ಬಾಲಿವುಡ್‌ ಸಿನಿಮಾ, ಹಾಡುಗಳಲ್ಲಿ ಖ್ಯಾತಿ ಪಡೆದ ಭಾರತದ ಆಹಾರ ಖಾದ್ಯಗಳಿವು 

By Reshma
Jun 09, 2024

Hindustan Times
Kannada

ಬಾಲಿವುಡ್‌ ಸಿನಿಮಾಗಳಿಗೂ ಆಹಾರ ಖಾದ್ಯಗಳಿಗೂ ಬಿಡಿಸಲಾಗದ ನಂಟು. ಇಲ್ಲಿನ ಸಿನಿಮಾಗಳಲ್ಲಿ ಬರುವ ಪಾತ್ರಗಳು, ಹಾಡುಗಳು ಹಾಗೂ ಕಥಾವಸ್ತುಗಳು ಆಹಾರ ಖಾದ್ಯಗಳ ಸುತ್ತಲೂ ಸುತ್ತುತ್ತವೆ. ಬಾಲಿವುಡ್‌ ಸಿನಿಮಾಗಳಲ್ಲಿ ಖ್ಯಾತಿ ಪಡೆದ 8 ಆಹಾರ ಖಾದ್ಯಗಳ ಬಗ್ಗೆ ತಿಳಿಯೋಣ. 

ಲೌಕಿ (ಪಂಚಾಯತ್‌): ಪಂಚಾಯತ್‌ ವೆಬ್‌ಸರಣಿಯಲ್ಲಿ ಲೌಕಿ (ಸೋರೆಕಾಯಿ) ಪ್ರಾಮುಖ್ಯ ಪಡೆದಿದೆ. ಪ್ರಮೋಷನ್‌ ಸಮಯದಲ್ಲೂ ಸೋರೆಕಾಯಿ ಬಳಸಿದ್ದು ಗಮನಿಸಿರಬಹುದು. 

ಬಟಾಟ ಮುಸ್ಲಂ (ತರ್ಲಾ): ತರ್ಲಾ ಮುಘಲೈ ಶೈಲಿಯ ಆಲೂಗೆಡ್ಡೆ ಖಾದ್ಯದ ಹೆಸರಾಗಿದೆ. 2023 ರಲ್ಲಿ ತರ್ಲಾ ಹೆಸರಿನ ಸಿನಿಮಾ ಬಿಡುಗಡೆ ಆಗಿತ್ತು. ಹುಮಾ ಖುರೇಷಿ ತರ್ಲಾ ದಲಾಲ್‌ ಪಾತ್ರದಲ್ಲಿ ನಟಿಸಿದ್ದರು. 

ಲಡ್ಡೂ (ರಾಕಿ ರಾಣಿ ಕಿ ಪ್ರೇಮ್‌ ಕಹಾನಿ): ರಣವೀರ್‌ ಸಿಂಗ್‌ ಹಾಗೂ ಆಲಿಯಾ ಭಟ್‌ ನಟನೆಯ ರಾಕಿ ರಾಣಿ ಕಿ ಪ್ರೇಮ್‌ ಕಹಾನಿ ಸಿನಿಮಾದಲ್ಲಿ ರಣವೀರ್‌ ಅಜ್ಜಿ ವಿಶೇಷವಾದ ಲಡ್ಡು ತಯಾರಿಸುತ್ತಾರೆ. 

ಪಾನಿಪುರಿ (ರಬ್‌ ನೇ ಬನಾದಿ ಜೋಡಿ): ಫೇಮಸ್‌ ಸ್ಟ್ರೀಟ್‌ ಫುಡ್‌ ಆಗಿರುವ ಪಾನಿಪುರಿಯನ್ನು ಶಾರುಖ್‌ ಖಾನ್‌, ಅನುಷ್ಕಾ ಶರ್ಮಾ ನಟನೆಯ ರಬ್‌ ನೇ ಬನಾದಿ ಜೋಡಿ ಸಿನಿಮಾದಲ್ಲಿ ಹೈಲೈಟ್‌ ಮಾಡಲಾಗಿತ್ತು. 

ಚಿಕನ್‌ (ಬಜರಂಗಿ ಭಾಯಿಜಾನ್‌): ಚಿಕನ್‌ ಕುಕ್‌-ಡು-ಕೂ ಸಲ್ಮಾನ್‌ ಖಾನ್‌ ನಟನೆಯ ಬಜರಂಗಿ ಭಾಯಿಜಾನ್‌ ಚಿತ್ರದಲ್ಲಿನ ಟ್ರೆಂಡಿಂಗ್‌ ಹಾಡಾಗಿತ್ತು.

ಬರ್ಫಿ: ರಣಬೀರ್‌ ಕಪೂರ್‌ ಮತ್ತು ಪ್ರಿಯಾಂಕ ಚೋಪ್ರಾ ನಟನೆಯ ಸಿನಿಮಾದ ಹೆಸರೇ ಬರ್ಫಿ. 2021ರಲ್ಲಿ ಬಿಡುಗಡೆಯಾದ ಸಿನಿಮಾ ಇದಾಗಿದೆ. 

ಮಲೈ ಕೋಪ್ತಾ (ದಿ ಲಂಚ್‌ ಬಾಕ್ಸ್‌): ಇರ್ಫಾನ್‌ ಖಾನ್‌ ನಟನೆಯ ದಿ ಲಂಚ್‌ ಬಾಕ್ಸ್‌ ಸಿನಿಮಾದಲ್ಲಿ ಮಲೈ ಕೋಫ್ತಾಗೆ ವಿಶೇಷ ಪ್ರಾಧಾನ್ಯ ಪಡೆದಿತ್ತು. 

ಜಿಲೇಬಿ (ಫ್ಯಾಂಟಮ್‌): ಸೈಫ್‌ ಅಲಿ ಖಾನ್‌ ನಟನೆಯ ಸೈಫ್‌ ಅಲಿ ಖಾನ್‌ ನಟನೆಯ ಫ್ಯಾಂಟಮ್‌ ಚಿತ್ರದಲ್ಲಿ ಜಿಲೇಬಿಯನ್ನು ಖ್ಯಾತಿಗೊಳಿಸಲಾಗಿತ್ತು. 

ಎಂಎಸ್ ಧೋನಿ ವಿಶ್ವದಾಖಲೆ ಮುರಿದ ಬಾಬರ್ ಅಜಮ್