ಮಿಕ್ಕಿರುವ ಚಪಾತಿ, ರೋಟಿಯಿಂದ ಇಷ್ಟೆಲ್ಲಾ ತಿಂಡಿಗಳನ್ನು ಮಾಡಬಹುದು ನೋಡಿ 

By Reshma
Jul 14, 2024

Hindustan Times
Kannada

ಪ್ರತಿದಿನ ಚಪಾತಿ ಮಿಕ್ಕುತ್ತೆ, ಉಳಿದ ಚಪಾತಿಯನ್ನ ವೇಸ್ಟ್‌ ಮಾಡೋಕು ಬೇಸರ ಅನ್ನೋರ ಲಿಸ್ಟ್‌ನಲ್ಲಿ ನೀವೂ ಇದ್ರೆ, ಚಿಂತೆ ಬಿಡಿ. ಇದರಿಂದ ಯಾವೆಲ್ಲಾ ರುಚಿಕರವಾದ ಬೆಳಗಿನ ಉಪಾಹಾರ ತಯಾರಿಸಬಹುದು ನೋಡಿ.

ಚಪಾತಿ ಹಿಟ್ಟಿಗೆ ಈರುಳ್ಳಿ, ಕ್ಯಾಬೇಜ್‌, ಹಸಿಮೆಣಸು, ಅಜ್ವಾನಾ ಸೇರಿಸಿ ರೋಟಿ ಚೀಲಾ ತಯಾರಿಸಿ. ಚೀಲಾ ಎನ್ನುವುದು ಉತ್ತರ ಭಾರತದ ಪ್ರಸಿದ್ಧ ಉಪಾಹಾರ ಖಾದ್ಯವಾಗಿದೆ. ಇದರ ರುಚಿಯು ಭಿನ್ನವಾಗಿರುತ್ತದೆ. 

ರೋಟಿ ಪೋಹಾ: ರೋಟಿ ಅಥವಾ ಚಪಾತಿಯನ್ನು ಸಣ್ಣದಾಗಿ ಕತ್ತರಿಸಿ, ಇದಕ್ಕೆ ಒಗ್ಗರಣೆ ಕೊಟ್ಟು ರೋಟಿ ಅವಲಕ್ಕಿ ತಯಾರಿಸಬಹುದು.

ರೋಟಿ ಉಪ್ಪಿಟ್ಟು: ರೋಟಿ ಅಥವಾ ಚಪಾತಿಯನ್ನು ಚಿಕ್ಕದಾಗಿ ಕತ್ತರಿಸಿ. ಈರುಳ್ಳಿ, ಟೊಮೆಟೊ, ಹಸಿಮೆಣಸು ಫ್ರೈ ಮಾಡಿಕೊಳ್ಳಿ. ಈ ಎಲ್ಲವೂ ಬೆಂದ ನಂತರ ಕತ್ತರಿಸಿಟ್ಟುಕೊಂಡು ರೋಟಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿ ಅಲಂಕರಿಸಿ. 

ರೋಟಿ ಸ್ಯಾಂಡ್‌ವಿಚ್‌: ಮಿಕ್ಕಿದ ರೊಟ್ಟಿಯನ್ನು ತೆಗೆದುಕೊಂಡು ಅದರ ಮೇಲೆ ಸಾಸ್‌ ಹರಡಿ ಬೇಯಿಸಿ. ಇದರ ಮೇಲೆ ಬೇಯಿಸಿದ ಆಲೂಗೆಡ್ಡೆ ಹಾಗೂ ತರಕಾರಿಗಳನ್ನು ಇಟ್ಟು ಮಡಿಸಿ. ಈಗ ನಿಮ್ಮ ಮುಂದೆ ರುಚಿಯಾದ ರೋಟಿ ಸ್ಯಾಂಡ್‌ವಿಚ್‌ ತಿನ್ನಲು ಸಿದ್ಧ. 

ರೋಟಿ ಚೂರ್ಮಾ ಲಡ್ಡು: ರೋಟಿಯನ್ನು ಚೆನ್ನಾಗಿ ಬೇಯಿಸಿ, ಅದು ಕ್ರಿಪ್ಸಿಯಾದ ನಂತರ ಮಿಕ್ಸಿಯಲ್ಲಿ ಪುಡಿ ಮಾಡಿ. ಆ ಪುಡಿಗೆ ಬೆಲ್ಲದ ಪಾಕ ಹಾಗೂ ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಉಂಡೆ ಕಟ್ಟಿ.

ಡಕೌಟ್​ನಲ್ಲಿ ರೋಹಿತ್​ ದಾಖಲೆ ಮುರಿದ ಗ್ಲೆನ್ ಮ್ಯಾಕ್ಸ್​ವೆಲ್