ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನ

pixa bay

By Praveen Chandra B
Dec 10, 2024

Hindustan Times
Kannada

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಸನ್ 2022-23ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಅನುದಾನ ಹಾಗೂ ಪಾಲಿಕೆ ಅನುದಾನದಲ್ಲಿ ಅರ್ಹರಿಗೆ ಹೊಲಿಗೆ ಯಂತ್ರಗಳನ್ನು ನೀಡಲಿದೆ.

pixa bay

 ಯಾರಿಗೆ?: ಮಹಿಳೆಯರಿಗೆ ಮಾತ್ರ. ಪರಿಶಿಷ್ಟ ಜಾತಿ (SCSP) 17.15%, ಪರಿಶಿಷ್ಟ ಪಂಗಡ (TSP) 6.95% ಹಾಗೂ ಇತರೆ ಹಿಂದುಳಿದ ವರ್ಗ (OBC) 7.25%. (ಮುಂದಿನ ಸ್ಲೈಡ್‌ ನೋಡಿ)

pixa bay

ಪ.ಜಾತಿ, ಪ.ಪಂಗಡ, ಓ.ಬಿ.ಸಿ ಜಾತಿ ಪ್ರಮಾಣ ಪತ್ರ ಹಾಗೂ ವಾರ್ಷಿಕ ವರಮಾನ ಪತ್ರ, ಬಿಪಿಎಲ್ ಪಡಿತರ ಚೀಟಿ, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಹೊಲಿಗೆಯಂತ್ರ ತರಬೇತಿ ಹೊಂದಿದ ಪ್ರಮಾಣಪತ್ರ  (ಮುಂದಿನ ಸ್ಲೈಡ್‌ ನೋಡಿ)

pixa bay (all photos)

ಹೊಲಿಗೆಯಂತ್ರ ಹೊಂದದೇ ಇರುವ ಕುರಿತು ಹಾಗೂ ಈ ಮೊದಲು ಹೊಲಿಗೆ ಯಂತ್ರ ಪಾಲಿಕೆಯಿಂದ ಸಹಾಯಧನ ಪಡೆದಿಲ್ಲವೆಂದು ಹಾಗೂ ಹೊಲಿಗೆಯಂತ್ರವನ್ನು ಪರಬಾರೆ, (ಮುಂದಿನ ಸ್ಲೈಡ್‌ ನೋಡಿ)

ವರ್ಗಾವಣೆ, ಮರುಮಾರಾಟ ಮಾಡದಿರುವ ಬಗ್ಗೆ ರೂ. 100 ಬಾಂಡ ಪೇಪರ ಅಫಿಡೇವಿಟ್‌ದೊಂದಿಗೆ ಪ್ರಮಾಣ ಪತ್ರಗಳೊಂದಿಗೆ ಅರ್ಜಿ ಸಲ್ಲಿಸಬಹುದು. 

ಈ ಯೋಜನೆ ಒಂದು ಕುಟುಂಬದ ಒಬ್ಬ ಫಲಾನುಭವಿಗೆ ಮಾತ್ರ ಅನ್ವಯಿಸುತ್ತದೆ. 

ದಾಖಲೆಗಳೊಂದಿಗೆ ತಾವು ವಾಸಿಸುವ ಪ್ರದೇಶದ ವಲಯ ಕಚೇರಿಯಲ್ಲಿ ಅರ್ಜಿಗಳನ್ನು ಪಡೆದು ಡಿಸೆಂಬರ್ 27ರ ಸಂಜೆ 5 ಗಂಟೆಯೊಳಗಾಗಿ ಸಂಬಂಧಪಟ್ಟ ವಲಯ ಕಚೇರಿಗೆ ಅರ್ಜಿಯನ್ನು ಸಲ್ಲಿಸಬೇಕು.

ಈ ಹಿಂದೆ ಸಲ್ಲಿಸಿದ ಅರ್ಜಿಗಳನ್ನು ಹಾಗೂ ಸರಕಾರದ ನಿರ್ದೇಶನದಂತೆ ಅಪೂರ್ಣ, ದಾಖಲೆ ಇಲ್ಲದೆ ಇರುವ ಅರ್ಜಿಗಳನ್ನು ಮತ್ತು ತಡವಾಗಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. 

ಹೆಚ್ಚಿನ ಮಾಹಿತಿಗೆ ಆಯಾ ವಲಯ ಕಚೇರಿ ಅಥವಾ ಪಾಲಿಕೆಯ ವೆಬ್‌ಸೈಟ್ hdmc.mrc.gov.in ಸಂಪರ್ಕಿಸುವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಇಲ್ಲಿ ನೀಡಲಾಗಿರುವ ಎಲ್ಲಾ ಫೋಟೋಗಳು ಸಾಂದರ್ಭಿಕವಾಗಿದೆ. 

ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?