ನವರಾತ್ರಿ ಸ್ಪೆಷಲ್ ರುಚಿಕರವಾದ ಸಬ್ಬಕ್ಕಿ ತಾಲಿಪಟ್ಟು ಮಾಡುವ ವಿಧಾನವಿದು

Pinterest

By Priyanka Gowda
Oct 08, 2024

Hindustan Times
Kannada

ಬೇಕಾಗುವ ಸಾಮಗ್ರಿಗಳು: ಸಬ್ಬಕ್ಕಿ- 2 ಕಪ್, ಆಲೂಗಡ್ಡೆ- 1, ಜೀರಿಗೆ ಪುಡಿ- ½ ಟೀ ಚಮಚ, ನಿಂಬೆರಸ, ಕೊತ್ತಂಬರಿ ಸೊಪ್ಪು, ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು, ತುಪ್ಪ.

ಮಾಡುವ ವಿಧಾನ: ಮೊದಲಿಗೆ ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು, ರಾತ್ರಿಯಿಡೀ ನೆನೆಯಲು ಬಿಡಿ. 

Pinterest

ಬೆಳಗ್ಗೆ ಕಡಲೆಕಾಯಿಯನ್ನು ಬಾಣಲೆಯಲ್ಲಿ ಹುರಿದು, ಒರಟಾಗಿ ಮಿಕ್ಸಿ ಜಾರಿನಲ್ಲಿ ಪುಡಿ ಮಾಡಿ. ಪಕ್ಕಕ್ಕೆ ಇರಿಸಿ.

Pexels

ಆಲೂಗಡ್ಡೆಯನ್ನು ತೊಳೆದು ಬೇಯಲು ಬಿಡಿ. ನಂತರ ಅದರ ಸಿಪ್ಪೆ ತೆಗೆದು ಆಲೂಗಡ್ಡೆಯನ್ನು ಮ್ಯಾಶ್ ಮಾಡಿ.

Pexels

ಹಿಸುಕಿದ ಆಲೂಗಡ್ಡೆಗೆ ನೆನೆಸಿದ ಸಬ್ಬಕ್ಕಿ, ಜೀರಿಗೆ ಪುಡಿ, ಹುರಿದ ಕಡಲೆ ಪುಡಿ, ಕೊತ್ತಂಬರಿ ಸೊಪ್ಪು, ನಿಂಬೆ ರಸ, ಉಪ್ಪು, ಸಕ್ಕರೆ ಸೇರಿಸಿ ಮಿಶ್ರಣ ಮಾಡಿ, ಹಿಟ್ಟು ತಯಾರಿಸಿ.

Pinterest

ತಯಾರಾದ ಹಿಟ್ಟನ್ನು ಚಪಾತಿ ಉಂಡೆಯಂತೆ ತೆಗೆದುಕೊಂಡು ಬಟರ್ ಪೇಪರ್‌ನಲ್ಲಿ ರೊಟ್ಟಿ ತಟ್ಟುವಂತೆ ತಟ್ಟಿ.

Pinterest

ತವಾ ಬಿಸಿಯಾದ ಕೂಡಲೇ ಈ ಹಿಟ್ಟನ್ನು ಎರಡೂ ಬದಿಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ಬೇಕಿದ್ದರೆ ತುಪ್ಪ ಸೇರಿಸಿ ಬೇಯಿಸಬಹುದು.

Pinterest

ಗೋಲ್ಡನ್ ಬ್ರೌನ್ ಆದ ತಕ್ಷಣ ತೆಗೆದು ಮೊಸರು ಅಥವಾ ಚಟ್ನಿಯೊಂದಿಗೆ ಸಬ್ಬಕ್ಕಿ ತಾಲಿಪಟ್ಟನ್ನು ಬಿಸಿ ಬಿಸಿಯಾಗಿ ಬಡಿಸಿ.

freepik

ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು