ಖಾಲಿ ಹೊಟ್ಟೆಯಲ್ಲಿ ಶುಂಠಿ-ತುಳಸಿ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಇಷ್ಟೊಂದು ಲಾಭ

By Reshma
Jul 07, 2024

Hindustan Times
Kannada

ತುಳಸಿ ಮತ್ತು ಶುಂಠಿ ಎರಡೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ಎರಡರಲ್ಲೂ ಔಷಧೀಯ ಗುಣ ಹೇರಳವಾಗಿದೆ.

ಪ್ರತಿದಿನ ಬೆಳಿಗ್ಗೆ ತುಳಸಿ ಮತ್ತು ಶುಂಠಿ ಚಹಾ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. 

ಪ್ರತಿದಿನ ಬೆಳಿಗ್ಗೆ ಚಹಾ, ಕಾಫಿ ಕುಡಿಯುವ ಬದಲು ಶುಂಠಿ-ತುಳಸಿ ರಸದ ಚಹಾ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. 

ಪ್ರತಿದಿನ ಖಾಲಿಹೊಟ್ಟೆಯಲ್ಲಿ ಈ ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. 

ಖಾಲಿಹೊಟ್ಟೆಯಲ್ಲಿ ಶುಂಠಿ-ತುಳಸಿ ಚಹಾ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದು ಮಾತ್ರವಲ್ಲ, ತೂಕ ಕಡಿಮೆಯಾಗಲು ಸಹಾಯ ಮಾಡುತ್ತದೆ. 

ತುಳಸಿಯಲ್ಲಿ ಆಂಟಿಫಂಗಲ್‌, ಆಂಟಿ ವೈರಲ್‌ ಮತ್ತು ಆಂಟಿ ಕೊಲೆಸ್ಟ್ರಾಲ್‌ ಗುಣಗಳಿವೆ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲವಾಗಿ ಇರಿಸುತ್ತದೆ. ಇದು ಹೃದಯದ ಆರೋಗ್ಯಕ್ಕೂ ಉತ್ತಮ. 

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಶುಂಠಿ-ತುಳಸಿ ರಸ ಸೇರಿಸಿದ ಚಹಾ ಕುಡಿಯುವುದರಿಂದ ತೂಕ ಕಡಿಮೆಯಾಗುವ ಜೊತೆಗೆ ಹೊಟ್ಟೆಯಲ್ಲಿರುವ ಹೆಚ್ಚುವರಿ ಕೊಬ್ಬು ಕರಗುತ್ತದೆ.

ಶುಂಠಿ ಯುಜೆನಾಲ್‌ ಅನ್ನು ಹೊಂದಿದ್ದು, ಅದು ಜೀರ್ಣಕ್ರಿಯೆ ಹೆಚ್ಚಲು ಸಹಕಾರಿ. ಶುಂಠಿಯಲ್ಲಿರುವ ಜಿಂಜರಾಲ್‌ ಅಂಶ ಜೀರ್ಣಕ್ರಿಯೆಯನ್ನು ಸುಧಾರಿಸಿ ಕೊಬ್ಬು ಕಡಿಮೆ ಮಾಡಲು ಕರಗಿಸುತ್ತದೆ. 

JOBS: ಜುಲೈ ಮುಗಿಯುವುದರೊಳಗೆ ಅಪ್ಲೈ ಮಾಡಿ, ಇಲ್ಲಿವೆ ಉದ್ಯೋಗಾವಕಾಶ 

Unsplash