ಕೆಲವೇ ದಿನಗಳಲ್ಲಿ ಕೂದಲು ಉದುರುವುದು ನಿಲ್ಲಬೇಕು ಅಂದ್ರೆ ಈ ಮನೆಮದ್ದು ಟ್ರೈ ಮಾಡಿ

By Reshma
Dec 10, 2024

Hindustan Times
Kannada

ಪ್ರತಿ ಹುಡುಗಿಯೂ ದಟ್ಟವಾದ, ಉದ್ದನೆಯ ಕೂದಲು ಬಯಸುತ್ತಾರೆ, ಕೂದಲ ಆರೋಗ್ಯಕ್ಕಾಗಿ ಹಲವು ಉತ್ಪನ್ನಗಳನ್ನು ಬಳಸುತ್ತಾರೆ 

ಆದರೆ ಇತ್ತೀಚೆಗೆ ಕೂದಲು ಉದುರಲು ಶುರುವಾಗಿದೆ. ಉದುರುವುದರಿಂದ  ಕೂದಲು ತೆಳ್ಳಗಾಗಿ ಕಾಣಿಸುತ್ತದೆ 

ಕೂದಲು ಉದುರುವುದನ್ನು ತಡೆಯಲು ದುಬಾರಿ ಶಾಂಪೂ ಹಾಗೂ ಎಣ್ಣೆಗಳನ್ನು ಬಳಸಲಾಗುತ್ತದೆ

ಇದರ ಬದಲು ಕೂದಲು ಉದುರುವುದನ್ನು ನಿಲ್ಲಿಸಲು ನೀವು ಪರಿಣಾಮಕಾರಿ ಮನೆಮದ್ದುಗಳನ್ನು ಪ್ರಯತ್ನಿಸಬಹುದು 

ಮೆಂತ್ಯವನ್ನು ನೀರಿನಲ್ಲಿ ನೆನೆಸಿ, ಅದನ್ನು ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿ 1 ಗಂಟೆ ಇರಿಸಿ. ಇದು ಕೂದಲು ಉದುರುವುದನ್ನು ತಡೆಯಲು ಬೆಸ್ಟ್ ಔಷಧಿ 

ಸೀಗೆಕಾಯಿ: ನೀವು ಕೂದಲು ಉದುರುವುದನ್ನು ತಡೆಯಲು ಸೀಗೆಕಾಯಿ ಎಣ್ಣೆ ಅಥವಾ ಪುಡಿಯನ್ನು ಬಳಸಬಹುದು 

ನೆಲ್ಲಿಕಾಯಿ ಕೂದಲಿನ ಆರೋಗ್ಯಕ್ಕೆ ಪರಮೌಷಧಿ. ನೆಲ್ಲಿಕಾಯಿ ಪುಡಿಯಿಂದ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿ. 1 ಗಂಟೆ ಬಿಟ್ಟು ಶಾಂಪೂ ಬಳಸಿ ತಲೆಸ್ನಾನ ಮಾಡಿ 

ತುಳಸಿ ಎಲೆಗಳನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ ಅದಕ್ಕೆ ತೆಂಗಿನೆಣ್ಣೆ ಬೆರೆಸಿ ಕೂದಲಿಗೆ ಹಚ್ಚಿ. ಇದರಿಂದ ಕೂಡಲೇ ನೀವು ವ್ಯತ್ಯಾಸ ಗುರುತಿಸುತ್ತೀರಿ 

ಬೇವಿನ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ. ಆ ನೀರಿನ್ನು ಕೂದಲಿಗೆ ಹಚ್ಚಿ ತಲೆಸ್ನಾನ ಮಾಡಿ, ಇದರಿಂದ ಕೂಡ ಕೂದಲು ಉದುರುವುದು ನಿಲ್ಲುವುದು 

ನಿಮ್ಮ ಕೂದಲಿಗೆ ಏನನ್ನಾದರೂ ಹಚ್ಚುವ ಮೊದಲು ಪ್ಯಾಚ್ ಟೆಸ್ಟ್ ಮಾಡಲು ಮರೆಯದಿರಿ 

ದೇಹಾರೋಗ್ಯ ವೃದ್ಧಿಸುವ  ಹುಳಿ, ಕಹಿ ರುಚಿ ಹೊಂದಿರುವ ಆಹಾರಗಳು