ತುಂಬಾ ಕೂದಲು ಉದುರುತ್ತಾ ಇದ್ಯಾ, ಅಡುಗೆಮನೆಯಲ್ಲೇ ಸಿಗುವ ಈ ವಸ್ತುಗಳನ್ನೊಮ್ಮೆ ಬಳಸಿ ನೋಡಿ

By Reshma
Mar 27, 2024

Hindustan Times
Kannada

ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತಿದೆ. ತ್ವರಿತವಾಗಿ ಕೂದಲು ಉದುರುವುದನ್ನು ನಿಲ್ಲಿಸಲು ಅಡುಗೆಮನೆಯಲ್ಲೇ ಇರುವ ಈ 10 ಪದಾರ್ಥಗಳು ನಿಮಗೆ ನೆರವಾಗುತ್ತವೆ. 

ತೆಂಗಿನೆಣ್ಣೆ: ತೆಂಗಿನೆಣ್ಣೆ ಬಿಸಿ ಮಾಡಿ ಕೂದಲಿನ ಬುಡಕ್ಕೆ ಮಸಾಜ್‌ ಮಾಡುವುದರಿಂದ ಕಿರುಕೀಲಗಳನ್ನು ಪೋಷಿಸುತ್ತದೆ. ಅಲ್ಲದೇ ಕೂದಲು ಬುಡದಿಂದಲೇ ಸದೃಢವಾಗುತ್ತದೆ. 

ಆಲೊವೆರಾ: ಲೋಳೆಸರದ ತಿರುಳನ್ನು ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್‌ ಮಾಡುವುದರಿಂದ ಉರಿಯೂತ ನಿವಾರಣೆಯಾಗಿ, ಕೂದಲು ಉದುರುವುದು ನಿಲ್ಲುತ್ತದೆ. 

ಈರುಳ್ಳಿ ರಸ: ಸಲ್ಫರ್‌ ಅಂಶ ಅಧಿಕವಾಗಿರುವ ಈರುಳ್ಳಿ ರಸವು ನೆತ್ತಿಯ ಬುಡಕ್ಕೆ ರಕ್ತಹರಿವನ್ನು ಹೆಚ್ಚಿಸುತ್ತದೆ. ಇದು ಫಾಲಿಕಲ್‌ಗಳನ್ನು ಸದೃಢವಾಗಿಸಿ, ಕೂದಲು ಉದುರುವುದನ್ನು ತಡೆಯುತ್ತದೆ. 

ಮೊಟ್ಟೆ: ಮೊಟ್ಟೆಯಲ್ಲಿ ಕೂದಲಿಗೆ ಅವಶ್ಯವಿರುವ ಪ್ರೊಟೀನ್‌ ಹಾಗೂ ಬಯೋಟಿನ್‌ ಅಂಶವಿದೆ. ಮೊಟ್ಟೆಯ ಮಾಸ್ಕ್‌ ಬಳಸುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.

ಮೊಸರು: ಮೊಸರಿನ ಮಾಸ್ಕ್‌ ಹಚ್ಚುವುದರಿಂದ ನೆತ್ತಿಯ ಭಾಗ ಸದೃಢವಾಗಿ ಕೂದಲು ಉದುರುವುದು ನಿಲ್ಲುತ್ತದೆ. 

ಮೆಂತ್ಯೆ: ಮೆಂತ್ಯೆ ಪೇಸ್ಟ್‌ ಅನ್ನು ಕೂದಲಿಗೆ ಹಚ್ಚಿಕೊಳ್ಳುವುದರಿಂದ ಕೂಡ ಕೂದಲು ಉದುರುವುದನ್ನು ತಡೆಯಬಹುದು. 

ಗ್ರೀನ್‌ ಟೀ: ತಣ್ಣಗಿನ ಗ್ರೀನ್‌ ಟೀಯನ್ನು ಕೂದಲಿನ ಬುಡಕ್ಕೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಹರಳೆಣ್ಣೆ: ಹರಳೆಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್‌ ಮಾಡಿಕೊಳ್ಳುವುದರಿಂದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ದಾಸವಾಳ: ದಾಸವಾಳದ ಹೂ ಹಾಗೂ ಎಲೆಗಳನ್ನು ರುಬ್ಬಿ ಪೇಸ್ಟ್‌ ತಯಾರಿಸಿ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳುವುದರಿಂದ ಕೂದಲ ಬೆಳವಣಿಗೆ ವೃದ್ಧಿಯಾಗುತ್ತದೆ. 

ನೆಲ್ಲಿಕಾಯಿ: ವಿಟಮಿನ್‌ ಸಿ ಹಾಗೂ ಆಂಟಿಆಕ್ಸಿಡೆಂಟ್‌ ಅಂಶ ಸಮೃದ್ಧವಾಗಿರುವ ನೆಲ್ಲಿಕಾಯಿ ಫಾಲಿಕಲ್‌ಗಳನ್ನು ಸದೃಢವಾಗಿಸಿ, ಕೂದಲು ಉದುರುವುದನ್ನು ತಡೆಯುತ್ತದೆ. 

ಐಪಿಎಲ್​ನಲ್ಲಿ ನೂತನ ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ