ಪ್ರತಿದಿನಿ ಬೆಳಗ್ಗೆ ನೆನೆಸಿಟ್ಟ ಧನಿಯಾ ನೀರು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳಿವು
By Raghavendra M Y Jun 16, 2024
Hindustan Times Kannada
ಧನಿಯಾ ಇಲ್ಲದಿದ್ದರೆ ಭಾರತೀಯ ಶೈಲಿಯ ಅಡುಗೆ ಪೂರ್ಣಗೊಳ್ಳುವುದಿಲ್ಲ. ಕೊತ್ತಂಬರಿ ಬೀಜಗಳಿಂದ ಸಾಕಷ್ಟು ಆರೋಗ್ಯ ಪ್ರಯೋಜಗಳನ್ನ ಪಡೆಯಬಹುದು
ರಾತ್ರಿ ನೆನೆಸಿಟ್ಟ ಕೊತ್ತಂಬರಿ ಬೀಜಗಳ ನೀರನ್ನು ಬೆಳಗ್ಗೆ ಖಾಲಿ ಹೊಟ್ಟಿಯೆಲ್ಲಿ ಕುಡಿದರೆ ಥೈರಾಯ್ಡ್ ಅನ್ನು ನಿಯಂತ್ರಿಸುತ್ತದೆ
ಧನಿಯಾದಲ್ಲಿ ಕಬ್ಬಿಣ, ಪೊಟ್ಯಾಸಿಯಂ ಸೇರಿ ಹಲವಾರು ಪ್ರಮುಖ ಖನಿಜಗಳಿವೆ. ಫೈಬರ್, ವಿಟಮಿನ್ ಎ,ಸಿ,ಕೆ ಅಧಿಕವಾಗಿವೆ. ದೇಹಕ್ಕೆ ಪೋಷಕಾಂಶಗಳು ಹೆಚ್ಚಿಸಲು ಕೊತ್ತಂಬರಿ ನೀರು ನೆರವಾಗುತ್ತೆ
ಜೀರ್ಣ ಕ್ರಿಯೆಗೆ ಸಹಾಯ ಮಾಡುವ ಸಾಮರ್ಥ್ಯ ಕೊತ್ತಂಬರಿ ಬೀಜದಲ್ಲಿದೆ. ನೀರಿನಲ್ಲಿ ಕೊತ್ತಂಬರಿ ಬೀಜಗಳನ್ನು ನೆನೆಸಿ ಕುಡಿಯುವುದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತೆ
ಕೆಲ ಸಂಶೋಧನೆಗಳ ಪ್ರಕಾರ, ಕೊತ್ತಂಬರಿ ಬೀಜಗಳು ಹೈಪೊಗ್ಲಿಸಿಮಿಕ್ ಗುಣ ಹೊಂದಿವೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಧನಿಯಾ ನೀರು ಮಧುಮೇಹಿಗಳಿಗೆ ಅನುಕೂಲಕರ
ಧನಿಯಾ ಬೀಜಗಳಲ್ಲಿ ಕಂಡುಬರುವ ಉರಿಯೂತದ ರಾಸಾಯನಿಕಗಳು ದೇಹದಲ್ಲಿ ಉರಿಯೂತವನ್ನುಕಡಿಮೆ ಮಾಡಲು ನೆರವಾಗುತ್ತವೆ
ಕೊತ್ತಂಬರಿ ಬೀಜಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಇದ್ದು, ಆಕ್ಸಿಡೇಟಿವ್ ಒತ್ತಡದಿಂದ ದೇಹವನ್ನು ರಕ್ಷಿಸಲು ಸಹಕಾರಿಯಾಗಿದೆ. ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ತಪ್ಪಿಸುತ್ತೆ
ಕೊತ್ತಂಬರಿ ಬೀಜಗಳಲ್ಲಿ ಹೆಚ್ಚಿನ ಫೈಬರ್ ಅಂಶಗಳಿರುವುದರಿಂದ ದೇಹದ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ
ಧನಿಯಾ ಬೀಜಗಳು ಮುಟ್ಟಿನ ಸಮಯದಲ್ಲಿ ಉಂಟಾಗುವ ಅಸ್ವಸ್ಥೆತೆಯನ್ನು ನಿವಾರಿಸುತ್ತದೆ. ಕೊತ್ತಂಬರಿ ಬೀಜದ ನೀರು ಸೇವಿಸಿದರ ಹೊಟ್ಟೆಯ ಉಬ್ಬುವಿಕೆಯನ್ನ ಕಡಿಮೆ ಮಾಡುತ್ತೆ