ಬಾಳೆಹಣ್ಣನ್ನು ತಿಂದು ಅದರ ಸಿಪ್ಪೆ ಎಸೆಯುವವರೇ ಹೆಚ್ಚು. ವ್ಯರ್ಥ ಎಂದು ಎಸೆಯುವ ಈ ಸಿಪ್ಪೆಯಲ್ಲಿದೆ ಹಲವು ಪ್ರಯೋಜನ.
Pinterest
ಬಾಳೆಹಣ್ಣಿನ ಸಿಪ್ಪೆಯಿಂದ ಮನೆಯಲ್ಲಿರುವ ಬೆಳ್ಳಿ ವಸ್ತುಗಳನ್ನು ಉಜ್ಜಬಹುದು. ಬೆಳ್ಳಿ ಪಾತ್ರೆ ಮಸುಕಾಗಿದ್ದರೆ ಆ ಕಲೆ ಹೋಗುತ್ತದೆ.
Pinterest
ಬಾಳೆಹಣ್ಣಿನ ಸಿಪ್ಪೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಕತ್ತರಿಸಿದ ಸೇಬು ಹಣ್ಣು ಸೇರಿಸಿ ಸ್ಮೂಥಿ ತಯಾರಿಸಬಹುದು. ಸಿಪ್ಪೆಯಲ್ಲಿ ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು.
Pinterest
ಬಾಳೆಹಣ್ಣಿನ ಸಿಪ್ಪೆಗಳನ್ನು ಕಸದ ಬುಟ್ಟಿಗೆ ಎಸೆಯುವ ಬದಲು ಗೊಬ್ಬರವಾಗಿ ಬಳಸಬಹುದು. ಈ ಮೂಲಕ ಸಸ್ಯಕ್ಕೆ ಪೋಷಕಾಂಶಗಳನ್ನು ಒದಗಿಸಬಹುದು.
Pinterest
ಇರುವೆ ಅಥವಾ ಕೀಟಗಳ ಕಡಿತದಿಂದ ತುರಿಕೆ ಉಂಟಾಗುತ್ತಿದ್ದರೆ, ಆ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯಿಂದ ನಿಧಾನವಾಗಿ ಮಸಾಜ್ ಮಾಡಿ.
Pinterest
ಮುಖದಲ್ಲಿ ಮೊಡವೆ, ಕಲೆಗಳಿದ್ದರೆ ಬಾಳೆಹಣ್ಣಿನ ಸಿಪ್ಪೆಯಿಂದ ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ನಿಮ್ಮ ಚರ್ಮದ ಕಾಂತಿ ಹೆಚ್ಚುತ್ತದೆ.
Pinterest
ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಹೆಚ್ಚಿನ ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
Pinterest
ಈ ಸಿಪ್ಪೆಯಿಂದ ಹಲ್ಲು ಉಜ್ಜಬಹುದು. ಇದರಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ಇರುವುದರಿಂದ ಹಲ್ಲುಗಳು ಬಿಳಿಯಾಗಲು ಸಹಾಯ ಮಾಡುತ್ತದೆ.
Pinterest
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ: ಭಾರತದಲ್ಲಿ ಹೆಣ್ಣುಮಕ್ಕಳಿಗಿರುವ 6 ಕಾನೂನು ಹಕ್ಕುಗಳು