ಬ್ರೆಡ್‌ ಫ್ರಿಜ್‌ನಲ್ಲಿ ಇಡುವ ಅಭ್ಯಾಸ ಇದ್ರೆ ಇಂದೇ ನಿಲ್ಲಿಸಿ, ಕಾರಣ ಹೀಗಿದೆ 

By Reshma
Jun 25, 2024

Hindustan Times
Kannada

ಡಯೆಟ್‌ ಮಾಡುವವರು ಮಾತ್ರವಲ್ಲ, ಹಲವರು ಬೆಳಗಿನ ಉಪಾಹಾರಕ್ಕೆ ಬ್ರೆಡ್‌ ತಿನ್ನುತ್ತಾರೆ. ಇದರಿಂದ ಹಲವು ಭಕ್ಷ್ಯಗಳನ್ನೂ ತಯಾರಿಸಲಾಗುತ್ತದೆ. 

ಆದರೆ ಬ್ರೆಡ್‌ ಅನ್ನು ಒಂದೇ ಬಾರಿಗೆ ಎಲ್ಲವನ್ನೂ ತಿನ್ನಲು ಸಾಧ್ಯವಿಲ್ಲ. ಆದರೆ ಮಿಕ್ಕಿದ ಬ್ರೆಡ್‌ ಅನ್ನು ಸರಿಯಾಗಿ ಇಟ್ಟಿಲ್ಲ ಅಂದ್ರೆ ಬೇಗ ಕೆಡುತ್ತೆ. 

ಆ ಕಾರಣಕ್ಕೆ ಕೆಲವರು ಬ್ರೆಡ್‌ ಅನ್ನು ಫ್ರಿಜ್‌ನಲ್ಲಿ ಇಡುತ್ತಾರೆ. ಆದರೆ ತಜ್ಞರ ಪ್ರಕಾರ ಬ್ರೆಡ್‌ ಫ್ರಿಜ್‌ನಲ್ಲಿ ಇಡುವುದು ಒಳ್ಳೆಯದಲ್ಲ. ಏಕೆ ಎನ್ನುವುದಕ್ಕೆ ಕಾರಣ ಇಲ್ಲಿದೆ. 

ಬ್ರೆಡ್‌ನಲ್ಲಿ ಪಿಷ್ಟದ ಅಂಶ ಇರುತ್ತದೆ. ಹಾಗಾಗಿ ಫ್ರಿಜ್‌ನಲ್ಲಿ ಇಟ್ಟಾಗ ಬ್ರೆಡ್‌ ಗಟ್ಟಿಯಾಗುತ್ತದೆ. ಇದು ಬೇಗನೆ ಒಣಗುತ್ತದೆ. 

ಬ್ರೆಡ್‌ನ ಸುವಾಸನೆಗಾಗಿ ವಿಶೇಷ ಸಂಯುಕ್ತವೊಂದನ್ನು ಬಳಸುತ್ತಾರೆ. ಆದರೆ ಫ್ರಿಜ್‌ನಲ್ಲಿ ಇಡುವುದರಿಂದ ಈ ಸಂಯಕ್ತ ನಿಗ್ರಹಿಸಲ್ಪಟ್ಟು ಬ್ರೆಡ್‌ ಸಪ್ಪೆಯಾಗುತ್ತದೆ. 

ಬ್ರೆಡ್‌ ಅನ್ನು ಕೋಣೆಯ ಉಷ್ಣಾಂಶದಲ್ಲಿ ಇರಿಸಬೇಕು. ಇದನ್ನು ಸಂಗ್ರಹಿಸಿ ಇಡುವ ಮೊದಲು ಸರಿಯಾಗಿ ಮುಚ್ಚಬೇಕು. 

ಬ್ರೆಡ್‌ಗೆ ವಾಯಿದೆ ದಿನಾಂಕ ಇರುತ್ತದೆ. ವಾಯಿದೆ ಮುಗಿದ ಬ್ರೆಡ್‌ ಅನ್ನು ತಪ್ಪಿಯೂ ಸೇವಿಸಬೇಡಿ. 

ಬ್ರೆಡ್‌ ಅನ್ನು ಗಾಳಿಯಾಡದ ಡಬ್ಬಿಯಲ್ಲಿ ಚೆನ್ನಾಗಿ ಮುಚ್ಚಿ ಇಡಬೇಕು. 

ಬ್ರೆಡ್‌ ಅನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿಡುವುದು, ಆಲ್ಯೂಮಿನಿಯಂ ಫಾಯಿಲ್‌ನಿಂದ ಮುಚ್ಚುವುದು ಬಹಳ ಮುಖ್ಯವಾಗುತ್ತದೆ. ಇದರಿಂದ ಬ್ರೆಡ್‌ ತಾಜಾವಾಗಿರುತ್ತದೆ. 

ಬ್ರೆಡ್‌ ಅನ್ನು ಗಾಳಿ ಹಾಗೂ ತೇವಾಂಶದಿಂದ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. 

Horoscope: ಏಪ್ರಿಲ್ 22ರ ಮಂಗಳವಾರ 12 ರಾಶಿಯವರ ಫಲಾಫಲ ಹೀಗಿವೆ