ಕೂದಲಿನ ಅಂದ-ಆರೋಗ್ಯಕ್ಕೆ ಅಕ್ಕಿ ನೀರಿಗಿಂತ ಉತ್ತಮ ಔಷಧಿಯಿಲ್ಲ
By Reshma Aug 07, 2024
Hindustan Times Kannada
ಅಕ್ಕಿ ನೆನೆಸಿದ ಅಥವಾ ತೊಳೆದ ನೀರಿನಲ್ಲಿ ಖನಿಜಗಳು ಹಾಗೂ ಕ್ಯಾಲ್ಸಿಯಂನಂತಹ ಹಲವು ಪೋಷಕಾಂಶಗಳಿವೆ. ಇದು ಕೂದಲಿಗೆ ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ.
ಅಕ್ಕಿ ನೀರನ್ನು ಕೂದಲಿಗೆ ಹಚ್ಚುವುದರಿಂದ ಆಗುವ ಪ್ರಯೋಜನಗಳು ಮತ್ತು ಅದನ್ನು ತಯಾರಿಸುವ ಹಾಗೂ ಅದನ್ನ ಬಳಸುವ ಸರಿಯಾದ ವಿಧಾನದ ಕುರಿತು ಇಲ್ಲಿದೆ ಮಾಹಿತಿ.
ಅಕ್ಕಿ ನೀರು ಕಂಡೀಷನರ್ ಅಂತೆ ಕೂದಲಿಗೆ ಹೊಳಪು ನೀಡುತ್ತದೆ ಮತ್ತು ಕೂದಲನ್ನು ಮೃದುಗೊಳಿಸುತ್ತದೆ
ಕೂದಲ ಬೆಳವಣಿಗೆಗೆ ಅಕ್ಕಿ ನೀರು ಕೂಡ ಪ್ರಯೋಜನಕಾರಿ. ಇದರ ನಿರಂತರ ಬಳಕೆಯಿಂದ ಕೂದಲು ಉದ್ದ ಬೆಳೆಯುತ್ತದೆ.
ಅಕ್ಕಿ ನೀರು ಅಕಾಲಿಕ ಬಾಲನೆರೆಯನ್ನು ತಡೆಯುತ್ತದೆ. ಇದು ಕೂದಲು ನೈಸರ್ಗಿಕವಾಗಿ ಕಪ್ಪಾಗುವಂತೆ ಮಾಡುತ್ತದೆ.
ಯಾವುದೇ ರೀತಿಯ ನೆತ್ತಿಯ ಸೋಂಕು ಇದ್ದರೆ ಇದು ಗುಣಪಡಿಸುತ್ತದೆ. ಇದರ ಬಳಕೆಯಿಂದ ಕೂದಲಿನಲ್ಲಿ ಕೊಳೆ ಸಂಗ್ರಹವಾಗುವುದಿಲ್ಲ.
ಅಕ್ಕಿ ಸಂಪೂರ್ಣವಾಗಿ ಶುದ್ಧವಾಗುವವರೆಗೆ ಅದನ್ನು ಚೆನ್ನಾಗಿ ತೊಳೆಯಿರಿ. ನಂತರ ಪಾತ್ರೆಗೆ ಸ್ವಲ್ಪ ನೀರು ಹಾಗೂ ಅಕ್ಕಿ ಸೇರಿಸಿ ಚೆನ್ನಾಗಿ ಕುದಿಸಿ. ಸ್ವಲ್ಪ ಹೊತ್ತು ಅಕ್ಕಿ ಬೇಯಲು ಬಿಡಿ.
ಇದು ಬಿಳಿಯಾದ ದಪ್ಪ ದ್ರವದಂತೆ ಕಾಣಿಸಿಲು ಆರಂಭವಾಗುತ್ತದೆ. ನಂತರ ಫಿಲ್ಟರ್ ಮಾಡಿ, ತಣ್ಣಗಾಗಲು ಬಿಡಿ.
ಶಾಂಪೂ ಹಾಕಿ ತಲೆಸ್ನಾನ ಮಾಡಿದ ನಂತರ ಅಕ್ಕಿ ನೀರನ್ನು ಕಂಡೀಷನರ್ ರೂಪದಲ್ಲಿ ಬಳಸಿ. ಹದಿನೈದು ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.
ಈ ಅಕ್ಕಿ ನೀರಿಗೆ ಕೆಲವು ಹನಿ ಆಲೊವೆರಾ ಜೆಲ್ ಹಾಗೂ ಸಾರಭೂತ ತೈಲವನ್ನು ಮಿಶ್ರಣ ಮಾಡಿ ಹೇರ್‌ಮಾಸ್ಕ್ ತಯಾರಿಸಬಹುದು. ಇದನ್ನು ವಾರಕ್ಕೆ ಎರಡು ಬಾರಿ ಹಚ್ಚಿ.
ಲೆಬನಾನ್ ಸ್ಪೋಟದ ಬಳಿಕ ಸುದ್ದಿಯಲ್ಲಿರುವ ಪೇಜರ್ ಅಂದ್ರೆ ಏನು? ಇಲ್ಲಿದೆ 10 ಪಾಯಿಂಟ್ಸ್