ಕೂದಲು ಉದ್ದವಾಗಿ, ದಟ್ಟವಾಗಿ ಬೆಳೆಯಲು ಈ ಕೊರಿಯನ್ ಹೇರ್‌ಮಾಸ್ಕ್ ಬಳಸಿ ನೋಡಿ
By Reshma Sep 18, 2024
Hindustan Times Kannada
ಹೆಣ್ಣುಮಕ್ಕಳು ಸಾಮಾನ್ಯವಾಗಿ ದಟ್ಟ, ಉದ್ದ ಕೂದಲು ಹೊಂದಲು ಬಯಸುವುದು ಸಹಜ. ಕೂದಲು ಸೊಂಪಾಗಿ ಬೆಳೆಯಲು ಹಲವು ಉತ್ಪನ್ನಗಳನ್ನು ಬಳಸುತ್ತಾರೆ
ಕೊರಿಯಾದ ಹುಡುಗಿಯರ ಕೂದಲು ಸಾಮಾನ್ಯವಾಗಿ ಉದ್ದವಾಗಿ, ದಪ್ಪವಾಗಿರುತ್ತದೆ ಹಾಗೂ ಕಪ್ಪಾಗಿರುತ್ತದೆ. ಇವರು ಕೂದಲಿಗೆ ಬಳಸುವುದು ಕೇವಲ ಮನೆಮದ್ದು
ನೀವು ಕೂಡ ಮನೆಯಲ್ಲೇ ಉದ್ದವಾದ, ದಪ್ಪವಾದ, ಹೊಳೆಯುವ ಕೂದಲನ್ನು ಹೊಂದಬಹುದು. ಅದಕ್ಕಾಗಿ ಈ ಕೊರಿಯನ್ ಹೇರ್ ಮಾಸ್ಕ್ ಅನ್ನು ಹಚ್ಚಿ. ಇದನ್ನು ಹೇಗೆ ಮಾಡೋದು ಎಂದು ನಾವು ನಿಮಗೆ ತಿಳಿಸುತ್ತೇವೆ.
ಈ ಹೇರ್ ಮಾಸ್ಕ ತಯಾರಿಸಲು ಕರಿಬೇವಿನ ಎಲೆ, ನೀರು ಹಾಗೂ ಶಾಂಪೂ ಬೇಕಾಗುತ್ತದೆ
ಹೇರ್‌ಮಾಸ್ಕ್ ಮಾಡಲು ಆಲೊವೆರಾ ಜೆಲ್, ಕರಿಬೇವಿನ ಎಲೆಗಳಿಗೆ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಪೇಸ್ಟ್ ಸಿದ್ಧವಾದ ನಂತರ ಅದಕ್ಕೆ ಶಾಂಪೂ ಸೇರಿಸಿ.
ಈ ಹೇರ್‌ಮಾಸ್ಕ್ ಅನ್ನು ಕೂದಲಿಗೆ ಹಚ್ಚಿ, ನಿಧಾನಕ್ಕೆ ಮಸಾಜ್ ಮಾಡಿ. 15 ನಿಮಿಷ ಹಾಗೇ ಬಿಡಿ.
ಉಗುರು ಬೆಚ್ಚಗಿನ ನೀರಿನಿಂದ ತಲೆಸ್ನಾನ ಮಾಡಿ. ಕೂದಲನ್ನು ನೈಸರ್ಗಿಕವಾಗಿ ಒಣಗಲು ಬಿಡಿ. ಕೂದಲು ಒಣಗಿದ ನಂತರ ನಿಮಗೆ ವ್ಯತ್ಯಾಸ ಗೋಚರವಾಗುತ್ತದೆ.
ಈ ಹೇರ್‌ಮಾಸ್ಕ್ ಬಳಸುವುದರಿಂದ ಕೂದಲು ಉದ್ದವಾಗಿ, ದಪ್ಪವಾಗಿ ಹಾಗೂ ನೈಸರ್ಗಿಕವಾಗಿ ಕಪ್ಪಾಗುತ್ತದೆ
ಕೂದಲು ಮೃದುವಾಗಿ, ಸುಂದರವಾಗಿ ಕಾಣುವಂತೆ ಮಾಡುತ್ತದೆ ಈ ಹೇರ್‌ಮಾಸ್ಕ್
ಈ ಹೇರ್‌ಮಾಸ್ಕ್ ಅನ್ನು ವಾರಕ್ಕೊಮ್ಮೆ ಬಳಸಬಹುದು. ಕೂದಲು ಅಥವಾ ನೆತ್ತಿಯ ಬುಡದಲ್ಲಿ ಯಾವುದೇ ಅಲರ್ಜಿ ಇದ್ದರೆ ಪ್ಯಾಚ್ ಟೆಸ್ಟ್ ಮಾಡಿಸಿ
ಡೈಪರ್ ಹಾಕಿದರೆ ನಿಜವಾಗಿಯೂ ಮಕ್ಕಳ ಕಾಲು ಅಗಲವಾಗುತ್ತಾ? ಇಲ್ಲಿದೆ ಉತ್ತರ