ಬೂಂದಿಯಿಂದ ಇಷ್ಟೆಲ್ಲಾ ಖಾದ್ಯಗಳನ್ನು ತಯಾರಿಸಬಹುದು ಅಂದ್ರೆ ನಂಬ್ತೀರಾ

By Reshma
Jun 11, 2024

Hindustan Times
Kannada

ಬೂಂದಿ ಕಡಲೆಹಿಟ್ಟಿನಿಂದ ತಯಾರಾಗುವ ಖಾದ್ಯ. ಇದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಬಿಸಿಬೇಳೆ ಬಾತ್‌ ಸೇರಿದಂತೆ ವಿವಿಧ ಭಕ್ಷ್ಯಗಳ ಜೊತೆ ಇದನ್ನು ಸವಿಯುತ್ತಾರೆ. ಬೂಂದಿಯನ್ನು ಯಾವೆಲ್ಲಾ ಖಾದ್ಯಗಳ ಜೊತೆ ಬಳಸಬಹುದು ನೋಡಿ. 

ಬೂಂದಿ ಮಸಾಲಾ: ಬೂಂದಿ ಮಸಾಲ ಸುಲಭವಾಗಿ ತಯಾರಿಸುವ ಖಾದ್ಯವಾಗಿದ್ದು, ಈರುಳ್ಳಿ, ಟೊಮೆಟೊ, ಮಸಾಲೆಗಳೊಂದಿಗೆ ಬೂಂದಿಯನ್ನು ಹುರಿದು ತಯಾರಿಸಲಾಗುತ್ತದೆ. ಇದನ್ನು ಬಿಸಿ ಚಪಾತಿ ಜೊತೆ ತಿನ್ನಲು ಸೂಕ್ತ ಎನ್ನಿಸುತ್ತದೆ. 

ಬೂಂದಿ ರಾಯಿತ: ತಾಜಾ ಮೊಸರಿನೊಂದಿಗೆ ಬೂಂದಿ, ಜೀರಿಗೆ, ಉಪ್ಪು, ಖಾರದಪುಡಿ ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ಅದ್ಭುತ ರುಚಿಯ ಬೂಂದಿ ರಾಯಿತ ತಯಾರಿಸಬಹುದು. 

ಬೂಂದಿ ಭೇಲ್‌: ಸಂಜೆಯ ಸ್ಯ್ನಾಕ್ಸ್‌ಗೆ ಬೂಂದಿ ಭೇಲ್‌ ಹೇಳಿ ಮಾಡಿಸಿದ್ದು. ಬೂಂದಿಯನ್ನು ಮಂಡಕ್ಕಿ ಜೊತೆ ಬೆರೆಸಿ ವಿವಿಧ ತರಕಾರಿಗಳನ್ನು ಹೆಚ್ಚಿ ಹಾಕಿ. ಮೇಲೆ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿ. 

ಬೂಂದಿ ಡೆಸರ್ಟ್‌: ಬೂಂದಿಯನ್ನು ಐಸ್‌ಕ್ರೀಮ್‌ ಮತ್ತು ಕೇಕ್‌ನಂತಹ ಸಿಹಿತಿಂಡಿಗಳ ಜೊತೆ ಬಳಸಲಾಗುತ್ತದೆ. ಇದು ತಿನಿಸುಗಳಿಗೆ ಭಿನ್ನ ವಿನ್ಯಾಸ ಹಾಗೂ ರುಚಿ ನೀಡುವಂತೆ ಮಾಡುತ್ತದೆ. 

ಬೂಂದಿ ಕಢಿ: ಬೂಂದಿ ಕಢಿ ಮೊಸರು, ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಸೇರಿಸಿ ಗ್ರೇವಿ ರೂಪದಲ್ಲಿ ತಯಾರಿಸುವ ಖಾದ್ಯ ಇದಾಗಿದೆ. ಇದನ್ನು ಅನ್ನ ಹಾಗೂ ಚಪಾತಿಯೊಂದಿಗೆ ತಿನ್ನಲು ಯೋಗ್ಯವಾಗಿರುತ್ತದೆ. 

ಬೂಂದಿ ಪಲಾವ್‌: ಬೂಂದಿ ಪಲಾವ್‌ನ ರುಚಿ ಸಖತ್‌ ಆಗಿರುತ್ತೆ. ತರಕಾರಿ, ಈರುಳ್ಳಿ, ಮಸಾಲೆಗಳನ್ನು ಸೇರಿಸಿ ತಯಾರಿಸಿದ ಪಲಾವ್‌ ಡಿಫ್ರೆಂಟ್‌ ಟೇಸ್ಟ್‌ ಇರುತ್ತೆ. 

ಬೂಂದಿ ಸಲಾಡ್‌: ಬೂಂಡಿ ಸಲಾಡ್‌ ಭಿನ್ನ ರುಚಿ ಹೊಂದಿರುತ್ತದೆ. ಸೌತೆಕಾಯಿ, ಕ್ಯಾರೆಟ್‌, ಟೊಮೆಟೊ, ಚಾಟ್‌ ಮಸಾಲೆ ಸೇರಿಸಿ ತಯಾರಿಸುವ ಈ ಸಲಾಡ್‌ನ ರುಚಿಗೆ ಸಾಟಿಯಿಲ್ಲ. 

ಬೂಂದಿ ಚಾಟ್‌: ಈರುಳ್ಳಿ, ಟೊಮೆಟೊ, ಬೇಯಿಸಿದ ಆಲೂಗೆಡ್ಡೆ, ಹುಣಸೆಹಣ್ಣಿನ ಚಟ್ನಿ ಈ ಎಲ್ಲವನ್ನೂ ಬೆರೆಸಿ ತಯಾರಿಸಿದ ಬೂಂದಿ ಚಾಟ್‌ ಮಳೆಗಾಲಕ್ಕೆ ಹೇಳಿ ಮಾಡಿಸಿದ್ದು. 

ರಶ್ಮಿಕಾ ಮಂದಣ್ಣರ ಹೊಸ ಕ್ಯೂಟ್‌ ಫೋಟೋಗಳು ವೈರಲ್‌

AFP