ಆರೋಗ್ಯಕ್ಕೆ ಒಳ್ಳೇದು ಅಂತ ಹಾಗಲಕಾಯಿ ಅತಿಯಾಗಿ ತಿಂದ್ರೆ ತೊಂದ್ರೆ ತಪ್ಪಿದ್ದಲ್ಲ

By Reshma
Jun 05, 2024

Hindustan Times
Kannada

ಕಹಿ ರುಚಿ, ಕಟು ವಾಸನೆ ಹೊಂದಿರುವ ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮಧುಮೇಹಿಗಳಿಗಂತೂ ಇದು ಬೆಸ್ಟ್‌ ಮೆಡಿಸಿನ್‌. ಹಾಗಂತ ಇದನ್ನ ಅತಿಯಾಗಿ ತಿನ್ನೋದು ಒಳಿತಲ್ಲ. 

ಹಾಗಲಕಾಯಿಯನ್ನ ಅತಿಯಾಗಿ ತಿನ್ನೋದ್ರಿಂದ ಆಗುವ ಅನಾನುಕೂಲಗಳ ಬಗ್ಗೆ ಇಲ್ಲಿದೆ ಮಾಹಿತಿ

ರಕ್ತದಲ್ಲಿ ಸಕ್ಕರೆಯಂಶ ಕಡಿಮೆ ಇರುವವರು ಹಾಗಲಕಾಯಿ ತಿನ್ನುವುದು ಒಳ್ಳೆಯದಲ್ಲ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಇನ್ನಷ್ಟು ಕಡಿಮೆಯಾಗುತ್ತದೆ. 

ಗರ್ಭಿಣಿಯರು ಪ್ರತಿದಿನ ಹಾಗಲಕಾಯಿ ತಿನ್ನುವುದು ಖಂಡಿತ ಒಳ್ಳೆಯದಲ್ಲ. ತಜ್ಞರ ಪ್ರಕಾರ ಇದರಿಂದ ಭ್ರೂಣಕ್ಕೆ ತೊಂದರೆ ಉಂಟಾಗುತ್ತದೆ. 

ಹಾಗಲಕಾಯಿಯನ್ನ ಅತಿಯಾಗಿ ತಿನ್ನುವುದರಿಂದ ಯಕೃತ್ತಿನಲ್ಲಿ ಪ್ರೊಟೀನ್‌ ಪರಿಚಲನೆ ನಿಲ್ಲುತ್ತದೆ. ಇದು ಆರೋಗ್ಯಕ್ಕೆ ಹಾನಿಕರ. 

ಹಾಗಲಕಾಯಿಯನ್ನು ಅತಿಯಾಗಿ ತಿನ್ನುವುದರಿಂದ ಅತಿಸಾರ, ವಾಂತಿಯಂತಹ ಸಮಸ್ಯೆಗಳು ಹೆಚ್ಚಬಹುದು. 

ಪ್ರತಿದಿನ ಹಾಗಲಕಾಯಿಯನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆನೋವು ಸೇರಿದಂತೆ ಇತರ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು ಎದುರಾಗುತ್ತವೆ. 

ಹಾಗಲಕಾಯಿ ಅತಿಯಾಗಿ ತಿನ್ನೋದ್ರಿಂದ ಕೆಲವರಿಗೆ ಜ್ವರ ಹಾಗೂ ತಲೆನೋವು ಕಾಡಬಹುದು. 

ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ಹಾಗಲಕಾಯಿಯನ್ನು ಅತಿಯಾಗಿ ತಿನ್ನೋದು ಒಳ್ಳೆಯದಲ್ಲ. 

ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. 

ಬ್ರಾಹ್ಮಿ ಮುಹೂರ್ತದಲ್ಲಿ ತುಳಸಿ ಎಲೆ ಕೀಳುವಾಗ ಅನುಸರಿಸಬೇಕಾದ ನಿಯಮಗಳಿವು