ಒಣದ್ರಾಕ್ಷಿ ನೆನೆಸಿದ ನೀರು ಕುಡಿಯುವುದರಿಂದ ಆರೋಗಕ್ಕೆ ಇಷ್ಟೆಲ್ಲಾ ಪ್ರಯೋಜನವಿದೆ 

By Reshma
Jun 20, 2024

Hindustan Times
Kannada

ಒಣದ್ರಾಕ್ಷಿ ತಿನ್ನಲು ಸಖತ್‌ ಆಗಿರುತ್ತೆ, ಮಾತ್ರವಲ್ಲ ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಪೌಷ್ಟಿಕಾಂಶವುಳ್ಳ ಒಣದ್ರಾಕ್ಷಿ  ತಿನ್ನುವುದರಿಂದ ಹಲವು ರೋಗಗಳಿಂದ ಪರಿಹಾರ ದೊರೆಯುತ್ತದೆ. 

ಆಯುರ್ವೇದದಲ್ಲೂ ಒಣದ್ರಾಕ್ಷಿಗೆ ವಿಶೇಷ ಮಹತ್ವವಿದೆ. ಇದನ್ನು ತಿನ್ನುವುದರಿಂದ ರಕ್ತಹೀನತೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಇದರ ಬೆಚ್ಚಗಿನ ಸ್ವಭಾವದಿಂದಾಗಿ ಜನರು ಶೀತ ವಾತಾವರಣದಲ್ಲಿ ಇದನ್ನು ತಿನ್ನಲು ಇಷ್ಟಪಡುತ್ತಾರೆ. ಒಣದ್ರಾಕ್ಷಿ ಮಾತ್ರವಲ್ಲ ಒಣದ್ರಾಕ್ಷಿ ನೀರು ಕುಡಿಯುವುದು ಕೂಡ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. 

ಒಣದ್ರಾಕ್ಷಿ ನೆನೆಸಿದ ನೀರು ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

ದೇಹ ನಿರ್ಜಲೀಕರಣಗೊಂಡಾಗ ನಮಗೆ ಸುಸ್ತಾಗುವುದು ಸಹಜ. ಒಣದ್ರಾಕ್ಷಿ ನೀರು ಕುಡಿಯುವುದರಿಂದ ದೇಹ ಹೈಡ್ರೇಟ್‌ ಆಗುತ್ತದೆ. ಇದು ನಿಶಕ್ತಿಯಂತಹ ಸಮಸ್ಯೆಯನ್ನು ನಿವಾರಿಸುತ್ತದೆ. 

ಒಣದ್ರಾಕ್ಷಿಯಲ್ಲಿ ನೈಸರ್ಗಿಕ ಸಕ್ಕರೆಯಂಶ ಅಧಿಕವಾಗಿರುತ್ತದೆ. ಈ ನೀರನ್ನು ಕುಡಿಯುವುದರಿಂದ ದೇಹಕ್ಕೆ ತ್ವರಿತ ಶಕ್ತಿ ದೊರೆಯುತ್ತದೆ. 

ಒಣದ್ರಾಕ್ಷಿ ನೀರಿನಲ್ಲಿ ಕಂಡುಬರುವ ಪೊಟ್ಯಾಶಿಯಂ ಅಂಶವು ರಕ್ತದೊತ್ತಡವನ್ನು ನಿವಾರಿಸಿ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ

ಒಣದ್ರಾಕ್ಷಿಯ ಇದು ಅಜೀರ್ಣ, ಆಸಿಡಿಟಿಯಂತಹ ಹೊಟ್ಟೆಗೆ ಸಂಬಂಧಿಸಿ ಸಮಸ್ಯೆಗಳನ್ನು ನಿವಾರಿಸುತ್ತದೆ.

ಒಣಕೆಮ್ಮಿನ ಸಮಸ್ಯೆ ಇರುವವರು ಪ್ರತಿದಿನ ಒಣದ್ರಾಕ್ಷಿ ನೀರನ್ನು ಕುಡಿಯಬೇಕು. ಇದನ್ನು ಕುಡಿಯುವುದರಿಂದ ಕೆಮ್ಮು ಹಾಗೂ ಗಂಟಲು ಉರಿಯಿಂದ ಮುಕ್ತಿ ದೊರೆಯುತ್ತದೆ.

ಒಣದ್ರಾಕ್ಷಿ ನೀರು ಉತ್ಕರ್ಷಣ ನಿರೋಧಕ ಮತ್ತು ವಿಟಮಿನ್‌ ಸಿಗಳಿಂದ ಸಮೃದ್ಧವಾಗಿದೆ. ಇದು ಚರ್ಮಕ್ಕೆ ಹೊಳಪು ನೀಡಿ, ಚರ್ಮ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. 

ಒಣದ್ರಾಕ್ಷಿ ನೀರಿನಲ್ಲಿ ಉರಿಯೂತ ಗುಣಲಕ್ಷಣಗಳಿವೆ. ಮುಟ್ಟಿನ ಸಮಯದಲ್ಲಿ ಇದರ ನೀರನ್ನು ಕುಡಿಯುವುದರಿಂದ ನೋವು ಹಾಗೂ ಸೆಳೆತದಿಂದ ಪರಿಹಾರ ಕಂಡುಕೊಳ್ಳಬಹುದು. 

ಪ್ರತಿದಿನ 1 ಗ್ಲಾಸ್‌ ನೀರಿನಲ್ಲಿ 4 ರಿಂದ 5 ಒಣದ್ರಾಕ್ಷಿಗಳನ್ನು ನೆನೆಸಿಡಿ. ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ನೀರು ಕುಡಿದ ನಂತರ ನೆನೆಸಿಟ್ಟ ಒಣದ್ರಾಕ್ಷಿಯನ್ನು ತಿನ್ನಬಹುದು. 

ಈ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. 

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS