ಮಕ್ಕಳಿಗೆ ಯಾವ ವಯಸ್ಸಿನಿಂದ ಚಹಾ, ಕಾಫಿ ಕೊಡಬಹುದು? 

By Reshma
Jun 25, 2024

Hindustan Times
Kannada

ಪೋಷಕರು ಅಥವಾ ಮನೆಯವರು ಚಹಾ, ಕಾಫಿ ಕುಡಿಯುವುದು ನೋಡಿ ಮಕ್ಕಳು ತಮಗೂ ಕೊಡಿ ಎಂದು ಹಟ ಮಾಡುತ್ತಾರೆ. 

ಮಕ್ಕಳಿಗೆ ಯಾವ ವಯಸ್ಸಿನಿಂದ ಚಹಾ, ಕಾಫಿ ಕೊಡಬಹುದು ಎಂದು ಸಂದಿಗ್ಧತೆ ಪೋಷಕರಲ್ಲಿ ಇರುವುದು ಸಹಜ. 

ಮಕ್ಕಳಿಗೆ ಈ ಪಾನೀಯವನ್ನು ಕೊಡುವ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ. 

ಅಮೆರಿಕನ್‌ ಅಕಾಡೆಮಿ ಆಫ್‌ ಪೀಡಿಯಾಟ್ರಿಕ್ಸ್‌ ಪ್ರಕಾರ 12ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಚಹಾ, ಕಾಫಿ ಕೊಡಬಾರದು ಹಾಗೂ ಎನರ್ಜಿ ಡ್ರಿಂಕ್‌ ಕೂಡ ನೀಡುವಂತಿಲ್ಲ. 

ಅಮೆರಿಕನ್‌ ಅಕಾಡೆಮಿ ಆಫ್‌ ಪೀಡಿಯಾಟ್ರಿಕ್ಸ್‌ ಪ್ರಕಾರ 12 ರಿಂದ 18 ವರ್ಷ ಮಕ್ಕಳು 100 ಮಿಲಿ ಗ್ರಾಂನಷ್ಟು ಕೆಫಿನ್‌ ಹೊಂದಬಹುದು. 

12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಫಿನ್‌ ನೀಡುವುದರಿಂದ ಅವರ ಹೃದಯ, ಮೆದುಳು, ಮೂತ್ರಪಿಂಡ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. 

ಕೆಫಿನ್‌ ಅಂಶ ಇರುವ ಚಹಾ ಮತ್ತು ಕಾಫಿ ಮಾತ್ರವಲ್ಲ ಚಾಕೊಲೇಟ್‌ ಪಾನೀಯಗಳು, ಬೇಕರಿ ಐಟಂಗಳು, ಕುಕ್ಕೀಸ್‌ ಇತ್ಯಾದಿಗಳು ಕೂಡ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೊಡುವಂತಿಲ್ಲ. 

12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಫಿನ್‌ ನೀಡುವುದರಿಂದ ಇದು ಅವರ ಒಟ್ಟಾರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 

ಒಲಿಂಪಿಕ್ಸ್ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರವಾಗಿದ್ದು ಯಾವಾಗ?