ಒಡೆದ ತಲೆಗೂದಲ ತುದಿಗೆ ಇಲ್ಲಿದೆ ಪರಿಹಾರ, ಮನೆಯಲ್ಲೇ ತಯಾರಿಸಿದ ಈ ಹೇರ್ ಮಾಸ್ಕ್ ಅಪ್ಲೈ ಮಾಡಿ
freepik
By Priyanka Gowda
Sep 19, 2024
Hindustan Times
Kannada
ಕೂದಲು ಉದುರುವುದು, ಸ್ಪ್ಲಿಟ್ಸ್ ಆಗುವುದು ಬಹುತೇಕರು ಎದುರಿಸುವ ಸಾಮಾನ್ಯ ಸಮಸ್ಯೆ. ಒಡೆದ ಕೂದಲಿಗೆ ಮನೆಮದ್ದು ಉಪಯೋಗಿಸಿ ಶಮನಗೊಳಿಸಬಹುದು.
ತಲೆಗೂದಲು ಸ್ಪ್ಲಿಟ್ಸ್ ಅಥವಾ ಒಡೆಯುವುದು ಅಂದರೆ ಕೂದಲಿನ ತುದಿಯಲ್ಲಿ ಎರಡು ಅಥವಾ ಹೆಚ್ಚಿನ ತುದಿಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಸ್ಪ್ಲಿಟ್ಸ್ ಹೇರ್ ಎನ್ನುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿ ಕೂದಲು ತುಂಬಾ ಒರಟಾಗಿರುತ್ತದೆ. ಅದಕ್ಕೆ ಸರಿಯಾದ ಆರೈಕೆ ಮತ್ತು ಸಾಕಷ್ಟು ಪೋಷಣೆಯ ಅಗತ್ಯವಿದೆ.
ಕೂದಲು ಸ್ಪ್ಸಿಟ್ಸ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿ ಕೆಲವೊಂದು ಮನೆಮದ್ದುಗಳ ಬಗ್ಗೆ ತಿಳಿಸಲಾಗಿದೆ. ಅವುಗಳನ್ನು ಪ್ರಯತ್ನಿಸಬಹುದು.
ಇದಕ್ಕಾಗಿ ಅನ್ನ, ಮೆಂತ್ಯ, ಬೀಜಗಳು, ಅಲೋವೆರಾ ಜೆಲ್, ಮೊಸರು ಮತ್ತು ಹರಳೆಣ್ಣೆಯನ್ನು ತೆಗೆದುಕೊಳ್ಳಬೇಕು.
ಮೊದಲಿಗೆ ಅನ್ನ ಮತ್ತು ಮೆಂತ್ಯವನ್ನು ರುಬ್ಬಿಕೊಳ್ಳಬೇಕು. ಇದಕ್ಕೆ ಬೀಜಗಳು, ಅಲೋವೆರಾ ಜೆಲ್, ಮೊಸರು, ಹರಳೆಣ್ಣೆಯನ್ನು ಮಿಕ್ಸ್ ಮಾಡಿ ದಪ್ಪ ಪೇಸ್ಟ್ ತಯಾರಿಸಬೇಕು.
ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ. ಸ್ವಲ್ಪ ಸಮಯದ ನಂತರ ತೊಳೆಯಿರಿ. ಇದರಿಂದ ಒಡೆದ ತುದಿಗಳಿಂದ ಪರಿಹಾರ ಪಡೆಯಬಹುದು, ಜೊತೆಗೆ ಕೂದಲು ಹೊಳೆಯಲು ಕಾರಣವಾಗುತ್ತದೆ.
ವಿಷಯ ಸೂಚನೆ: ಇದು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ನಿಮಗೆ ಏನಾದರೂ ಅಲರ್ಜಿ ಸಮಸ್ಯೆ ಅಥವಾ ಇನ್ನಿತರೆ ಸಮಸ್ಯೆ ಇದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ತೆರಿಗೆ ಉಳಿತಾಯ + ಲಾಭದಾಯಕ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳಿವು
Pexel
ಮುಂದಿನ ಸ್ಟೋರಿ ಕ್ಲಿಕ್ ಮಾಡಿ