ದೀರ್ಘಾಯಸ್ಸು ನಿಮ್ಮದಾಗಬೇಕಾ, ಹಾಗಿದ್ರೆ ಈ ಆಹಾರಗಳನ್ನು ತಪ್ಪದೇ ಸೇವಿಸಿ

By Reshma
Apr 23, 2024

Hindustan Times
Kannada

ಅಂಜೂರ: ಇದು ಪೊಟ್ಯಾಶಿಯಂ, ಸತು, ಕಬ್ಬಿಣ ಮತ್ತು ಮ್ಯಾಂಗನಿಸ್‌ ಸೇರಿದಂತೆ ಹಲವು ಜೀವಸತ್ವಗಳು ಹಾಗೂ ಖನಿಜಗಳಿಂದ ಸಮೃದ್ಧವಾಗಿದೆ.

ಸೇಬುಹಣ್ಣು: ನಾರಿನಾಂಶ ಹಾಗೂ ನೀರಿನಾಂಶ ಸಮೃದ್ಧವಾಗಿರುವ ಸೇಬುಹಣ್ಣು ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯಕ್ಕೆ ಉತ್ತಮ. 

ಗ್ರೀನ್‌ ಟೀ: ಇದು ಆಂಟಿ ಆಕ್ಸಿಡೆಂಟ್‌ ಸಮೃದ್ಧವಾಗಿದ್ದು, ಕೊಬ್ಬು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ಕ್ಯಾನ್ಸರ್‌ ಅಪಾಯವನ್ನು ತಡೆಗಟ್ಟುತ್ತದೆ. 

ಅರಿಸಿನ: ಇದರಲ್ಲಿ ಉರಿಯೂತ ವಿರೋಧಿ ಗುಣಲಕ್ಷಣಗಳಿವೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್‌, ಅಧಿಕರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆಯಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ಬೆಳ್ಳುಳ್ಳಿ: ಬೆಳ್ಳುಳ್ಳಿ ಸಾಕಷ್ಟು ವೈದ್ಯಕೀಯ ಅಂಶಗಳಿವೆ. ಇದು ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ನೆಲ್ಲಿಕಾಯಿ: ವಿಟಮಿನ್‌ ಸಿ ಹಾಗೂ ಆಂಟಿಆಕ್ಸಿಡೆಂಟ್‌ ಸಮೃದ್ಧವಾಗಿರುವ ನೆಲ್ಲಿಕಾಯಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕಾಯಿಲೆಗಳು ಬರದಂತೆ ತಡೆಯತ್ತದೆ. 

ನೀಲಿ ಕ್ಯಾಬೇಜ್‌: ನೀಲಿ ಕ್ಯಾಬೇಜ್‌ನಲ್ಲಿ ಆಂಟಿಆಕ್ಸಿಡೆಂಟ್‌ ಅಂಶಗಳಿದ್ದು ಇದು ಕ್ಯಾನ್ಸರ್‌, ಆರ್ಥರೈಟಿಸ್‌, ಹೃದ್ರೋಗ ಅಪಾಯವನ್ನು ನಿವಾರಿಸುತ್ತದೆ. 

ಅಣಬೆ: ಇದು ಜೀವಕೋಶಗಳ ಹಾನಿಯನ್ನು ತಡೆದು, ಆರೋಗ್ಯವನ್ನು ರಕ್ಷಿಸುತ್ತದೆ. 

ಬ್ಲೂಬೆರ್ರಿ: ಇದು ಆಂಟಿಆಕ್ಸಿಡೆಂಟ್‌ನಿಂದ ಸಮೃದ್ಧವಾಗಿದ್ದು ದೀರ್ಘಾಯಸ್ಸಿಗೆ ಸಹಾಯ ಮಾಡುತ್ತದೆ. 

ಬ್ರೊಕೊಲಿ: ಇದು ನಾರಿನಾಂಶ ವಿಟಮಿನ್‌ ಸಿ, ಕೆ, ಕಬ್ಬಿಣಾಂಶ ಹಾಗೂ ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದ್ದು ಕ್ಯಾನ್ಸರ್‌, ಹೃದ್ರೋಗದಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ನಿವಾರಣೆಗ ಸಹಾಯ ಮಾಡುತ್ತದೆ. 

ಬೀಟ್‌ರೂಟ್‌: ನಾರಿನಾಂಶ, ಫೋಲೆಟ್‌, ಮ್ಯಾಗ್ನೇಶಿಯಂ, ಪೊಟ್ಯಾಶಿಯಂ, ಕಬ್ಬಿಣಾಂಶ ಹಾಗೂ ವಿಟಮಿನ್‌ ಸಿಗಳಿಂದ ಸಮೃದ್ಧವಾಗಿರುವ ಬಿಟ್‌ರೂಟ್‌ ರಕ್ತದ ಹರಿವನ್ನು ಹೆಚ್ಚಿಸುತ್ತದೆ. 

ಮಾವಿನಹಣ್ಣು: ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಮಾವಿನಹಣ್ಣು ವಿಟಮಿನ್‌ ಸಿ, ಎಯಿಂದ ಸಮೃದ್ಧವಾಗಿದೆ. ಇದು ಚರ್ಮದ ಆರೋಗ್ಯ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಲು ಸಹಕಾರಿ.

ಅವಕಾಡೊ: ನಾರಿನಾಂಶ ಸಮೃದ್ಧವಾಗಿರುವ ಅವಕಾಡೊ ಕರುಳಿನ ಆರೋಗ್ಯವನ್ನು ಸುಧಾರಿಸುವ ಜೊತೆಗೆ ಹೃದ್ರೋಗ ಅಪಾಯವನ್ನೂ ಕಡಿಮೆ ಮಾಡುತ್ತದೆ.   

ಸಿಎಸ್​​ಕೆ ವಿರುದ್ಧ ವಿರಾಟ್ ಕೊಹ್ಲಿ ಬೊಂಬಾಟ್ ಪ್ರದರ್ಶನ