ಕೂದಲು ಚೆನ್ನಾಗಿ ಬೆಳೆಯಲು ಈರುಳ್ಳಿ ಜೊತೆ ಕಾಫಿಪುಡಿಯನ್ನು ಹೀಗೆ ಬಳಸಿ
By Reshma Sep 14, 2024
Hindustan Times Kannada
ಇತ್ತೀಚೆಗೆ ಹಲವರು ಕೂದಲ ಆರೈಕೆ ಹಾಗೂ ಬೆಳವಣಿಗೆಗೆ ಮನೆಮದ್ದಿನ ಮೊರೆ ಹೋಗುತ್ತಾರೆ. ಇದರಿಂದ ಅಡ್ಡಪರಿಣಾಮಗಳು ಕಡಿಮೆ ಹಾಗೂ ಇವು ಹೆಚ್ಚು ಪರಿಣಾಮಕಾರಿ
ಈರುಳ್ಳಿ ಕೂದಲಿಗೆ ಸಾಕಷ್ಟು ಪ್ರಯೋಜನಕಾರಿ. ಕೆಲವರು ಈರುಳ್ಳಿ ರಸವನ್ನು ಕೂದಲಿಗೆ ಹಚ್ಚುತ್ತಾರೆ. ಇನ್ನೂ ಕೆಲವರು ಈರುಳ್ಳಿ ಎಣ್ಣೆ ಬಳಸುತ್ತಾರೆ
ಕೂದಲಿನ ಉತ್ತಮ ಬೆಳವಣಿಗೆಗೆ ಈರುಳ್ಳಿ ಜೊತೆ ಈ ಒಂದು ವಸ್ತುವನ್ನು ಮಿಶ್ರಣ ಮಾಡಬೇಕು. ಇದರಿಂದ ಅಚ್ಚರಿಯ ರೀತಿಯಲ್ಲಿ ಕೂದಲು ಬೆಳೆಯುತ್ತದೆ
ಮೊದಲು ಈರುಳ್ಳಿಯನ್ನು ಕತ್ತರಿಸಿ, ಅದನ್ನು ರುಬ್ಬಿ ರಸವನ್ನು ಹಿಂಡಿ ಒಂದು ಪಾತ್ರೆಯಲ್ಲಿ ತೆಗೆದು ಇರಿಸಿಕೊಳ್ಳಿ
ಈರುಳ್ಳಿ ರಸದಲ್ಲಿ ಒಂದು ಚಮಚ ಕಾಫಿ ಪುಡಿ ಸೇರಿಸಿ ಮಿಶ್ರಣ ಮಾಡಿ ಇದನ್ನು ಸ್ಪೇ ಬಾಟಲಿಯಲ್ಲಿ ತುಂಬಿಸಿಟ್ಟುಕೊಳ್ಳಿ
ತಲೆಸ್ನಾನ ಮಾಡುವ ಮೊದಲು ಇದನ್ನು ಕೂದಲಿಗೆ ಸ್ಪ್ರೇ ಮಾಡಿ ಹಾಗೂ ನಿಧಾನಕ್ಕೆ ಮಸಾಜ್ ಮಾಡಿ. ಉತ್ತರ ಫಲಿತಾಂಶಕ್ಕೆ ವಾರಕ್ಕೆ ಎರಡು ಬಾರಿ ಈ ಸ್ಪ್ರೇ ಬಳಸಬಹುದು
ಕಾಫಿ ಹಾಗೂ ಈರುಳ್ಳಿ ಎರಡೂ ಕೂದಲಿನ ಆರೋಗ್ಯಕ್ಕೆ ಉತ್ತಮ. ಇದರಿಂದ ಕೂದಲಿನ ಹೊಳಪು ಹೆಚ್ಚುತ್ತದೆ ಹಾಗೂ ತಲೆಹೊಟ್ಟು ಸಾಕಷ್ಟು ಕಡಿಮೆಯಾಗುತ್ತದೆ
ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳಲ್ಲಿ ಯಾವುದಾದರೂ ನಿಮಗೆ ಅಲರ್ಜಿ ಇದ್ದರೆ ಅಥವಾ ನೀವು ಕೂದಲಿಗೆ ಚಿಕಿತ್ಸೆ ಪಡೆಯುತ್ತಿದ್ದರೆ ಇದನ್ನ ಬಳಸುವ ಮುನ್ನ ತಜ್ಞರಿಂದ ಸಲಹೆ ಪಡೆಯಿರಿ