ಮುಂಬೈ vs ಗುಜರಾತ್ ಹೈವೋಲ್ಟೇಜ್ ಕದನ; ಹೆಡ್​ ಟು ಹೆಡ್ ರೆಕಾರ್ಡ್ ವಿವರ ಇಲ್ಲಿದೆ

By Prasanna Kumar P N
Mar 23, 2024

Hindustan Times
Kannada

2024ರ ಐಪಿಎಲ್​ ಕಾವು ಜೋರಾಗಿದೆ. ಪಂದ್ಯದಿಂದ ಪಂದ್ಯಕ್ಕೆ ರೋಚಕತೆ ಹೆಚ್ಚಾಗುತ್ತಿದೆ. ಅದರಂತೆ ಮಾರ್ಚ್​ 24ರಂದು ಮತ್ತೊಂದು ಹೈವೋಲ್ಟೇಜ್ ಪಂದ್ಯವನ್ನು ನಿರೀಕ್ಷಿಸಲಾಗಿದೆ.

ಮಾರ್ಚ್​ 24ರ ಭಾನುವಾರ ಕೂಡ 2 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ರಾಜಸ್ಥಾನ-ಲಕ್ನೋ ಸೆಣಸಾಟ ನಡೆಸಿದರೆ, 2ನೇ ಪಂದ್ಯದಲ್ಲಿ ಮುಂಬೈ-ಗುಜರಾತ್ ಮುಖಾಮುಖಿಯಾಗಲಿವೆ.

ಆದರೆ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ಪಂದ್ಯ ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಅಭಿಮಾನಿಗಳೇ ಕಾದುಕುಳಿತಿದ್ದಾರೆ. ಹಾಗಾದರೆ ಉಭಯ ತಂಡಗಳ ಮುಖಾಮುಖಿ ದಾಖಲೆ ಹೇಗಿದೆ?

ಉಭಯ ತಂಡಗಳು ಐಪಿಎಲ್​ನಲ್ಲಿ 4 ಬಾರಿ ಪರಸ್ಪರ ಮುಖಾಮುಖಿ ಆಗಿವೆ. ಆದರೆ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದ್ದು, ತಲಾ ಎರಡು ಪಂದ್ಯಗಳಲ್ಲಿ ಜಯಿಸಿವೆ.

ಈ ಹೈವೋಲ್ಟೇಜ್​ ಕದನಕ್ಕೆ ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನವು ಆತಿಥ್ಯ ವಹಿಸಲಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ರೋಹಿತ್​​ರನ್ನು ಕೆಳಗಿಸಿ ಗುಜರಾತ್ ತಂಡದ ಬಂದ ಹಾರ್ದಿಕ್​ಗೆ ನಾಯಕತ್ವ ನೀಡಿದ ಕಾರಣ ಈ ಪಂದ್ಯ ಹೈವೋಲ್ಟೇಜ್​ ಕದನವಾಗಿ ಮಾರ್ಪಡಲು ಕಾರಣವಾಗಿದೆ.

ಕುಸಿಯುತ್ತಿದೆ ರಾಜಕಾರಣ:  ಮಹಿಳೆಯರ ಬಗ್ಗೆ ಹಗುರ ಮಾತು