ಬಾಲಿವುಡ್‌ ನಟಿ ಶಾರ್ವರಿ ವಾಘ್ ರೇಷ್ಮೆಯಂಥ ಕೂದಲಿನ ರಹಸ್ಯ ಈ ಮನೆಮದ್ದು

By Reshma
Jul 30, 2024

Hindustan Times
Kannada

ಹಿಂದಿ ನಟಿ ಶಾರ್ವರಿ ತಮ್ಮ ಅದ್ಭುತ ಅಭಿನಯದ ಮೂಲಕ ಹೆಸರು ಗಳಿಸಿದ್ದಾರೆ. ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದಿದ್ದಾರೆ. 

ಈ ನಟಿ ತನ್ನ ಸೌಂದರ್ಯದಷ್ಟೇ ಪ್ರತಿಭಾವಂತೆ ಕೂಡ. ಹಲವು ಹೆಣ್ಣುಮಕ್ಕಳು ಇವರ ಸೌಂದರ್ಯದ ಗುಟ್ಟೇನಪ್ಪಾ ಎಂದು ಯೋಚಿಸುತ್ತಾರೆ. 

ಈ ನಟಿ ರೇಷ್ಮೆಯಂತೆ ಮೃದುವಾದ ಕೂದಲು ಹೊಂದಿದ್ದಾರೆ. ಜನರು ಆಗಾಗ ಅವರ ಸುಂದರ ಕೂದಲಿನ ರಹಸ್ಯ ಕೇಳುತ್ತಿರುತ್ತಾರೆ. 

ಶಾರ್ವರಿ ಅವರು ಹೇಳುವ ಪ್ರಕಾರ ಆಗಾಗ ತಲೆಸ್ನಾನ ಮಾಡದೇ ಇದ್ದರೆ ಕೂದಲು ಹೊಳಪು ಕಳೆದುಕೊಳ್ಳುತ್ತದೆ. ಅದಕ್ಕಾಗಿಯೇ ಆಕೆ ಕೂದಲಿಗೆ ಅನುಗುಣವಾದ ಶಾಂಪೂ ಬಳಸಿ ತಲೆಸ್ನಾನ ಮಾಡುತ್ತಾರೆ

ಇವರು ಕೂದಲಿಗೆ ಕಂಡೀನಷರ್‌ ಬಳಸುತ್ತಾರಾದರೂ ಅದರ ಪ್ರಮಾಣ ಕಡಿಮೆ. 

ಈ ನಟಿ ವಾರಕ್ಕೆ ಎರಡು ಬಾರಿ ಕೂದಲಿಗೆ ಕೊಬ್ಬರಿ ಎಣ್ಣೆ ಹಾಗೂ ಬಾದಾಮಿ ಎಣ್ಣೆ ಹಚ್ಚಿ ತಲೆಸ್ನಾನ ಮಾಡುತ್ತಾರೆ. ಇದರಿಂದ ಕೂದಲಿಗೆ ಪೋಷಣೆ ದೊರೆಯುತ್ತದೆ ಎಂದು ಅವರು ನಂಬುತ್ತಾರೆ. 

ಶಾರ್ವರಿ ಎಷ್ಟೇ ಬ್ಯುಸಿ ಇದ್ದರೂ ರಾತ್ರಿ ಮಲಗುವಾಗ ಕೂದಲು ಬಿಚ್ಚಿ, ಹರಡಿಕೊಂಡು ಮಲಗುತ್ತಾರೆ. 

ಹೇರ್‌ ಮಾಸ್ಕ್‌ ಬಳಕೆ ಕೂದಲಿಗೆ ತುಂಬಾ ಒಳ್ಳೆಯದು ಎಂದು ನಂಬಿರುವ ಶಾರ್ವರಿ ಮನೆಯಲ್ಲೇ ತಯಾರಿಸಿದ ಹೇರ್‌ಮಾಸ್ಕ್‌ ಬಳಸುತ್ತಾರೆ. 

ಈ ಹೇರ್‌ಮಾಸ್ಕ್‌ಗೆ ಜೇನುತುಪ್ಪ ಬೆರೆಸಿ ಕೂದಲಿಗೆ ಹಚ್ಚುತ್ತಾರೆ. ಇದು ತಲೆಹೊಟ್ಟು ಉಂಟು ಮಾಡುವುದಿಲ್ಲ. ಕೂದಲು ಉದುರುವುದನ್ನು ತಡೆಯುತ್ತದೆ ಮಾತ್ರವಲ್ಲ ಕೂದಲಿಗೆ ಹೊಳಪನ್ನ ಹೆಚ್ಚಿಸುತ್ತದೆ. 

ನಾವು ಸೇವಿಸುವ ಆಹಾರವು ಕೂದಲಿಗೆ ಪೋಷಣೆ ಒದಗಿಸುತ್ತದೆ ಎಂದು ಶಾರ್ವರಿ ನಂಬುತ್ತಾರೆ. ಅದಕ್ಕಾಗಿ ವಿಟಮಿನ್‌ ಹಾಗೂ ಪ್ರೊಟೀನ್‌ ಸಮೃದ್ಧ ಆಹಾರಗಳನ್ನು ಹೆಚ್ಚು ಸೇವಿಸಬೇಕು ಎನ್ನಲಾಗುತ್ತದೆ. 

ಪ್ರೊ ಕಬಡ್ಡಿ ಲೀಗ್: ಸಾರ್ವಕಾಲಿಕ ಟಾಪ್-10 ರೈಡರ್ಸ್