ಕೂದಲು ಸೊಂಪಾಗಿ ಬೆಳೆಯಲು ದಿನಕ್ಕೆ ಎಷ್ಟು ಬಾರಿ ತಲೆ ಬಾಚಬೇಕು, ಇಲ್ಲಿದೆ ಉಪಯುಕ್ತ ಮಾಹಿತಿ
By Reshma May 31, 2024
Hindustan Times Kannada
ಚಳಿಗಾಲ, ಮಳೆಗಾಲ, ಬೇಸಿಗೆಗಾಲ ಯಾವುದೇ ಕಾಲವಿರಲಿ. ಕೂದಲ ಕಾಳಜಿ ಮಾಡುವುದು ಬಹಳ ಮುಖ್ಯ. ಕೂದಲನ್ನು ಸರಿಯಾಗಿ ಕಾಳಜಿ ಮಾಡಿಲ್ಲ ಎಂದರೆ ಕೂದಲು ಉದುರಲು ಆರಂಭವಾಗುತ್ತದೆ. ಬುಡದಿಂದಲೇ ದುರ್ಬಲವಾಗುತ್ತದೆ.
ಹುಡುಗರಾಗಲಿ, ಹುಡುಗಿಯರಾಗಲಿ ಆಗಾಗ ತಲೆಬಾಚಿಕೊಳ್ಳುವುದು ಸಹಜ. ಕೆಲವರಿಗೆ ಪದೇ ಪದೇ ತಲೆ ಬಾಚಿಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಅತಿಯಾಗಿ ತಲೆಬಾಚುವುದು ಖಂಡಿತ ಒಳ್ಳೆಯದಲ್ಲ.
ಹಾಗಾದರೆ ಕೂದಲನ್ನು ಎಷ್ಟು ಬಾರಿ ಬಾಚಬೇಕು, ಹೇಗೆ ಬಾಚಬೇಕು, ಅತಿಯಾಗಿ ಕೂದಲು ಬಾಚುವುದರಿಂದ ಏನು ತೊಂದರೆ ಆಗುತ್ತೆ ನೋಡಿ.
ಪದೇ ಪದೇ ಕೂದಲು ಬಾಚುವುದರಿಂದ ಕೂದಲು ದುರ್ಬಲವಾಗುತ್ತದೆ. ಅಲ್ಲದೇ ಕೂದಲು ಉದುರಲು ಆರಂಭವಾಗುತ್ತದೆ. ಬಾಚಣಿಗೆಯ ಚೂಪಾದ ಹಲ್ಲುಗಳು ನೆತ್ತಿಯನ್ನು ದುರ್ಬಲಗೊಳಿಸುತ್ತದೆ.
ಬಾಚಣಿಗೆಯ ಅತಿಯಾದ ಬಳಕೆಯು ತಲೆಯ ಚರ್ಮಕ್ಕೆ ಹಾನಿಯಾಗುತ್ತದೆ ಮತ್ತು ನಂತರ ತಲೆಹೊಟ್ಟಿನ ಸಮಸ್ಯೆ ಆರಂಭವಾಗುತ್ತದೆ.
ಆಗಾಗ ತಲೆ ಬಾಚಿಕೊಳ್ಳುವುದರಿಂದ ಕೂದಲಿನ ಹೊರ ಪೊರೆಗೆ ಹಾನಿಯಾಗುತ್ತದೆ. ಕೂದಲಿನ ಹೊರ ಪೊರೆಗಳು ಕೂದಲನ್ನು ರಕ್ಷಿಸುತ್ತವೆ. ಆದರೆ ಆ ಭಾಗ ದುರ್ಬಲವಾದರೆ ಕೂದಲು ಒಡೆಯಲು ಪ್ರಾರಂಭವಾಗುತ್ತದೆ.
ಆದರೆ ಕೂದಲು ಬಾಚುವುದರಿಂದ ಪ್ರಯೋಜನವೂ ಇದೆ. ಇದರಿಂದ ರಕ್ತಪರಿಚಲನೆ ಸುಧಾರಿಸುತ್ತದೆ.
ಬಾಚಣಿಗೆಯು ಕೂದಲಿನ ನೈಸರ್ಗಿಕ ಎಣ್ಣೆಯನ್ನು ಹೆಚ್ಚಿಸುತ್ತದೆ. ಇದು ಕೂದಲ ಬೆಳವಣಿಗೆಯನ್ನು ಸುಧಾರಿಸುತ್ತದೆ.
ಆದರೂ ದಿನಕ್ಕೆ ಎರಡೇ ಬಾರಿ ಕೂದಲು ಬಾಚಿಕೊಳ್ಳಬೇಕು. ಇದಕ್ಕಿಂತ ಹೆಚ್ಚು ಬಾರಿ ಕೂದಲು ಬಾಚಿಕೊಳ್ಳಬಾರದು. ಇದಕ್ಕಿಂತ ಹೆಚ್ಚು ತಲೆ ಬಾಚುವುದು ಕೂದಲಿಗೆ ಹಾನಿಯಾಗುತ್ತದೆ.
ನಿಮ್ಮದು ಉದ್ದ ಕೂದಲಾಗಿದ್ದರೆ ಬಾಚಿದ ನಂತರ ಕೂದಲು ಕಟ್ಟಿಕೊಳ್ಳಬೇಕು. ಕೂದಲು ಹರಡಿಸಿಕೊಂಡಿದ್ದರೆ ಸಿಕ್ಕಾಗುತ್ತದೆ. ಆದರೆ ಪುರುಷರಿಗೆ ಈ ಸಮಸ್ಯೆ ಇಲ್ಲ.
ಪುಷ್ಪ 2 ಡಿಸೆಂಬರ್ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ