ತೂಕ ಇಳಿಕೆಗೆ ಸಹಕಾರಿಯಾಗಿರುವ 8 ಪ್ರೋಟೀನ್ ಭರಿತ ಲಾಡುಗಳಿವು

Pixabay

By Priyanka Gowda
Feb 08, 2025

Hindustan Times
Kannada

ಭಾರತೀಯ ಸಾಂಪ್ರದಾಯಿಕ ಸಿಹಿ-ತಿಂಡಿಗಳಲ್ಲಿ ಲಾಡುಗೆ ಅಗ್ರಸ್ಥಾನವಿದೆ. ಇಲ್ಲಿದೆ ತೂಕ ಇಳಿಕೆಗೆ ಸಹಕಾರಿಯಾಗಿರುವ 8 ಪ್ರೋಟೀನ್ ಭರಿತ ಲಾಡುಗಳು.

Pixabay

ಬಾದಾಮಿ-ಖರ್ಜೂರ ಲಾಡು

ಬಾದಾಮಿ ಹಾಗೂ ಖರ್ಜೂರವನ್ನು ಮಿಶ್ರಣ ಮಾಡಿ ತಯಾರಿಸಲಾಗುವ ಈ ಲಾಡು ಪ್ರೋಟೀನ್, ನೈಸರ್ಗಿಕ ಸಿಹಿ ಹಾಗೂ ನಾರಿನಂಶದಿಂದ ಸಮೃದ್ಧವಾಗಿದೆ. ತೂಕ ಇಳಿಕೆಗೆ ಪರಿಪೂರ್ಣವಾಗಿದೆ. 

Canva

ನವಣೆ-ಕಡಲೆಕಾಯಿ ಲಾಡು

ಬೇಯಿಸಿದ ನವಣೆಯನ್ನು ಕಡಲೆಕಾಯಿ, ಜೇನುತುಪ್ಪ ಅಥವಾ ಬೆಲ್ಲ ಬೆರೆಸಿ ತಯಾರಿಸಲಾಗುತ್ತದೆ. ಪ್ರೋಟೀನ್ ಹಾಗೂ ಆರೋಗ್ಯಕರ ಕೊಬ್ಬಿನಿಂದ ಸಮೃದ್ಧವಾಗಿದೆ. 

Canva (ಸಾಂಕೇತಿಕ ಚಿತ್ರ)

ಕಡಲೆಹಿಟ್ಟಿನ ಲಾಡು

ಕಡಲೆಹಿಟ್ಟನ್ನು ತುಪ್ಪದಲ್ಲಿ ಹುರಿದು ಬೆಲ್ಲ, ಒಣಹಣ್ಣುಗಳನ್ನು ಬೆರೆಸಿ ಈ ಲಾಡು ತಯಾರಿಸಲಾಗುತ್ತದೆ. ಪ್ರೋಟೀನ್ ಮತ್ತು ನಾರಿನಂಶದಿಂದ ಸಮೃದ್ಧವಾಗಿರುವ ಈ ಸಿಹಿತಿಂಡಿ ತೂಕ ಇಳಿಕೆಗೆ ಉತ್ತಮ.

Pinterest

ಎಳ್ಳು ಲಾಡು

ಎಳ್ಳನ್ನು ಹುರಿದು ಬೆಲ್ಲದೊಂದಿಗೆ ಬೆರೆಸಿ ಈ ಲಾಡು ತಯಾರಿಸಲಾಗುತ್ತದೆ. ಬಹಳ ರುಚಿಕರವಾಗಿರುವ ಈ ಸಿಹಿತಿಂಡಿ ಪ್ರೊಟೀನ್, ಆರೋಗ್ಯಕರ ಕೊಬ್ಬು, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಖನಿಜಗಳಿಂದ ಸಮೃದ್ಧವಾಗಿದೆ.

Canva

ಪ್ರೊಟೀನ್ ಲಾಡು

ಪ್ರೊಟೀನ್ ಲಾಡನ್ನು ವಿವಿಧ ಬೀಜ, ಜೇನುತುಪ್ಪ ಅಥವಾ ಖರ್ಜೂರವನ್ನು ಬೆರೆಸಿ ತಯಾರಿಸಲಾಗುತ್ತದೆ. ತೂಕ ಇಳಿಕೆಗೆ ಪರಿಪೂರ್ಣ ಆಯ್ಕೆ ಅಂದರೆ ತಪ್ಪಿಲ್ಲ.

Pinterest

ಅಗಸೆ ಬೀಜ-ಓಟ್ಸ್ ಲಾಡು

ಅಗಸೆ ಬೀಜ ಮತ್ತು ಓಟ್ಸ್ ಅನ್ನು ನುಣ್ಣಗೆ ಪುಡಿ ಮಾಡಿ ಜೇನುತುಪ್ಪ ಬೆರೆಸಿ ಈ ಲಾಡು ತಯಾರಿಸಲಾಗುತ್ತದೆ. ಪ್ರೋಟೀನ್, ಪೋಷಕಾಂಶಗಳು, ನಾರಿನಂಶದಿಂದ ಸಮೃದ್ಧವಾಗಿದೆ.

Pinterest (ಸಾಂಕೇತಿಕ ಚಿತ್ರ)

ತೆಂಗಿನಕಾಯಿ ಲಾಡು 

ರುಚಿಕರವಾದ ತೆಂಗಿನಕಾಯಿ ಲಾಡು ಪಾಕವಿಧಾನ ತುಂಬಾ ಸರಳ. ಸಿಹಿಗಾಗಿ ಜೇನುತುಪ್ಪ ಅಥವಾ ಖರ್ಜೂರ ಬೆರೆಸಿ ತಯಾರಿಸಲಾಗುತ್ತದೆ. ತೂಕ ಇಳಿಕೆಗೆ ಈ ಸಿಹಿತಿಂಡಿಯೂ ಉತ್ತಮ.

Canva

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ

Pinterest

ಮೂಳೆ ಕ್ಯಾನ್ಸರ್‌ನ ಲಕ್ಷಣಗಳು, ಕಾರಣಗಳು ಇಲ್ಲಿವೆ

image credit to unsplash