ದೇಹದ ತ್ರಾಣ ಹೆಚ್ಚಿಸುವ 7 ಆಹಾರಗಳಿವು

By Reshma
Jun 24, 2024

Hindustan Times
Kannada

ದೇಹದಲ್ಲಿ ಶಕ್ತಿಯನ್ನು ಕಾಪಾಡುವಲ್ಲಿ ತ್ರಾಣವು ಪ್ರಮುಖ ಪಾತ್ರ ವಹಿಸುತ್ತದೆ. ತ್ರಾಣ ಅಥವಾ ಸ್ಟ್ಯಾಮಿನಾ ಕೊರತೆಯಿಂದ ವ್ಯಕ್ತಿಯು ನಿರಂತರವಾಗಿ ಆಯಾಸವನ್ನು ಎದುರಿಸಬಹುದು. 

ದೇಹದಲ್ಲಿ ತ್ರಾಣ ಹೆಚ್ಚಿಸಿಕೊಳ್ಳಲು ಕೆಲವು ಆಹಾರಗಳು ನೆರವಾಗುತ್ತವೆ. ಸಮತೋಲಿತ ಆಹಾರ ಸೇವನೆಯು ದೇಹದಲ್ಲಿ ಸ್ಟ್ಯಾಮಿನಾ ಸಹಾಯವಾಗುತ್ತದೆ. 

ತ್ರಾಣ ಹೆಚ್ಚಿಸುವ ಹಲವು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವು ತ್ರಾಣ ಹೆಚ್ಚಿಸುವುದೇನೋ ಸತ್ಯ, ಆದರೆ ಇದರ ಸೇವನೆಯಿಂದ ಅನಾನುಕೂಲವೂ ಇದೆ. 

ಅದಕ್ಕಾಗಿ ನೀವು ಆರೋಗ್ಯಕ್ಕೆ ಹಿತ ಎನ್ನಿಸುವ ವಿಶೇಷ ಆಹಾರಗಳ ಸೇವನೆಯತ್ತ ಗಮನ ನೀಡಬೇಕು. ತ್ರಾಣ ಹೆಚ್ಚಿಸಿಕೊಳ್ಳಲು ನಿಮ್ಮ ಆಹಾರಕ್ರಮವಲ್ಲಿ ಇವನ್ನೂ ಸೇರಿಸಿ. 

ಬಾಳೆಹಣ್ಣು: ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಅತ್ಯವಶ್ಯ. ಈ ಹಣ್ಣು ದೇಹದಲ್ಲಿ ಡೋಮಮೈನ್‌ ಅನ್ನು ಹೆಚ್ಚಿಸುತ್ತದೆ. ಇದು ಉತ್ತಮ ಹಾರ್ಮೋನ್‌ಗಳ ಬಿಡುಗಡೆಗೂ ಸಹಾಯ ಮಾಡುತ್ತದೆ. 

ಸಿಟ್ರಸ್‌ ಅಂಶ ಇರುವ ಹಣ್ಣುಗಳ ಸೇವನೆಯೂ ತ್ರಾಣ ಹೆಚ್ಚಲು ಸಹಕಾರಿ. ನಿಂಬೆ, ಕಿತ್ತಳೆಹಣ್ಣು, ದ್ರಾಕ್ಷಿ ಮುಂತಾದ ಹಣ್ಣುಗಳನ್ನು ಹೆಚ್ಚು ಸೇವಿಸಿ.

ಸೊಪ್ಪುಗಳು: ಪಾಲಾಕ್‌, ಮೆಂತ್ಯದಂತಹ ವಿವಿಧ ಸೊಪ್ಪುಗಳು ತ್ರಾಣ ಹೆಚ್ಚಿಸಲು ಬಹಳ ಪರಿಣಾಮಕಾರಿ. ಕಬ್ಬಿಣದ ಜೊತೆಗೆ ಕ್ಯಾಲ್ಸಿಯಂ ಮತ್ತು ವಿಟಮಿನ್‌ ಎಯಂತಹ ಪೋಷಕಾಂಶಗಳು ಸೊಪ್ಪಿನಲ್ಲಿ ಕಂಡುಬರುವ ಕಾರಣ ಇದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.

ನೀವು ನಿತ್ರಾಣದಿಂದ ಬಳಲುತ್ತಿದ್ದರೆ ಬೆಳಗಿನ ಉಪಾಹಾರವನ್ನು ಗಂಜಿಯಿಂದ ಪ್ರಾರಂಭಿಸಿ. ನಾರಿನಾಂಶ ಸೇರಿದಂತೆ ಹಲವು ಪೋಷಕಾಂಶಗಳು ಗಂಜಿಯಲ್ಲಿದ್ದು ಇದು ದೇಹಕ್ಕೆ ಅಗತ್ಯ ಪೋಷಕಾಂಶವನ್ನು ಒದಗಿಸುತ್ತದೆ. 

ಕ್ಯಾಲ್ಸಿಯಂ ಹಾಗೂ ಪ್ರೊಟೀನ್‌ನಲ್ಲಿ ಸಮೃದ್ಧವಾಗಿರುವ ಮೊಸರನ್ನು ಸೇವಿಸುವುದರಿಂದ ಕೂಡ ತ್ರಾಣ ಹೆಚ್ಚುತ್ತದೆ. ಇದರಿಂದ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ. 

ಎಳನೀರಿನಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ಗಳಿದ್ದು, ಇದು ದೇಹವನ್ನು ರಿಫ್ರೆಶ್‌ ಮಾಡುತ್ತದೆ ಹಾಗೂ ತ್ರಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

ಬಾದಾಮಿಯು ಉತ್ತಮ ಪ್ರಮಾಣದ ಪ್ರೊಟೀನ್‌, ವಿಟಮಿನ್‌ ಇ ಮತ್ತು ಕಬ್ಬಿಣಾಂಶವನ್ನು ಹೊಂದಿದೆ. ಈ ಎಲ್ಲಾ ಅಂಶಗಳು ತ್ರಾಣ ಹೆಚ್ಚಲು ಸಹಕಾರಿ. 

ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರಿಂದ ಸರಿಯಾದ ಸಲಹೆ ಪಡೆದುಕೊಳ್ಳಿ. 

ಈ ಆಹಾರಗಳನ್ನು ಫ್ರಿಜ್‌ನಲ್ಲಿ ಇಡಲೇಬೇಡಿ