ನಿಮ್ಮ ಬೂದು ಕೂದಲಿಗೆ ನೈಸರ್ಗಿಕವಾಗಿ ಬಣ್ಣ ಹಚ್ಚುವ 7 ವಿಧಾನಗಳಿವು
Pexel
By Raghavendra M Y Jul 06, 2024
Hindustan Times Kannada
ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸದೆ ನಿಮ್ಮ ಬೂದು ಬಣ್ಣದ ಕೂದಲನ್ನು ಕಪ್ಪಾಗಿಸಿಕೊಳ್ಳಲು 7 ಬಗೆಯ ನೈಸರ್ಗಿಕ ಬಣ್ಣದ ವಿಧಾನಗಳು ಇಲ್ಲಿವೆ
ಆಮ್ಲಾ- ಬೆಟ್ಟದ ನೆಲ್ಲಿಕಾಯಿ ಕೂದಲನ್ನು ಕಪ್ಪಾಗಿಸುವುದರಲ್ಲಿ ಹೆಸರುವಾಸಿ. ಇದನ್ನು ಹೆಚ್ಚಾಗಿ ಗೋರಂಟಿಯೊಂದಿಗೆ ಬಳಸಲಾಗುತ್ತೆ. ನೀರಿನಿಂದಲೂ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಬಹುದು
ಇಂಡಿಗೋ ಪೌಡರ್ -ಇದನ್ನು ಗೋರಂಟಿ ಜೊತೆ ಬೆರೆಸಿದಾಗ ಕಂದು ಅಥವಾ ಕಪ್ಪು ಬಣ್ಣಕ್ಕೆ ಬರುತ್ತೆ. ಬೂದು ಕೂದಲನ್ನ ಮುಚ್ಚಲು ಇದು ನೈಸರ್ಗಿಕ ಆಯ್ಕೆಯಾಗಿದೆ
ಸೇಜ್ ಮತ್ತು ರೋಸ್ಮರಿ - ಋಷಿ ಮತ್ತು ರೋಸ್ಮರಿ ಕಪ್ಪಾಗಿಸುವ ಗುಣಲಕ್ಷಣಗಳನ್ನು ಹೊಂದಿರುವ ಗಿಡಮೂಲಿಕೆಗಳು. ಇವುಗಳನ್ನು ನೀರಿನಲ್ಲಿ ಕುದಿಸಿ ಚೆನ್ನಾಗಿ ಮಿಶ್ರಣ ಮಾಡಿ ತಣ್ಣಗಾಗಲು ಬಿಡಿ. ನಂತರ ಕೂದಲಿಗೆ ಹಚ್ಚಿ
ಕಾಫಿ - ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಕಾಫಿ ನೆರವಾಗುತ್ತೆ. ಕಪ್ ಕಾಫಿ ತಯಾರಿಸಿ ಅದನ್ನು ತಣ್ಣಗಾಗಲು ಬಿಡಿ. ನಂತರ ಕೂದಲಿಗೆ ಹಚ್ಚಿ ಇಲ್ಲವೇ ಲೀವ್ ಇನ್ ಕಂಡೀಷನರ್‌ನೊಂದಿಗೆ ಮಿಶ್ರಮಣ ಮಾಡಿ
ಬ್ಲಾಕ್ ಟೀ - ಟ್ಯಾನಿನ್‌ಗಳನ್ನು ಹೊಂದಿರುವ ಬ್ಲಾಕ್ ಟೀಯನ್ನು ಹಚ್ಚಿದರೆ ಬೂದು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಟೀಯನ್ನು ಚೆನ್ನಾಗಿ ಕುದಿಸಿ ಅದನ್ನು ತಣ್ಣಾಗಲು ಬಿಟ್ಟು ನಂತರ ಕೂದಲಿಗೆ ಹಚ್ಚಬಹುದು
ಗೋರಂಟಿ- ನೈಸರ್ಗಿಕವಾಗಿ ನಿಮ್ಮ ಬೂದು ಬಣ್ಣದ ಕೂದಲಿಗೆ ಗೋರಂಟಿ ಹಚ್ಚಿದರೆ ಕೆಂಪು ಬಣ್ಣಕ್ಕೆ ತಿರುಗುತ್ತದೆ