ತೆಂಗಿನೆಣ್ಣೆ ಜತೆ ಈ ಒಂದು ವಸ್ತು ಬೆರೆಸಿ ಹಚ್ಚಿದ್ರೆ  ದಟ್ಟ, ಸೊಂಪಾದ ಕೂದಲು ನಿಮ್ಮದಾಗುತ್ತೆ 

By Reshma
Sep 04, 2024

Hindustan Times
Kannada

ಕೂದಲನ್ನು ಪೋಷಿಸಲು ಪೌಷ್ಟಿಕ ಆಹಾರ ಸೇವನೆಯ ಜೊತೆಗೆ ಎಣ್ಣೆ ಹಚ್ಚುವುದು ಕೂಡ ಅಷ್ಟೇ ಮುಖ್ಯ 

ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲಿನ ಬೇರುಗಳು ಬಲಗೊಳ್ಳುತ್ತವೆ. ಇದರಿಂದ ಕೂದಲಿನ ಬೆಳವಣಿಗೆ ಸುಧಾರಿಸುತ್ತದೆ 

ಹಲವರು ಕೂದಲಿನ ಆರೈಕೆಗೆ ತೆಂಗಿನೆಣ್ಣೆ ಬಳಸುತ್ತಾರೆ. ಇದು ಕೂದಲಿಗೆ ತುಂಬಾ ಪ್ರಯೋಜನಕಾರಿ 

ತೆಂಗಿನೆಣ್ಣೆಯ ಕೂದಲಿಗೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತದೆ. ಇದು ಲಾರಿಕ್ ಆಮ್ಲವನ್ನು ಕೂಡ ಹೊಂದಿದೆ. ಇದು ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆ 

ತೆಂಗಿನೆಣ್ಣೆಯಲ್ಲಿ ವಿಟಮಿನ್ ಇ ಕ್ಯಾಪ್ಸುಲ್ ಮಿಶ್ರಣ ಮಾಡುವುದರಿಂದ ದುಪ್ಪಟ್ಟು ಲಾಭವಿದೆ. ಕೂದಲಿನ ಬೆಳವಣಿಗೆ ಹಾಗೂ ಕೂದಲು ಬುಡದಿಂದ ಸದೃಢವಾಗಲು ಇದು ಸಹಕಾರಿ

ಎರಡು ವಿಟಮಿನ್ ಇ ಕ್ಯಾಪ್ಸುಲ್ ತೆಗೆದುಕೊಂಡು ಅದನ್ನು ಕತ್ತರಿಸಿ ಅದರಿಂದ ಜೆಲ್ ಹೊರ ತೆಗೆಯಿರಿ. ಇದಕ್ಕೆ ತೆಂಗಿನೆಣ್ಣೆ ಬೆರೆಸಿ. ಇದನ್ನು ನೆತ್ತಿ ಹಾಗೂ ಕೂದಲಿಗೆ ಹಚ್ಚಿ 

ಈ ಎರಡನ್ನೂ ಒಟ್ಟಿಗೆ ಹಚ್ಚುವುದರಿಂದ ಕೂದಲಿಗೆ ಪೋಷಣೆ ದೊರೆಯುತ್ತದೆ. ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ 

ಈ ಸುದ್ದಿಯ ಸಾಮಾನ್ಯಜ್ಞಾನವನ್ನು ಆಧರಿಸಿದೆ, ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ 

ರಕ್ತ ಹೆಚ್ಚೋದಷ್ಟೇ ಅಲ್ಲ, ಪ್ರತಿದಿನ ದಾಳಿಂಬೆ ತಿನ್ನೋದ್ರಿಂದ ಇಷ್ಟೆಲ್ಲಾ ಪ್ರಯೋಜನವಿದೆ