ಅತಿ ಹೆಚ್ಚು ಸಸ್ಯಾಹಾರಿಗಳು ಇರುವ ಅಗ್ರ 5 ದೇಶಗಳಿವು; ಭಾರತಕ್ಕೆ ಎಷ್ಟನೇ ಸ್ಥಾನ

By Raghavendra M Y
Oct 07, 2024

Hindustan Times
Kannada

ಜಗತ್ತಿನಾದ್ಯಂತ ಹೆಚ್ಚಿನ ದೇಶಗಳಲ್ಲಿ ಜನರು ಮಾಂಸಾಹಾರಿ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಸ್ಯಾಹಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ

ಕೆಲವರು ಮಾಂಸಾಹಾರ ಸೇವಿಸುವುದನ್ನು ನಿಲ್ಲಿಸಲು ಪ್ರಾರಂಭಿಸಿದ್ದಾರೆ. ಏಕೆಂದರೆ ಸಸ್ಯಾಹಾರ ಆಹಾರ ನಮ್ಮ ಆರೋಗ್ಯಕರ ಜೀವನಕ್ಕೆ ಮುಖ್ಯವಾಗಿದೆ

ಮಾಂಸಾಹಾರಕ್ಕೆ ಹೋಲಿಸಿದರೆ ಸಸ್ಯಾಹಾರ ಸೇವಿಸುವವರಲ್ಲಿ ಕೊಲೆಸ್ಟ್ರಾಲ್, ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ

ಧರ್ಮ, ನೈತಿಕ ಮತ್ತು ಪರಿಸರ ರಕ್ಷಣೆಯಿಂದ ಪ್ರೇರಿತರಾಗಿ ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಿದವರು ಅನೇಕರಿದ್ದಾರೆ

ಸಸ್ಯಾಹಾರ ಜನರ ಜನಸಂಖ್ಯೆ ಹೆಚ್ಚಿರುವ ವಿಶ್ವದ ಅಗ್ರ 5 ದೇಶಗಳ ಬಗ್ಗೆ ತಿಳಿಯೋಣ

ವರ್ಲ್ಡ್ ಅಟ್ಲಾಸ್ ಡಾಟ್ ಕಾಮ್ ವೆಬ್‌ಸೈಟ್ ಪ್ರಕಾರ, ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಸ್ಯಾಹಾರಿಗಳನ್ನ ಹೊಂದಿದೆ. ದೇಶದ ಜನಸಂಖ್ಯೆಯಲ್ಲಿ ಸುಮಾರು 38 ರಷ್ಟು ಜನರು ಸಸ್ಯಾಹಾರಿಗಳಾಗಿದ್ದಾರೆ

ಟೆಲ್ ಅವಿವ್ 2014 ರಲ್ಲಿ ವಿಶ್ವದ ಅತಿದೊಡ್ಡ ಸಸ್ಯಹಾರಿ ಉತ್ಸವ ಆಯೋಜಿಸಿತ್ತು. 15,000 ಜನರು ಭಾಗವಹಿಸಿದ್ದರು. ಅತಿ ಹೆಚ್ಚು ಸಸ್ಯಾಹಾರಿಗಳು ಇರುವ ದೇಶಗಳಲ್ಲಿ ಇಸ್ರೇಲ್ 2ನೇ ಸ್ಥಾನದಲ್ಲಿದೆ

ತೈವಾನ್‌ನ ಜನಸಂಖ್ಯೆಯ ಸುಮಾರು 13 ರಷ್ಟು ಜನರು ಸಸ್ಯಾಹಾರಿಗಳಾಗಿದ್ದಾರೆ. 3ನೇ ಸ್ಥಾನದಲ್ಲಿದೆ. ತೈವಾನ್ ಸಸ್ಯಾಹಾರಿ ಸ್ನೇಹಿ ವಾತಾವರಣ ಹೊಂದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಗುರುತಿಸಿವೆ

worldatlas.com ಪ್ರಕಾರ, ಇಟಲಿಯ ಶೇಕಡಾ 10 ರಷ್ಟು ಜನರು ಸಸ್ಯಾಹಾರಿಗಳಾಗಿದ್ದಾರೆ. ಹೆಚ್ಚು ಸಸ್ಯಾಹಾರಿಗಳು ಇರುವ ದೇಶಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ

ಆಸ್ಟ್ರೇಲಿಯಾದಲ್ಲಿ ಸುಮಾರು 9 ರಷ್ಟು ಜನರು ಸಸ್ಯಾಹಾರಿಗಳಾಗಿದ್ದಾರೆ. ಇಲ್ಲಿ ಕೆಲವು ದಿನಗಳಿಂದ ಸಸ್ಯಾಹಾರಿಗಳು ಹೆಚ್ಚಾಗುತ್ತಿದ್ದಾರೆ. ಹೀಗಾಗಿ ಸಸ್ಯಾಹಾರಿಗಳಿರುವ ದೇಶಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ

ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು