ಮದ್ಯಪಾನಿಗಳು ತಿಳಿದಿರಲೇಬೇಕಾದ 8 ಮಹತ್ವದ  ವಿಚಾರಗಳಿವು 

By Reshma
Apr 17, 2024

Hindustan Times
Kannada

ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ವೈದ್ಯರು ಕೂಡ ಮದ್ಯ ಸೇವನೆಗೆ ಮಿತಿ ಇರಬೇಕು ಎಂದು ಸಲಹೆ ನೀಡುತ್ತಾರೆ. ಆದರೂ ಕೆಲವರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. 

Pexels

ಅತಿಯಾದ ಮದ್ಯ ಸೇವನೆಯಿಂದ ಹಲವರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಮದ್ಯಪಾನಿಗಳು  ತಪ್ಪದೇ ತಿಳಿದಿರಬೇಕಾದ 8 ವಿಚಾರಗಳು ಇಲ್ಲಿವೆ. 

Pexels

ಕೆಲವರು ಊಟವಿಲ್ಲದೆ ಖಾಲಿ ಹೊಟ್ಟೆಯಲ್ಲಿ ಮದ್ಯ ಸೇವಿಸುತ್ತಾರೆ. ಇದು ತುಂಬಾ ಅಪಾಯಕಾರಿ. ಇದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕಡಿಮೆಯಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಗಳು ಎದುರಾಗಬಹುದು. 

Pexels

ಆಲ್ಕೋಹಾಲ್‌ ಸೇವನೆಗೂ ಮುನ್ನ ತಪ್ಪದೇ ಏನನ್ನಾದರೂ ತಿನ್ನಬೇಕು. ಕೆಲವರು ತಿಂದ ನಂತರ ಕುಡಿಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ಇದು ಮಾನಸಿಕ ಭ್ರಮೆ ಎಂಬುದು ತಜ್ಞರ ಸಲಹೆ. 

Pexels

ಮದ್ಯವನ್ನು ಬಹಳ ವೇಗವಾಗಿ ಕುಡಿಯಬಾರದು. ಸ್ವಲ್ಪ ಏನಾದ್ರೂ ತಿಂದ ನಂತರ ನಿಧಾನಕ್ಕೆ ಸಿಪ್‌ ಬೈ ಸಿಪ್‌ ಕುಡಿಯುವುದು ಉತ್ತಮ. ಆದರೂ ಮಿತಿ ತಪ್ಪುವಂತಿಲ್ಲ. 

Pexels

ಹಲವರಿಗೆ ಮದ್ಯಪಾನ ಮಾಡುವಾಗ ಸಿಗರೇಟು ಸೇದುವ ಅಭ್ಯಾಸವಿರುತ್ತದೆ. ಮದ್ಯಪಾನ ಮಾಡುವಾಗ ಅತಿಯಾದಿ ಸಿಗರೇಟು ಸೇದುತ್ತಾರೆ. ಇದರಿಂದ ಯಕೃತ್ತು ಹಾಗೂ ಶ್ವಾಸಕೋಶಗಳಿಗೆ ಹಾನಿಯುಂಟಾಗುತ್ತದೆ. ಹಾಗಾಗಿ ಈ ಅಭ್ಯಾಸಕ್ಕೆ ಬ್ರೇಕ್‌ ಹಾಕಲೇಬೇಕು. 

Pexels

ಹಲವರು ಬದುಕಿನಲ್ಲಿ ಸಮಸ್ಯೆ ಎದುರಾದಾಗ ಕುಡಿಯಲು ಆರಂಭಿಸುತ್ತಾರೆ. ಆದರೆ ಜೀವನದಲ್ಲಿ ಸಮಸ್ಯೆ ಯಾರಿಗಿಲ್ಲ ಹೇಳಿ. ಅವಮಾನ, ವೈಫಲ್ಯ ಅಥವಾ ಖಿನ್ನತೆಗೆ ಮದ್ಯ ಪರಿಹಾರವಲ್ಲ. ಕುಡಿಯುವುದು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ. ಇದರಿಂದ ನೀವು ಇನ್ನಷ್ಟು ಸೋಲು ಕಾಣುತ್ತೀರಿ ಹೊರತು, ಯಶಸ್ಸಲ್ಲ. 

Pexels

ಕೆಲವರು ಕಾಕ್‌ಟೈಲ್ ಹೆಸರಿನಲ್ಲಿ ವಿವಿಧ ಜ್ಯೂಸ್‌ಗಳ ಜೊತೆ ಆಲ್ಕೊಹಾಲ್‌ ಮಿಶ್ರಣ ಮಾಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಆಲ್ಕೊಹಾಲ್‌ ಮಿಶ್ರಣ ಮಾಡಬಾರದು. ಬಿಯರ್ ಜೊತೆ ವಿಸ್ಕಿ, ರಮ್ ಜೊತೆ ವೋಡ್ಕಾ, ಬ್ರಾಂಡಿ ಜೊತೆಗೆ ವಿಸ್ಕಿ ಬೆರೆಸಿ ಕುಡಿಯುವುದು ಬಹಳ ಅಪಾಯಕಾರಿ. ಕಾಕ್ಟೇಲ್‌ಗಳು ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಉಂಟು ಮಾಡಬಹುದು. ಇದು ಜೀರ್ಣಾಂಗ ವ್ಯವಸ್ಥೆಯನ್ನ ತಲೆಕೆಳಗು ಮಾಡಬಹುದು ಎಚ್ಚರ. 

Pexels

ಕುಡಿದು ವಾಹನ ಚಲಾಯಿಸುವಾಗ ಹಲವರು ಅಪಘಾತಗಳನ್ನು ಮಾಡುತ್ತಾರೆ. ಇದರಿಂದ ಅವರ ಜೀವದ ಜೊತೆಗೆ ಯಾವುದೋ ಅಮಾಯಕ ಜೀವಕ್ಕೂ ಅಪಾಯ ಮಾಡುತ್ತಾರೆ. ಹಾಗಾಗಿ ಕುಡಿತಕ್ಕೆ ಮಿತಿ ಇರಿಸಿಕೊಳ್ಳುವುದು ಬಹಳ ಮುಖ್ಯ. 

Pexels

ಮದ್ಯವ್ಯಸನಿಗಳು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಇದು ಒಂದು. ವೈದ್ಯರ ಸಲಹೆಯಿಲ್ಲದೆ ಕುಡಿಯಲು ನಿರ್ಧರಿಸಿ, ತಾವು ಸೇವಿಸುವ ದೈನಂದಿನ ಔಷಧಿಗಳನ್ನು ಬಿಟ್ಟು ಬಿಡುತ್ತಾರೆ. ಇದರಿಂದ ಅಪಾಯ ಎದುರಾಗುವುದು ಸುಳ್ಳಲ್ಲ. 

ಒಟ್ಟಾರೆ ಮದ್ಯಪಾನ ಮಾಡುವುದು ನಿಲ್ಲಿಸುವುದು ನಿಮಗೂ ಹಾಗೂ ಸಮಾಜಕ್ಕೂ ಬಹಳ ಒಳಿತು. ನಿಮ್ಮಿಂದ ಮದ್ಯಪಾನ ಬಿಡುವುದು ಸಾಧ್ಯವಾಗಿಲ್ಲ ಎಂದರೆ ಮೇಲೆ ಹೇಳಿದ ಕ್ರಮಗಳನ್ನು ಅನುಸರಿಸಿ, ಮಿತವಾಗಿ ಕುಡಿಯಿರಿ. 

ಅಣಬೆ ತಿನ್ನುವುದರಿಂದ ದೊರಕುವ 8 ಪ್ರಯೋಜನಗಳು 

Pexels