ಪೇರಳೆ ಅಥವಾ ಸೀಬೆ ಹಣ್ಣು ತಿನ್ನುವುದರಿಂದಾಗುವ ಪ್ರಯೋಜನಗಳು ಹಲವು. ಅದೇ ರೀತಿ ಇದರ ಎಲೆಯ ರಸ ಕುಡಿಯುವುದೂ ಕೂಡ ಆರೋಗ್ಯಕ್ಕೆ ಉತ್ತಮ.
ಪೇರಳೆ ಎಲೆಗಳು ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಮತ್ತು ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಪೇರಳೆ ಎಲೆ ರಸವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅತಿಸಾರ, ಮಲಬದ್ಧತೆ ಸೇರಿದಂತೆ ಇತರೆ ಹೊಟ್ಟೆಯ ಸಮಸ್ಯೆಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.
ತೂಕ ಇಳಿಕೆಗೂ ಪೇರಳೆ ರಸ ಸಹಕಾರಿಯಾಗಿದೆ.
ಪೇರಳೆ ಎಲೆಗಳಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ.
ಪೇರಳೆ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳಿದ್ದು, ಇವು ಚರ್ಮದ ಸುಕ್ಕು, ಕಲೆ, ಮೊಡವೆ ಇತ್ಯಾದಿ ಹೋಗಲಾಡಿಸಲು ಸಹಕಾರಿ.
ಪೇರಳೆ ಎಲೆಯ ರಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದು ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಯಕೃತ್ತಿನ ಆರೋಗ್ಯಕ್ಕೂ ಪೇರಳೆ ಎಲೆಯ ರಸ ಸಹಕಾರಿ.
Pinterest
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ