ಸೌತೆಕಾಯಿ ತಿನ್ನಲು ಸರಿಯಾದ ಸಮಯ ಯಾವುದು, ಇಲ್ಲಿದೆ ಮಾಹಿತಿ 

By Reshma
Apr 30, 2024

Hindustan Times
Kannada

ಬೇಸಿಗೆಯಲ್ಲಿ ಸೌತೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವಿದೆ. ಇದರಲ್ಲಿ ನೀರಿನಾಂಶ ಹೆಚ್ಚಿದ್ದು ನಿರ್ಜಲೀಕರಣ ಸಮಸ್ಯೆಯನ್ನು ನಿವಾರಿಸುತ್ತದೆ.

ಇದರಲ್ಲಿ ನಾರಿನಾಂಶ ಕೂಡ ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಗೂ ಉತ್ತಮ.

ಇದರಲ್ಲಿ ನೀರಿನಾಂಶ ಹೆಚ್ಚಿಸುವ ಕಾರಣ ಚರ್ಮದ ಆರೋಗ್ಯಕ್ಕೂ ಉತ್ತಮ. 

ಆದರೆ ಸೌತೆಕಾಯಿ ತಿನ್ನಲು ಸೂಕ್ತ ಸಮಯ ಯಾವುದು ಎಂಬ ಪ್ರಶ್ನೆ ಬಹುತೇಕರನ್ನು ಕಾಡುತ್ತದೆ. 

ಸೌತೆಕಾಯಿಯನ್ನು ಯಾವ ಸಮಯದಲ್ಲಿ ತಿನ್ನಲು ಸೂಕ್ತ, ಯಾವ ಸಮಯದಲ್ಲಿ ತಿನ್ನಬಾರದು ಎಂದು ಪ್ರಶ್ನೆಗೆ ಇಲ್ಲಿದೆ ಉತ್ತರ.

ರಾತ್ರಿ ವೇಳೆ ಸೌತೆಕಾಯಿ ತಿನ್ನುವುದರಿಂದ ಹೊಟ್ಟೆ ಭಾರವಾಗಬಹುದು. ಇದರಿಂದ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಇದು ನಿಮ್ಮ ನಿದ್ದೆಯ ಮೇಲೂ ಪರಿಣಾಮ ಬೀರಬಹುದು.

ಜೀರ್ಣಕ್ರಿಯೆ ಸಮಸ್ಯೆ ಇರುವವರು ಹಾಗೂ ನಿದ್ರಾಹೀನತೆಯ ಸಮಸ್ಯೆ ಹೊಂದಿರುವವರು ರಾತ್ರಿ ಹೊತ್ತಿನಲ್ಲಿ ಸೌತೆಕಾಯಿ ತಿನ್ನಬಾರದು. ಆರೋಗ್ಯವಂತ ವ್ಯಕ್ತಿ ರಾತ್ರಿ ವೇಳೆ ಸೀಮಿತ ಪ್ರಮಾಣದಲ್ಲಿ ಸೌತೆಕಾಯಿ ತಿನ್ನಬಹುದು. 

ಆರೋಗ್ಯ ತಜ್ಞರ ಪ್ರಕಾರ ಬೆಳಗಿನ ಹೊತ್ತು ಸೌತೆಕಾಯಿ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಇದು ದೇಹದಲ್ಲಿ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ಇದು ತೂಕ ಕಡಿಮೆ ಮಾಡಲು ಸಹಕಾರಿ. 

ಸೌತೆಕಾಯಿಯನ್ನು ದಿನದ ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು, ಆದರೆ ರಾತ್ರಿ ವೇಳೆ ಅತಿಯಾಗಿ ತಿನ್ನುವುದು ಸರಿಯಲ್ಲ ಎಂಬುದು ತಜ್ಞರು ಅಭಿಪ್ರಾಯ. 

ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಬಗ್ಗೆ ನಿಖರ ಮಾಹಿತಿವಾಗಿ ತಜ್ಞರನ್ನು ಸಂಪರ್ಕಿಸಿ. 

ಸುಖಕರ ದಾಂಪತ್ಯ ಜೀವನಕ್ಕೆ ಈ ಸಲಹೆಗಳನ್ನು ಪಾಲಿಸಿ

freepik