ಕೂದಲು ಉದುರಲು ನಮ್ಮ ಈ 10 ತಪ್ಪುಗಳೇ ಪ್ರಮುಖ ಕಾರಣ

By Reshma
Aug 01, 2024

Hindustan Times
Kannada

ಕೂದಲಿಗೆ ಹೆಚ್ಚು ಹೆಚ್ಚು ಕಂಡೀಷನರ್‌ ಬಳಸುವುದರಿಂದ ಕೂದಲು ನಯವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ. ಆದರೆ ಕೂದಲಿಗೆ ಹೆಚ್ಚು ಕಂಡೀಷನರ್‌ ಬಳಸುವುದರಿಂದ ಕೂದಲು ಉದುರುತ್ತದೆ.

ಸಾಮಾನ್ಯವಾಗಿ ಜನರು ತಮ್ಮ ಕೂದಲಿನ ಪ್ರಕಾರವನ್ನು ತಿಳಿಯದೇ ಶಾಂಪೂ ಬಳಸುತ್ತಾರೆ. ನೀವು ನಿಮ್ಮ ಕೂದಲಿಗೆ ಹೊಂದದ ಶಾಂಪೂ ಬಳಸಿದರೆ ಕೂದಲು ಉದುರುವುದು ನಿಲ್ಲುವುದಿಲ್ಲ. 

ಒದ್ದೆ ಕೂದಲನ್ನು ಬಾಚಿದರೆ ಕೂದಲು ಉದುರುವುದು ಖಂಡಿತ. ಕೂದಲು ಒಣಗಿದ ನಂತರವಷ್ಟೇ ಬಾಚಿಕೊಳ್ಳಬೇಕು.

ಕೂದಲಿನ ಆರೈಕೆಗೆ ಭಾಗವೆಂದರೆ ಟ್ರಿಮ್ಮಿಂಗ್‌. ನಿಮ್ಮ ಕೂದಲನ್ನು ಸರಿಯಾಗಿ ಟ್ರಿಮ್‌ ಮಾಡಿಲ್ಲ ಎಂದರೆ ಕೂದಲು ಉದುರುವ ಜೊತೆ ತುದಿ ಸೀಳುತ್ತದೆ. 

ದಿನಕ್ಕೆ 5 ರಿಂದ 6 ಬಾರಿ ಕೂದಲು ಬಾಚುವ ಅಭ್ಯಾಸ ಇದ್ದರೂ ಕೂದಲು ಉದುರುತ್ತದೆ. ಯಾಕೆಂದರೆ ಅತಿಯಾಗಿ ಕೂದಲು ಬಾಚುವುದರಿಂದ ನೆತ್ತಿ ದುರ್ಬಲವಾಗುತ್ತದೆ. 

ಕೂದಲು ಒದ್ದೆಯಾಗಿದ್ದಾಗ ಸ್ಟೈಲಿಂಗ್‌ ಮಾಡುವುದು ಕೂದಲು ಸೀಳಲು ಕಾರಣವಾಗುತ್ತದೆ. ಸ್ಟೈಲಿಂಗ್‌ ಉಪಕರಣದಿಂದ ಹೊರ ಹೊಮ್ಮುವ ಶಾಖ ಕೂದಲಿಗೆ ಹಾನಿ ಮಾಡುತ್ತದೆ. 

ಕೂದಲು ಒದ್ದೆಯಾಗಿದ್ದಾಗ ಸ್ಟೈಲಿಂಗ್‌ ಮಾಡುವುದು ಕೂದಲು ಸೀಳಲು ಕಾರಣವಾಗುತ್ತದೆ. ಸ್ಟೈಲಿಂಗ್‌ ಉಪಕರಣದಿಂದ ಹೊರ ಹೊಮ್ಮುವ ಶಾಖ ಕೂದಲಿಗೆ ಹಾನಿ ಮಾಡುತ್ತದೆ. 

ಕೂದಲಿಗೆ ಅತಿಯಾದ ರಾಸಾಯನಿಕ ಚಿಕಿತ್ಸೆ ತೆಗೆದುಕೊಳ್ಳುವುದು ಕೂಡ ಕೂದಲು ಉದುರಲು ಕಾರಣವಾಗುತ್ತದೆ. 

ಸ್ಟ್ರೈಟನರ್‌, ಕಟ್ಟರ್‌ಗಳಂತಹ ಶಾಖದ ನೀಡುವ ಪರಿಕರಗಳ ಅತಿಯಾದ ಬಳಕೆಯು ಕೂದಲು ಹೆಚ್ಚು ಉದುರುವಂತೆ ಮಾಡುತ್ತದೆ. 

ರಾತ್ರಿ ಮಲಗುವಾಗ ಕೂದಲನ್ನು ಬಿಗಿಯಾಗಿ ಕಟ್ಟಿಕೊಂಡು ಮಲಗುವುದು ಕೂಡ ಕೂದಲು ಉದರಲು ಕಾರಣವಾಗುತ್ತದೆ. 

ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು