ಪ್ರತಿದಿನ ಲೋಳೆಸರದ ರಸ ಸೇವಿಸುವುದರಿಂದ ಆರೋಗ್ಯಕ್ಕಿದೆ ಇಷ್ಟೊಂದು ಪ್ರಯೋಜನ 

By Reshma
Jul 04, 2024

Hindustan Times
Kannada

ಆಲೋವೆರಾ ಅಥವಾ ಲೋಳೆಸರದ ತಿರುಳು ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲ, ನಮ್ಮ ಆರೋಗ್ಯಕ್ಕೂ ಪ್ರಯೋಜನಕಾರಿ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ.

ಲೋಳೆಸರದ ತಿರುಳಿನ ರಸ ಸೇವಿಸುವುದರಿಂದ ಆರೋಗ್ಯಕ್ಕಿದೆ ನೂರಾರು ಪ್ರಯೋಜನ.

 ತಜ್ಞರ ಪ್ರಕಾರ ಆಲೋವೆರಾ ಜ್ಯೂಸ್‌ನಲ್ಲಿರುವ ಉತ್ಕರ್ಷಣ ನಿರೋಧಕ ಅಂಶಗಳು ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ಪ್ರತಿದಿನ ಇದರ ರಸ ಸೇವಿಸುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. 

ಆಲೋವೆರಾ ರಸದಲ್ಲಿ ಉತ್ತಮ ಪ್ರಮಾಣದ ವಿಟಮಿನ್‌ ಸಿ ಅಂಶವಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. 

ಆರೋಗ್ಯ ತಜ್ಞರ ಪ್ರಕಾರ ಆಲೋವೆರಾ ಜ್ಯೂಸ್‌ ಅನ್ನು ಪ್ರತಿನಿತ್ಯ ಸೇವಿಸುವುದರಿಂದ ತೂಕ ಇಳಿಕೆಯಾಗುತ್ತದೆ. 

ಸಂಶೋಧನೆಗಳ ಪ್ರಕಾರ ಲೋಳೆಸರದ ತಿರುಳು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. 

ಆಲೋವೆರಾ ರಸದಲ್ಲಿರುವ ಕೆಲವು ಪೋಷಕಾಂಶಗಳು ವಸಡು ಹಾಗೂ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ. 

ಹಲ್ಲಿನ ಸಮಸ್ಯೆಗಳಿಂದ ಪರಿಹಾರ ಪಡೆಯಲು ಆಲೋವೆರಾ ಜ್ಯೂಸ್‌ ಸೇವಿಸುವುದು ಉತ್ತಮ. 

ಅಲೋವೆರಾ ಜ್ಯೂಸ್‌ ಅನ್ನು ಸೇವಿಸುವುದರಿಂದ ಕೂದಲಿಗೆ ಪೋಷಣೆ ಸಿಗುತ್ತದೆ ಮತ್ತು ರೇಷ್ಮೆಯಂತೆ ಹೊಳೆಯುತ್ತದೆ.

ಈ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. 

ಐಐಆರ್‌ಎಫ್ ರ‍್ಯಾಂಕ್ 2025

ಬೆಂಗಳೂರಿನಲ್ಲಿರುವ ಟಾಪ್ 10 ಶಾಲೆಗಳು

pexels