ಸೋರೆಕಾಯಿ ಪಚಡಿ ರೆಸಿಪಿ: ಮಳೆಗಾಲದಲ್ಲಿ ಸವಿಯಲು ಇಷ್ಟವಾಗುತ್ತೆ
By Jayaraj
Jul 06, 2024
Hindustan Times
Kannada
ಸೋರೆಕಾಯಿಯಿಂದ ಬಗೆಬಗೆಯ ಖಾದ್ಯ ತಯಾರಿಸಬಹುದು. ಆದರೆ ಇದರಿಂದ ಚಟ್ನಿಯನ್ನೂ ಮಾಡಬಹುದು ಎಂಬುದು ನಿಮಗೆ ತಿಳಿದಿದ್ಯಾ. ಆಂಧ್ರ ಶೈಲಿಯಲ್ಲಿ ಇದರಿಂದ ಸಖತ್ತಾಗಿರೋ ಚಟ್ನಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು: ಉದ್ದಿನಬೇಳೆ - 2 ಚಮಚ, ಸೋರೆಕಾಯಿ - 2 ಕಪ್, ಎಳ್ಳು - 2 ಟೀ ಚಮಚ, ಬೆಳ್ಳುಳ್ಳಿ - 3 ರಿಂದ 4, ಹುಣಸೆಹಣ್ಣು ಪೇಸ್ಟ್ - 1 ಚಮಚ, ಒಣಮೆಣಸು - 2,
ಜೀರಿಗೆ - ಅರ್ಧ ಚಮಚ, ಟೊಮೆಟೊ ಮುಕ್ಕಾಲು ಕಪ್, ಅರಿಶಿನ- ಚಿಟಿಕೆ, ಸಾಸಿವೆ - ಕಾಲು ಚಮಚ, ಇಂಗು - ಚಿಟಿಕೆ, ಹಸಿಮೆಣಸು - 3, ಕರಿಬೇವು - 1 ಎಸಳು
ಸೋರೆಕಾಯಿಯನ್ನು ಚೆನ್ನಾಗಿ ತೊಳೆದು ಕತ್ತರಿಸಿ ಬದಿಗಿಡಿ. ಪ್ಯಾನ್‌ನಲ್ಲಿ ಕಡಲೆಬೇಳೆ, ಉದ್ದಿನಬೇಳೆ, ಒಣಮೆಣಸು ಹಾಗೂ ಸಾಸಿವೆ ಹುರಿದುಕೊಳ್ಳಿ.
ಅದೇ ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಬೆಳ್ಳುಳ್ಳಿ, ಹಸಿಮೆಣಸು ಸೇರಿಸಿ ಹುರಿದುಕೊಂಡು ಪಾತ್ರೆಗೆ ಹಾಕಿಕೊಳ್ಳಿ.
ಅದೇ ಪಾತ್ರೆಗೆ ಕತ್ತರಿಸಿದ ಸೋರೆಕಾಯಿ, ಟೊಮೆಟೊ ಹಾಗೂ ಅರಿಸಿನ ಸೇರಿಸಿ 3 ರಿಂದ 4 ನಿಮಿಷ ಬೇಯಿಸಿಕೊಳ್ಳಿ.
ಈ ಎಲ್ಲಾ ಸಾಮಗ್ರಿಗಳು ತಣ್ಣದಾಗ ಮೇಲೆ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಬೌಲ್‌ವೊಂದಕ್ಕೆ ಹಾಕಿ.
ಇದನ್ನು ದೋಸೆ ಅಥವಾ ಅನ್ನದ ಜೊತೆ ತಿನ್ನಲು ಸಖತ್ ಆಗಿರುತ್ತದೆ.
Horoscope: ಹೊಸ ಪ್ರಯತ್ನ ಮಾಡುವಿರಿ; ಏಪ್ರಿಲ್ 18ರ ಶುಕ್ರವಾರ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ