ಏಲಕ್ಕಿ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಜೀರ್ಣಕ್ರಿಯೆಯಿಂದ ಬಾಯಿಯವರೆಗೆ ಹಲವರು ಪ್ರಯೋಜನಗಳಿವೆ
Pexel
ಜೀರ್ಣಕ್ರಿಯೆ: ಏಲಕ್ಕಿ ಹಲವಾರು ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಇದರಲ್ಲಿ ಫಿನಾಲಿಕ್ ಸಂಯುಕ್ತಗಳಿವೆ. ಇದು ಜೀರ್ಣಕಾರಿ ಆರೋಗ್ಯಕ್ಕೆ ಸಹಾಯ ಮಾಡುತ್ತೆ
Pexel
ಉಸಿರಾಟ: ಏಲಕ್ಕಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಉಸಿರಾಟ ಸುಧಾರಣೆ, ಬಾಯಿಯ ದುರ್ವಾಸನೆ, ಬಾಯಿ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತೆ
Pexel
ಕೆಮ್ಮ, ಅಸ್ತಮಾ ನಿವಾರಣೆ: ಏಲಕ್ಕಿಯಲ್ಲಿ ಕಂಡು ಬರುವ ಆರೊಮ್ಯಾಟಿಕ್ ಸಂಯುಕ್ತಗಳು ಕೆಮ್ಮು, ಅಸ್ತಮಾದಂತಹ ಉಸಿರಾಟದ ಸಮಸ್ಯೆ ನಿವಾರಿಸಲು ನೆರವಾಗುತ್ತೆ
ಸಕ್ಕರೆ ಮಟ್ಟ ನಿಯಂತ್ರಣ: ಇನ್ಸುಲಿನ್ ಸೂಕ್ಷ್ಮತೆಯನ್ನ ಸುಧಾರಿಸುವ ಮೂಲಕ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಿ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಏಲಕ್ಕಿ ನೀರು ನೆರವಾಗುತ್ತೆ
ಉರಿಯೂತ ನಿಯಂತ್ರಣ: ಏಲಕ್ಕಿಯು ಫ್ಲೇವನಾಯ್ಡ್‌ಗಳು, ಪಾಲಿಫಿನಾಲ್‌ಗಳಂತಹ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ದೇಹದಲ್ಲಿನ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತೆ
ಹೃದಯದ ಆರೋಗ್ಯ: ಏಲಕ್ಕಿ ನೀರು ಕುಡಿಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಲಿಫಿಡ್ ಪ್ರೊಪೈಲ್ ಅನ್ನು ಸುಧಾರಿಸಲು ಸಹಾಯ ಮಾಡುತ್ತೆ