ಮನೆಯಲ್ಲಿ ಹಾಗಲಕಾಯಿ ಬೆಳೆಯುವುದು ಹೇಗೆ? ಇಲ್ಲಿದೆ ಸರಳ ವಿಧಾನ

By Prasanna Kumar PN
Mar 27, 2025

Hindustan Times
Kannada

ಇತ್ತೀಚೆಗೆ ಹೆಚ್ಚಿನ ಪ್ರಮಾಣದ ಜನರು ಗಾರ್ಡನಿಂಗ್​ನತ್ತ ಒಲವು ತೋರುತ್ತಿದ್ದಾರೆ. ಮನೆಯ ಅಂಗಳ ಅಥವಾ ಟೆರೇಸ್​ನಲ್ಲಿ ಸಣ್ಣದಾದ ಕೈತೋಟ ನಿರ್ಮಿಸುತ್ತಿದ್ದಾರೆ.

ಸಾವಯವ ತರಕಾರಿ ತಿನ್ನಲು ಒಲವು ತೋರುತ್ತಿರುವ ಹಿನ್ನೆಲೆ ತಮ್ಮ ತಮ್ಮ ಕೈತೋಟಗಳಲ್ಲಿ ಬಗೆ ಬಗೆಯ ತರಕಾರಿ ಬೆಳೆಯುತ್ತಿದ್ದಾರೆ. ಆದರೆ ಹಾಗಲಕಾಯಿ ಬೆಳೆಯುವವರ ಸಂಖ್ಯೆ ತೀರಾ ಕಡಿಮೆ.

ನಿಮಗೆ ಗೊತ್ತಾ! ನೀವು ನಿಮ್ಮ ತೋಟದಲ್ಲಿ ಟೊಮೆಟೊ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು.. ಹೀಗೆ ವಿವಿಧ ತರಕಾರಿ ಬೆಳೆದಂತೆಯೇ ಹಾಗಲಕಾಯಿಯನ್ನೂ ಸುಲಭವಾಗಿ  ಬೆಳೆಯಬಹುದು.

ಹಾಗಲಕಾಯಿ ತಿನ್ನುವುದು ಕೂಡ ಪ್ರಯೋಜನಕಾರಿ. ಹಾಗಲಕಾಯಿ ಮಧುಮೇಹ ರೋಗಿಗಳಿಗೆ ಪವಾಡ ಔಷಧಕ್ಕಿಂತ ಕಡಿಮೆಯಿಲ್ಲ. ಇದರ ಹೊರತಾಗಿ, ಇದು ತುಂಬಾ ಪೌಷ್ಟಿಕವಾಗಿದೆ.

ಮನೆಯಲ್ಲೇ ಹಾಗಲಕಾಯಿ ಬೆಳೆಯುವ ಸುಲಭ ಮಾರ್ಗವನ್ನು ನಾವಿಂದು ನಿಮಗೆ ಇಲ್ಲಿ ತಿಳಿಸಲಿದ್ದೇವೆ. ಇದರಿಂದ ನೀವು ನಿಮ್ಮ ಮನೆಯಲ್ಲಿ ಬೆಳೆದ ನೈಸರ್ಗಿಕ ಹಾಗಲಕಾಯಿ ರುಚಿ ಸವಿಯಬಹುದು.

ಮೊದಲು ಒಂದು ದೊಡ್ಡ ಪಾಟ್​ನಲ್ಲಿ ಫಲವತ್ತಾದ ಮಣ್ಣನ್ನು ತುಂಬಿ. ಆ ಮಣ್ಣಿಗೆ ಹಸುವಿನ ಸಗಣಿ ಬೆರೆಸಿ. ನಂತರ ನಾಲ್ಕೈದು ಬೀಜಗಳನ್ನು ಸಿದ್ಧಪಡಿಸಿದ ಮಣ್ಣಿನಲ್ಲಿ 4-5 ಇಂಚು ಆಳದಲ್ಲಿ ಬಿತ್ತನೆ ಮಾಡಿ.

ಬೀಜಗಳನ್ನು ನೆಟ್ಟ ನಂತರ 1 ಕಪ್ ನೀರು ಸೇರಿಸಿ ಮಣ್ಣನ್ನು ಹದಗೊಳಿಸಿ. ಪ್ರತಿದಿನ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಿರಬೇಕು.

ಹಾಗಲಕಾಯಿ ಗಿಡವು ಬಳ್ಳಿಯಂತೆ ಬೆಳೆಯಲಿದೆ. ಹಾಗಾಗಿ ಬಳ್ಳಿಯಂತೆ ಹಾದುಹೋಗಲು ಒಂದು ಕೋಲನ್ನು ಅದೇ ಮಣ್ಣಿನಲ್ಲಿ ನೆಡಿ. ಆಗ ಬಳ್ಳಿಯನ್ನು ಆ ಕೋಲಿಗೆ ಕಟ್ಟಬೇಕಿದೆ.

ಹಾಗಲಕಾಯಿ ಬೀಜ ನೆಟ್ಟ ನಂತರ ವಾರದೊಳಗೆ ಮೊಳಕೆ ಬರಲಿದೆ. ಬಳಿಕ ಸುಮಾರು 60 ದಿನಗಳ ನಂತರ ಫಸಲು ಬರುತ್ತದೆ.

Horoscope: ಸಮಸ್ಯೆಗಳನ್ನು ಸರಿಪಡಿಸುತ್ತೀರಿ; ಏಪ್ರಿಲ್ 23ರ ಬುಧವಾರದ ದಿನ ಭವಿಷ್ಯ