ಸರಿಯಾದ ತಳಿ ಆರಿಸಿ
ಗಿಡಗಳ ಬೇರುಗಳು ಬೆಳೆಯಲು ಸ್ಥಳಾವಕಾಶ ಬೇಕಾಗುತ್ತದೆ. ಹೀಗಾಗಿ ಕನಿಷ್ಠ 12 ರಿಂದ 16 ಇಂಚು ಆಳ ಮತ್ತು ಅಗಲವಿರುವ ಕುಂಡ ಅಗತ್ಯ.
ಮೆಣಸಿನಕಾಯಿ ಗಿಡಕ್ಕೆ ಸೂರ್ಯನ ಬೆಳಕು ಬೇಕಾಗುತ್ತದೆ. ಹೀಗಾಗಿ ಮಣ್ಣಿನ ಕುಂಡವನ್ನು ಪ್ರತಿದಿನ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ಬಿಸಿಲು ಬೀಳುವ ಸ್ಥಳದಲ್ಲಿರಿಸಿ. ಸೂರ್ಯನ ಬೆಳಕು ಹೆಚ್ಚು ಪಡೆಯುವುದರಿಂದ ಮೆಣಸಿನಕಾಯಿ ಗಿಡ ಉತ್ತಮವಾಗಿ ಬೆಳೆಯುತ್ತದೆ.
ಗಿಡ ಎತ್ತರವಾಗಿ ಬೆಳೆದಂತೆ ಅವುಗಳಿಗೆ ಬೆಂಬಲ ನೀಡಲು ಏನಾದರೂ ಆಧಾರ ನೀಡಬೇಕು. ಸಸ್ಯವನ್ನು ನೇರವಾಗಿಡಲು ಸಣ್ಣ ಕಂಬವನ್ನು ಬಳಸಬಹುದು.
ಹಸಿಮೆಣಸಿನಕಾಯಿ ಗಿಡಗಳು ತೇವಾಂಶವುಳ್ಳ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತವೆ. ಆದರೆ ಕುಂಡದಲ್ಲಿ ನೀರು ನಿಲ್ಲಬಾರದು. ಹೀಗಾಗಿ ಅತಿಯಾಗಿ ನೀರು ಹಾಕುವುದು ಉತ್ತಮವಲ್ಲ. ಮಣ್ಣು ಒಣಗಿದಾಗ ನೀರು ಹಾಕಿದರೆ ಸಾಕು.
ಗಿಡಗಳಿಗೆ ಪ್ರತಿ 2 ರಿಂದ 3 ವಾರಗಳಿಗೊಮ್ಮೆ ಸಮತೋಲಿತ ಗೊಬ್ಬರವನ್ನು ಹಾಕಿ. ಅದಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸಲು ಸಾವಯವ ಗೊಬ್ಬರವನ್ನು ಸಹ ಬಳಸಬಹುದು. ಆದರೆ, ಅತಿಯಾಗಿ ಹಾಕಬೇಡಿ.
ಹಸಿಮೆಣಸಿನಕಾಯಿ ಗಿಡಗಳು ಬಿಳಿ ನೊಣಗಳು, ಗಿಡಹೇನುಗಳು ಮತ್ತು ಜೇಡ ಹುಳಗಳಂತಹ ಕೀಟಗಳಿಗೆ ಗುರಿಯಾಗುತ್ತವೆ. ಹೀಗಾಗಿ ಸಸ್ಯಗಳ ಮೇಲೆ ನಿಗಾ ಇರಿಸಿ. ಕೀಟಗಳನ್ನು ತೊಡೆದುಹಾಕಲು ಬೇವಿನ ಎಣ್ಣೆಯನ್ನು ಬಳಸಬಹುದು.
ಹಸಿಮೆಣಸಿನಕಾಯಿಗಳು ಸಂಪೂರ್ಣವಾಗಿ ಹಣ್ಣಾದ ನಂತರ ಅಂದರೆ ಅದು ಗಾಢ ಹಸಿರು ಬಣ್ಣಕ್ಕೆ ತಿರುಗಿದ ನಂತರ ಕೊಯ್ಲು ಮಾಡಿ.
Photo Credit: Reuters