ಚಿಯಾ ಬೀಜದಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ. ಮೊಸರಿನಲ್ಲಿ ಪ್ರೊಟೀನ್ ಅಂಶ ಹೇರಳವಾಗಿರುತ್ತದೆ. ಈ ಎರಡರ ಮಿಶ್ರಣವನ್ನು ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ತೂಕವನ್ನು ನಿಯಂತ್ರಿಸಬಹುದು.
ಚಿಯಾ ಬೀಜಗಳು ಜೀರ್ಣಕ್ರಿಯೆಗೆ ಉತ್ತಮ. ಇದು ಕರುಳಿನ ಆರೋಗ್ಯವನ್ನೂ ಉತ್ತೇಜಿಸುತ್ತದೆ. ಪ್ರೋಬಯೋಟಿಕ್ ಅಂಶ ಇರುವ ಮೊಸರಿನೊಂದಿಗೆ ಚಿಯಾ ಬೀಜ ಬೆರೆಸಿ ತಿನ್ನುವುದರಿಂದ ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ.
ಮೊಸರು ಮತ್ತು ಚಿಯಾ ಬೀಜ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಚಿಯಾ ಬೀಜಗಳು ಒಮೆಗಾ 3 ಕೊಬ್ಬಿನಾಮ್ಲದಲ್ಲಿ ಸಮೃದ್ಧವಾಗಿದೆ. ಇದನ್ನು ಮೊಸರಿಗೆ ಸೇರಿಸುವುದರಿಂದ ಹೆಚ್ಚಿನ ಆರೋಗ್ಯ ಪ್ರಯೋಜನ ಪಡೆಯಬಹುದು.
ಚಿಯಾ ಬೀಜಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಮೊಸರಿನೊಂದಿಗೆ ಇದನ್ನು ತಿನ್ನುವುದರಿಂದ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.
ಚಿಯಾ ಬೀಜ ಮತ್ತು ಮೊಸರು ಸೇರಿಸಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.
ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ರಂಜಕದಂತಹ ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಚಿಯಾ ಬೀಜಗಳು ಮೂಳೆಯ ಆರೋಗ್ಯವನ್ನು ವೃದ್ಧಿಸುತ್ತದೆ. ಮೊಸರಿನೊಂದಿಗೆ ಚಿಯಾ ಬೀಜ ಬೆರೆಸಿ ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.