿ ಕಡಿಮೆ ಮಾಡಿ. 

ಅದಕ್ಕೆ ಉಪ್ಪು, ಖಾರದಪುಡಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಪುಡಿ ಮಾಡಿಟ್ಟುಕೊಂಡು ಮಿಶ್ರಣ ಸೇರಿಸಿ. ನಂತರ ದಪ್ಪ ಹುಣಸೆ ಹಣ್ಣಿನ ರಸ ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಕಡಿಮೆ ಉರಿಯಲ್ಲಿ ಇರಿಸಿ, ಎಣ್ಣೆ ಮೇಲೆ ತೇಲುವವರೆಗೆ ಇರಿಸಿ. ಎಣ್ಣೆ ಮೇಲಕ್ಕೆ ತೇಲಿದರೆ, ನಂತರ ಪೇಸ್ಟ್ ಸಿದ್ಧವಾಗಿದೆ ಎಂದರ್ಥ. 

ಇದನ್ನು ಗಾಳಿಯಾಡದ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ. ಹೊರಗೆ ಇಟ್ಟರೆ ಹತ್ತು ದಿನ ಫ್ರೆಶ್ ಆಗಿರುತ್ತದೆ. ಇದೇ ಈರುಳ್ಳಿ ಚಟ್ನಿ ತಿಂಗಳಿನಿಂದ ಎರಡು ತಿಂಗಳು ತಾಜಾವಾಗಿರಲು, ಅದನ್ನು ಫ್ರಿಜ್‌ನಲ್ಲಿ ಇಡಬೇಕು. 

ಖಾಸಗಿ ಜೆಟ್ ಹೊಂದಿರುವ ಭಾರತೀಯ ಕ್ರಿಕೆಟಿಗರು