ಪುರುಷರಲ್ಲಿ ಅತಿಯಾಗಿ ಕೂದಲು ಉದುರಲು ಇವೇ ಪ್ರಮುಖ ಕಾರಣಗಳು

By Reshma
May 15, 2024

Hindustan Times
Kannada

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿದೆ. ಹೆಣ್ಣಿರಲಿ ಗಂಡಿರಲಿ ಚಿಕ್ಕ ವಯಸ್ಸಿನಿಂದಲೇ ಕೂದಲು ಉದುರುವ ಸಮಸ್ಯೆ ಶುರುವಾಗುತ್ತದೆ. 

ಪುರುಷರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತಿದೆ. ಇದರಿಂದ ತಲೆ ಬೋಳಾಗುತ್ತಿದೆ. ಬೊಕ್ಕತಲೆಯು ಅಂದ ಕೆಡಲು ಕಾರಣವಾಗಿದೆ. 

ಹಾಗಾದರೆ ಗಂಡುಮಕ್ಕಳಲ್ಲಿ ಕೂದಲು ಉದುರಲು ಕಾರಣವೇನು, ಇದನ್ನು ನಿಯಂತ್ರಿಸುವುದು ಹೇಗೆ ನೋಡಿ. 

ಸಾಮಾನ್ಯವಾಗಿ ಪುರುಷರು ತಲೆಗೆ ಸಿಕ್ಕ ಸಿಕ್ಕ ಶಾಂಪೂ, ಸಾಬೂನುಗಳನ್ನು ಬಳಸುತ್ತಾರೆ. ಇದು ಅವರಲ್ಲಿ ಅಕಾಲಿಕ ಕೂದಲು ಉದುರುವ ಸಮಸ್ಯೆಗೆ ಕಾರಣವಾಗುತ್ತದೆ.

ಆಹಾರವು ಪುರುಷರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಲು ಕಾರಣವಾಗುತ್ತದೆ. ಎಣ್ಣೆಯಂಶ ಇರುವ ಆಹಾರಗಳನ್ನು ಅತಿಯಾಗಿ ತಿನ್ನುವುದು ಕೂದಲು ಉದುರಲು ಕಾರಣವಾಗುತ್ತದೆ. 

ಕೂದಲಿಗೆ ಬಣ್ಣ ಹಚ್ಚಿಸುವುದು ಇಂದಿನ ಫ್ಯಾಷನ್‌. ಇದು ಸ್ಟೈಲಿಶ್‌ ನೋಟಕ್ಕೆ ಬೆಸ್ಟ್‌ ಎನ್ನಿಸಿದರೂ ಕೂಡ ಇದರಲ್ಲಿರುವ ರಾಸಾಯನಿಕಗಳು ಕೂದಲು ಉದುರಲು ಕಾರಣವಾಗುತ್ತದೆ. 

ದಿನದಲ್ಲಿ 2, 3 ಬಾರಿ ತಲೆ ಸ್ನಾನ ಮಾಡುವುದು ಕೂಡ ಕೂದಲು ಉದುರಲು ಕಾರಣವಾಗುತ್ತದೆ. 

ಪುರುಷರು ಚಿಕ್ಕ ಕೂದಲು ಹೊಂದಿರುತ್ತಾರೆ. ಅವರು ತಮ್ಮ ಕೂದಲಿನ ಬುಡದಿಂದಲೇ ಕಂಡೀಷನರ್‌ ಬಳಸುತ್ತಾರೆ. ನೆತ್ತಿಯ ಭಾಗಕ್ಕೆ ಕಂಡೀಷನರ್‌ ಬಳಸುವುದು ಕೂಡ ಕೂದಲು ಉದುರಲು ಕಾರಣವಾಗುತ್ತದೆ. 

ಕೂದಲು ಉದುರುವುದನ್ನ ತಡೆಯಲು ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿ. ತಲೆಹೊಟ್ಟು ಇದ್ದರೆ ವಾರಕ್ಕೊಮ್ಮೆ ಮೊಸರಿನ ಹೇರ್‌ಪ್ಯಾಕ್‌ ಹಚ್ಚಿ. 

ನೆತ್ತಿಯ ಭಾಗಕ್ಕೆ ಯಾವುದೇ ಕಾರಣಕ್ಕೂ ಕಂಡೀಷನರ್‌ ತಾಕದಂತೆ ನೋಡಿಕೊಳ್ಳಿ. ಶಾಂಪೂ ಸೇರಿದಂತೆ ಯಾವುದೇ ರಾಸಾಯನಿಕ ವಸ್ತುಗಳು ಕೂದಲ ಬುಡಕ್ಕೆ ತಾಕದಂತೆ ನೋಡಿಕೊಳ್ಳಿ. ದಿನಕೊಮ್ಮೆ ತಲೆಸ್ನಾನ ಮಾಡಿ ಕೂದಲನ್ನು ಚೆನ್ನಾಗಿ ಒಣಗಿಸಿ. 

 ಪಿತೃಪಕ್ಷದಲ್ಲಿ ಈ 4 ತಪ್ಪುಗಳನ್ನು ಮಾಡಬೇಡಿ