ನೇರಳೆ ಹಣ್ಣಿನಿಂದ ತಯಾರಿಸಬಹುದಾದ 6 ಸೂಪರ್ ರೆಸಿಪಿಗಳು

By Reshma
Jul 14, 2024

Hindustan Times
Kannada

ನೇರಳೆಹಣ್ಣು ಮಾತ್ರ ಇದರಿಂದ ತಯಾರಿಸುವ ಖಾದ್ಯಗಳು ಸಖತ್‌ ಟೇಸ್ಟಿ. ಇದರಿಂದ ಸಲಾಡ್‌ನಿಂದ ಹಿಡಿದು ಜ್ಯೂಸ್‌ವರೆಗೆ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ನೇರಳೆಹಣ್ಣಿನಿಂದ ತಯಾರಿಸಬಹುದಾದ ಖಾದ್ಯಗಳ ಪರಿಚಯ ಇಲ್ಲಿದೆ. 

ನೇರಳೆಹಣ್ಣಿನ ತಿರುಳಿಗೆ ಸ್ವಲ್ಪ ನೀರು, ಸ್ವಲ್ಪ ಸಕ್ಕರೆ ಮತ್ತು ಒಂದು ಚಿಟಿಕೆ ಕಪ್ಪು ಉಪ್ಪು ಸೇರಿಸಿ ಮಿಶ್ರಣ ಮಾಡಿ. ನಿಮಗೆ ಕೊಂಚ ಹುಳಿ ರುಚಿ ಬೇಕು ಎನ್ನಿಸಿದರೆ ಒಂದೆರಡು ಹನಿ ನಿಂಬೆರಸ ಸೇರಿಸಿ. 

ನೇರಳೆ ಐಸ್‌ಕ್ರೀಮ್‌: ನೇರಳೆಹಣ್ಣಿನ ತಿರುಳು ತಯಾರಿಸಿಕೊಂಡು ಪಾತ್ರೆಯಲ್ಲಿ ಹಾಕಿಡಿ. ನಂತರ ನೀರಿಗೆ ಸಕ್ಕರೆ ಹಾಕಿ ಪಾಕ ಮಾಡಿಕೊಂಡು ತಣ್ಣಗಾಗಲು ಬಿಡಿ. ನೇರಳೆಹಣ್ಣಿನ ತಿರುಳಿಗೆ ನಿಂಬೆರಸ ಮಿಶ್ರಣ ಮಾಡಿ. ನಂತರ ಸಕ್ಕರೆ ಪಾಕ ಸೇರಿಸಿ ಮಿಶ್ರಣ ಮಾಡಿ. ಇದನ್ನು ಫ್ರಿಜರ್‌ನಲ್ಲಿಡಿ. ಕೆಲ ಹೊತ್ತಿನ ನಂತರ ನೇರಳೆಹಣ್ಣಿನ ಸೋರ್ಬೆಟ್‌ ಸವಿಯಲು ಸಿದ್ಧ. 

ನೇರಳೆಹಣ್ಣಿನ ಚಟ್ನಿ: ನೇರಳೆಹಣ್ಣಿನ ತಿರುಳನ್ನು ಬಾಣಲಿಗೆ ಹಾಕಿ. ಈ ಮಿಶ್ರಣ ದಪ್ಪಗಾಗುವವರೆಗೆ ಬೆಲ್ಲ ಹಾಗೂ ಹುಣಸೆಹಣ್ಣಿನ ಪೇಸ್ಟ್‌ನೊಂದಿಗೆ ಸೇರಿಸಿ ಬೇಯಿಸಿಕೊಳ್ಳಿ. ಇದಕ್ಕೆ ಹುರಿದಿಟ್ಟುಕೊಂಡ ಜೀರಿಗೆ, ಖಾರದ ಪುಡಿ ಹಾಗೂ ಉಪ್ಪು ಸೇರಿಸಿ. ಈ ಮಿಶ್ರಣ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈ ಹುಳಿ, ಸಿಹಿ ರುಚಿಯ ಚಟ್ನಿ ಮಕ್ಕಳಿಗೂ ಇಷ್ಟವಾಗುತ್ತದೆ. 

ನೇರಳೆಹಣ್ಣಿನ ಸ್ಮೂಥಿ: ನೇರಳೆಹಣ್ಣಿನ ತಿರುಳನ್ನು ತೆಗೆದು ಅದಕ್ಕೆ ಮೊಸರು, ಜೇನುತುಪ್ಪ ಹಾಗೂ ಮಾಗಿದ ಬಾಳೆಹಣ್ಣು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ಈಗ ನಿಮ್ಮ ಮುಂದೆ ನೇರಳೆಹಣ್ಣಿನ ಸ್ಮೂಥಿ ರೆಡಿ. 

ಜಾಮೂನ್‌ ಪನ್ನಾ: ನೇರಳೆಹಣ್ಣನ್ನು ಮೃದುವಾಗುವವರೆಗೂ ಕುದಿಸಿ. ನಂತರ ತಿರುಳನ್ನು ಕಿವುಚಿಕೊಳ್ಳಿ. ಕಲ್ಲುಪ್ಪು, ಹುರಿದು ಪುಡಿ ಮಾಡಿದ ಜೀರಿಗೆ, ಸಕ್ಕರೆ ಹಾಗೂ ನುಣ್ಣಗೆ ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಪುದಿನ ಎಲೆಗಳನ್ನು ಕತ್ತರಿಸಿ ಹಾಕಿ. ಇದಕ್ಕೆ ಐಸ್‌ ವಾಟರ್‌ ಸೇರಿಸಿ. ಈ ಎಲ್ಲವನ್ನು ಚಮಚದಿಂದ ಮಿಶ್ರಣ ಮಾಡಿದರೆ ನಿಮ್ಮ ಮುಂದೆ   ರುಚಿಯಾದ ಜಾಮೂನ್‌ ಪನ್ನಾ ಸಿದ್ಧ.

ನೇರಳೆಹಣ್ಣಿನ ಸಲಾಡ್‌: ಒಂದು ಬೌಲ್‌ನಲ್ಲಿ ನೇರಳಹಣ್ಣುಗಳನ್ನು ಕತ್ತರಿಸಿ ಹಾಕಿ. ಅದಕ್ಕೆ ಹೆಚ್ಚಿಕೊಂಡ ಸೌತೆಕಾಯಿ, ಪುದಿನ ಎಲೆ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ನಿಂಬೆರಸ ಹಿಂಡಿ. ಮೇಲ್ಗಡೆಯಿಂದ ಉಪ್ಪು ಉದುರಿಸಿ. ಈ ಹುಳಿಯ ರುಚಿಯ ಸಲಾಡ್‌ ಆರೋಗ್ಯಕ್ಕೂ ಉತ್ತಮ.  

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS