ಪಂಜಾಬಿ ಮಿಸ್ಸಿ ರೋಟಿ ತಯಾರಿಸೋದು ಸುಲಭ ಕಣ್ರೀ, ಇಲ್ಲಿದೆ ರೆಸಿಪಿ

By Reshma
Jun 27, 2024

Hindustan Times
Kannada

ಪಂಜಾಬ್‌ನ ಪ್ರಸಿದ್ಧ ಖಾದ್ಯಗಳಲ್ಲಿ ಮಿಸ್ಸಿ ರೋಟಿ ಕೂಡ ಒಂದು. ಇದನ್ನು ಗೋಧಿಹಿಟ್ಟು, ಕಡಲೆಹಿಟ್ಟು ಮತ್ತು ಮಸಾಲೆಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದು ರುಚಿಗಷ್ಟೇ ಅಲ್ಲ ಆರೋಗ್ಯಕ್ಕೂ ಬೆಸ್ಟ್‌, ಈ ರೋಟಿ ಹೇಗೆ ಮಾಡೋದು ನೋಡಿ. 

ಬೇಕಾಗುವ ಸಾಮಗ್ರಿಗಳು: ಗೋಧಿಹಿಟ್ಟು - 1ಕಪ್‌, ಕಡಲೆಹಿಟ್ಟು - ಮುಕ್ಕಾಲು ಕಪ್‌, ಅರಿಸಿನ ಪುಡಿ - ಸ್ವಲ್ಪ, ಕಾಳುಮೆಣಸಿನ ಪುಡಿ - ಸ್ವಲ್ಪ, ಅಜ್ವಾನಾ - ಕಾಲು ಚಮಚ, ಅಮಚೂರ್‌ - ಅರ್ಧ ಚಮಚ, ಇಂಗು - ಚಿಟಿಕೆ, ಕಸೂರಿಮೇಥಿ - 1 ಚಮಚ 

ಶುಂಠಿ ಬೆಳ್ಳುಳ್ಳಿ ಪೇಸ್ಟ್‌ - ಅರ್ಧ ಚಮಚ, ಹಸಿಮೆಣಸು - 1, ಕತ್ತರಿಸಿದ ಕೊತ್ತಂಬರಿ ಸೊಪ್ಪು - 2 ಚಮಚ, ಉಪ್ಪು - ರುಚಿಗೆ, ಎಣ್ಣೆ -  ಚಮಚ, ನೀರು - ಹದಕ್ಕೆ 

ಗೋಧಿಹಿಟ್ಟು, ಕಡಲೆಹಿಟ್ಟು, ಕತ್ತರಿಸಿಕೊಂಡ ತರಕಾರಿ, ಮಸಾಲೆ ಹಾಗೂ ಎಣ್ಣೆಯನ್ನು ಒಂದು ಬೌಲ್‌ನಲ್ಲಿ ಹಾಕಿಟ್ಟುಕೊಳ್ಳಿ. 

ಗೋಧಿಹಿಟ್ಟು, ಕಡಲೆಹಿಟ್ಟು, ಕತ್ತರಿಸಿಕೊಂಡ ತರಕಾರಿ, ಮಸಾಲೆ ಹಾಗೂ ಎಣ್ಣೆಯನ್ನು ಒಂದು ಬೌಲ್‌ನಲ್ಲಿ ಹಾಕಿಟ್ಟುಕೊಳ್ಳಿ. 

ಮಧ್ಯೆ ಮಧ್ಯೆ ನೀರು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ನಾದಿಕೊಳ್ಳಿ. 

ಅದರಿಂದ ಸ್ವಲ್ಪ ಹಿಟ್ಟು ತೆಗೆದುಕೊಂಡು ಉಂಡೆ ಮಾಡಿಕೊಳ್ಳಿ. ಅದನ್ನು ಚಪಾತಿ ಆಕಾರಕ್ಕೆ ಲಟ್ಟಿಸಿಕೊಳ್ಳಿ. 

ಅದನ್ನು ಗೋಲ್ಡನ್‌ ಬ್ರೌನ್‌ ಬಣ್ಣಕ್ಕೆ ಬರುವವರೆಗೂ ಎರಡೂ ಕಡೆ ಕಾಯಿಸಿ. ನಂತರ ತುಪ್ಪ ಅಥವಾ ಬೆಣ್ಣೆ ಸವರಿ. ಈಗ ನಿಮ್ಮ ಮುಂದೆ ಪಂಜಾಬಿ ಮಿಸ್ಸಿ ರೋಟಿ ಸವಿಯಲು ಸಿದ್ಧ. 

ಹಾರ್ದಿಕ್-ನತಾಶಾ ಮದುವೆಯ ಸುಂದರ ಚಿತ್ರಗಳು