ಸಖತ್‌ ಟೇಸ್ಟಿ ಆಗಿರೋ ಲೆಮನ್‌ ಕೊಕೊನಟ್‌ ರೈಸ್‌ ರೆಸಿಪಿ ಇಲ್ಲಿದೆ 

By Reshma
Jun 11, 2024

Hindustan Times
Kannada

ಮಳೆಗಾಲದಲ್ಲಿ ಹೊರಗಡೆ ಹೋಗೋಕೆ ಹಿಂಸೆ. ಹಾಗಂತ ಮನೆಯಲ್ಲೇ ಕೂತು ಒಂದೇ ರೀತಿಯ ಖಾದ್ಯಗಳನ್ನು ಸೇವಿಸಿದ್ರೆ ನಾಲಿಗೆಗೆ ಬೇಸರ ಬರುತ್ತೆ. ಹಾಗಿದ್ರೆ ನೀವು ಡಿಫ್ರೆಂಟ್‌ ಆಗಿ ಲೆಮನ್‌ ಕೊಕೊನಟ್‌ ರೈಸ್‌ ಮಾಡಿ ತಿನ್ನಿ. 

ಬಾಸುಮತಿ ಅಕ್ಕಿ - 1 ಕಪ್‌, ತೆಂಗಿನೆಣ್ಣೆ - 2ಚಮಚ, ಸಾಸಿವೆ - 1 ಚಮಚ, ಉದ್ದಿನಬೇಳೆ - 1ಚಮಚ, ಕಡಲೆಬೇಳೆ - 1 ಚಮಚ, ಒಣಮೆಣಸು - 2, ಕರಿಬೇವು - 8, ತೆಂಗಿನತುರಿ - 1/4 ಕಪ್‌, ಶೇಂಗಾಬೀಜ - 3 ರಿಂದ 4 ಚಮಚ, ಶುಂಠಿ ತುರಿ - 1 ಚಮಚ, ಹಸಿಮೆಣಸು - 4, ಅರಿಸಿನ ಪುಡಿ - 1/4 ಚಮಚ, ಉಪ್ಪು - ರುಚಿಗೆ, ನಿಂಬೆ ರಸ - 2 ಚಮಚ, ಕೊತ್ತಂಬರಿ ಸೊಪ್ಪು - ಸ್ವಲ್ಪ 

ತಯಾರಿಸುವ ವಿಧಾನ: ಅಕ್ಕಿ ಮುಳುಗುವಷ್ಟು ನೀರು ಹಾಕಿ ಅದನ್ನು 15 ರಿಂದ 20 ನಿಮಿಷ ನೆನೆಸಿಡಿ. ನಂತರ ಚೆನ್ನಾಗಿ ತೊಳೆದು ಅಕ್ಕಿಯನ್ನು ಒಂದೆಡೆ ಇರಿಸಿ. 

ಅಗಲವಾದ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ ಸೇರಿಸಿ ಸಿಡಿಯಲು ಬಿಡಿ.

ನಂತರ ಉದ್ದಿನಬೇಳೆ, ಕಡಲೆಬೇಳೆ, ಒಣಮೆಣಸು ಹಾಗೂ ಕರಿಬೇವು ಸೇರಿಸಿ. ಈ ಎಲ್ಲವನ್ನೂ ಕೆಂಬಣ್ಣ ಬರುವವರೆಗೂ ಹುರಿಯಿರಿ. 

ಅದಕ್ಕೆ ತೆಂಗಿನತುರಿ ಸೇರಿಸಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಅದಕ್ಕೆ ತುರಿದ ಶುಂಠಿ, ಹಸಿಮೆಣಸು ಸೇರಿಸಿ ಶುಂಠಿ ಹಸಿವಾಸನೆ ಹೋಗುವವರೆಗೂ ಹುರಿದುಕೊಳ್ಳಿ.

ನಂತರ ತೊಳೆದಿಟ್ಟು ಅಕ್ಕಿ ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಅರಿಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. 

ಆ ಪಾತ್ರೆಗೆ 2 ಕಪ್‌ ನೀರು ಸೇರಿಸಿ ಒಂದು ಕುದಿ ಬರಿಸಿ. ನಂತರ ಹೀಟ್‌ ಕಡಿಮೆ ಮಾಡಿ ಪಾತ್ರೆಗೆ ಮುಚ್ಚಳ ಮುಚ್ಚಿ. ಅದನ್ನು 15 ರಿಂದ 20 ನಿಮಿಷ ಕುದಿಸಿ. ನೀರು ಚೆನ್ನಾಗಿ ಆರಬೇಕು. 

ಈ ಕೊಕೊನಟ್‌ ರೈಸ್‌ ಚೆನ್ನಾಗಿ ಬೆಂದು ನೀರು ಆರಿದ ಮೇಲೆ ನಿಂಬೆರಸ ಹಿಂಡಿ. ಕೊತ್ತಂಬರಿ ಸೊಪ್ಪ ಸೇರಿಸಿ ಅಲಂಕರಿಸಿ.  

ನಿವೇದಿತಾ ಗೌಡ ಅವತಾರ ಕಂಡು ‘ಕಾಮೆಂಟ್ ಹಾಕೋಕು ಅಸಹ್ಯ ಆಗ್ತಿದೆ’ ಎಂದ ನೆಟ್ಟಿಗರು