ಪುರುಷರಲ್ಲಿ ಮೂತ್ರ ಸೋಂಕಿಗೆ ಕಾರಣವಾಗುವ 5 ಕೆಟ್ಟ ಅಭ್ಯಾಸಗಳಿವು

By Raghavendra M Y
Jun 12, 2024

Hindustan Times
Kannada

ಹೆಚ್ಚಿನ ಮಹಿಳೆಯರು ಮೂತ್ರದ ಸೋಂಕಿನ ಸಮಸ್ಯೆಯನ್ನು ಎದುರಿಸುತ್ತಾರೆ. ಆದರೆ ಪುರುಷರು ಕೂಡ ಮೂತ್ರದ ಸೋಂಕಿಗೆ ಒಳಗಾಗುತ್ತಾರೆ

ಮೂತ್ರ ಸೋಂಕು ಮೂತ್ರನಾಳದ ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುತ್ತದೆ. ಮೂತ್ರದಲ್ಲಿ ಬ್ಯಾಕ್ಟೀರಿಯಾ ಇದ್ದರೆ ಮೂತ್ರದ ಸೋಂಕಿನ ಅಪಾಯ ಹೆಚ್ಚಾಗುತ್ತೆ

ಮೂತ್ರ ಸೋಂಕಿನ ವೇಳೆ ಮೂತ್ರ ವಿಸರ್ಜನೆ ಸಮಯದಲ್ಲಿ ನೋವು, ಸುಡುವ ಸಂವೇದನೆ ಇರುತ್ತೆ. ದುರ್ವಾಸನೆಯಂತಹ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ

Enter text Here

ಕೆಲವು ತಪ್ಪು ಅಭ್ಯಾಸಗಳನ್ನು ಹೊಂದಿರುವ ಪುರುಷರು ಮತ್ತೆ ಮತ್ತೆ ಮೂತ್ರದ ಸೋಂಕಿನ ಸಮಸ್ಯೆಯನ್ನು ಎದುರಿಸಬಹುದು. ಈ ಅಭ್ಯಾಸಗಳ ಬಗ್ಗೆ ತಿಳಿಯೋಣ

ಜನನಾಂಗದ ಭಾಗಗಳ ಸ್ವಚ್ಛತೆ ಬಗ್ಗೆ ಗಮನ ಹರಿಸದಿದ್ದರೆ ಮೂತ್ರದ ಸೋಂಕಿಗೆ ಒಳಗಾಗಬಹುದು. ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತೆ

ಕಡಿಮೆ ನೀರು ಕುಡಿಯುವುದರಿಂದ ಮೂತ್ರದ ಸೋಂಕು ಉಂಟಾಗುತ್ತೆ. ಹೆಚ್ಚು ನೀರು ಕುಡಿಯುವುದರಿಂದ ಮೂತ್ರನಾಳದಿಂದ ಬ್ಯಾಕ್ಟೀರಿಯಾ ಹೊರಹಾಕಬಹುದು

ಕೆಲವರು ಅರ್ಜೆಂಟ್ ಆದರೂ ಮೂತ್ರವನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುತ್ತಾರೆ. ಈ ತಪ್ಪು ಅಭ್ಯಾಸದಿಂದ ಮೂತ್ರದ ಸೋಂಕಿನ ಅಪಾಯ ಹೆಚ್ಚಾಗುತ್ತೆ

ಪುರುಷರು ಯಾವುದೇ ಹಿಂಜರಿಕೆ ಇಲ್ಲದೆ ಬಯಲು ಪ್ರದೇಶದಲ್ಲಿ ಮಲ ವಿಸರ್ಜನೆ ಮಾಡಬಹುದು. ಈ ಅಭ್ಯಾಸ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ

ಅನೇಕ ಜನರು ದೇಹದ ಶುಚಿತ್ವದ ಬಗ್ಗೆ ಅಸಡ್ಡೆ ತೋರುತ್ತಾರೆ

ಕೆಲವರು 2 ದಿನ ಆದರೂ ಒಂದೇ ಒಳ ಉಡುಪು ಧರಿಸುತ್ತಾರೆ. ಒಳ ಉಡುಪುಗಳನ್ನು ಬದಲಾಯಿಸದಿರುವುದು ಮೂತ್ರದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ

ಭಾರತದ ಅತೀ ಶ್ರೀಮಂತ ಶಾಸಕರು ಇವರು

Source: ADLR Delhi