ಕೂದಲಿಗೆ ಈ 4 ಪದಾರ್ಥಗಳನ್ನ ತಪ್ಪಿಯೂ ಹಚ್ಚದಿರಿ, ಹಾನಿಯಾಗೋದು ಖಂಡಿತ
By Reshma Aug 15, 2024
Hindustan Times Kannada
ಕೂದಲಿನ ಕಾಳಜಿ ಮಾಡುವುದು ಸವಾಲಾದ ಇತ್ತೀಚಿನ ದಿನಗಳಲ್ಲಿ ಕೂದಲ ಆರೈಕೆಗಾಗಿ ಹಲವು ಉತ್ಪನ್ನಗಳನ್ನು ಬಳಸಲಾಗುತ್ತಿದೆ.
ಮನೆಯಲ್ಲೇ ತಯಾರಿಸುವ ಕೆಲವು ಉತ್ಪನ್ನಗಳು ಪ್ರಯೋಜನಕಾರಿಯಾದರೂ ಕೆಲವು ವಸ್ತುಗಳು ಹಾನಿಯುಂಟು ಮಾಡುತ್ತವೆ. ಇದರಿಂದ ಕೂದಲು ಉದುರಲು ಆರಂಭವಾಗಬಹುದು.
ಈ ಕೆಲವು ವಸ್ತುಗಳನ್ನು ಹಚ್ಚುವುದರಿಂದ ಕೂದಲಿಗೆ ಸಾಕಷ್ಟು ತೊಂದರೆಯಾಗುತ್ತದೆ. ಅಂತಹ ಉತ್ಪನ್ನಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕೂದಲಿಗೆ ನಿಂಬೆರಸ ಹಚ್ಚುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ, ಕೂದಲಿಗೆ ಹೊಳಪು ಸಿಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅತಿಯಾದ ನಿಂಬೆರಸದ ಬಳಕೆಯು ಕೂದಲಿಗೆ ಹಾನಿಯುಂಟು ಮಾಡಬಹುದು.
ಕೂದಲಿಗೆ ತಪ್ಪಿಯೂ ಬೇಕಿಂಗ್ ಸೋಡಾ ಹಚ್ಚಬೇಡಿ. ಇದರಿಂದ ನೆತ್ತಿಯ ತೇವಾಂಶ ಆರಿ ಹೋಗುತ್ತದೆ. ಯಾವುದೇ ವಸ್ತುವಿನ ಜೊತೆಗೆ ಬೇಕಿಂಗ್ ಸೋಡಾ ಮಿಶ್ರಣ ಮಾಡಿ ಕೂದಲಿಗೆ ಬಳಸದಿರಿ.
ಕೂದಲನ್ನು ಕಂಡೀಷನಿಂಗ್ ಮಾಡಲು ವಿನೆಗರ್ ಅನ್ನು ನೆತ್ತಿಯ ಭಾಗಕ್ಕೆ ಹಚ್ಚಬೇಡಿ. ವಿನೆಗರ್‌ನಲ್ಲಿರುವ ಆಮ್ಲೀಯ ಗುಣ ಕೂದಲಿಗೆ ಹಾನಿಯುಂಟು ಮಾಡುತ್ತದೆ.
ಕೆಲವರು ಕೂದಲ ಸ್ನಾನಕ್ಕೆ ಸೋಪು ಬಳಸುತ್ತಾರೆ. ಆದರೆ ತಲೆಸ್ನಾನ ಮಾಡಲು ಸೋಪು ಬಳಸುವುದರಿಂದ ಕೂದಲು ಒಣಗಬಹುದು.
ನೀವು ಮನೆಯಲ್ಲೇ ಕೂದಲಿನ ಆರೈಕೆ ಮಾಡಿಕೊಳ್ಳಲು ಬಯಸಿದರೆ ಕೂದಲಿಗೆ ಬಾಳೆಹಣ್ಣು, ಮೊಸರು ಹಾಗೂ ಮೊಟ್ಟೆಯ ಮಿಶ್ರಣ ಬಳಸಬಹುದು.
ತಲೆಸ್ನಾನ ಮಾಡಲು ಯಾವಾಗಲೂ ಉತ್ತಮ ಶ್ಯಾಂಪೂವನ್ನೇ ಆಯ್ಕೆ ಮಾಡಿ. ಶಾಂಪೂ ಹೊರತುಪಡಿಸಿ ಕೂದಲಿಗೆ ಅನುಗುಣವಾಗಿ ಕಂಡೀಷನರ್ ಕೂಡ ಬಳಸಬಹುದು
ಕೂದಲನ್ನು ಪೋಷಿಸಲು ವಾರಕ್ಕೆ ಎರಡು ಬಾರಿ ಎಣ್ಣೆ ಹಾಕಿ. ಒದ್ದೆಯಾದ ಕೂದಲನ್ನು ಚೆನ್ನಾಗಿ ಒಣಗಿಸಿ, ಒದ್ದೆ ಕೂದಲಿಗೆ ಜುಟ್ಟು ಹಾಕದಿರಿ.
ತೂಕ ಇಳಿಕೆಯಿಂದ ತ್ವಚೆಯ ಕಾಳಜಿಯವರೆಗೆ: ಮೊಳಕೆ ಕಾಳುಗಳ ಪ್ರಯೋಜನಗಳಿವು