ನೈಸರ್ಗಿಕವಾಗಿ ದೇಹದ ತ್ರಾಣ ಹೆಚ್ಚಿಸುವ ಆಹಾರಗಳಿವು

By Reshma
Jul 06, 2024

Hindustan Times
Kannada

ಕಾಫಿ: ಕಾಫಿಯಲ್ಲಿರುವ ಕೆಫಿನ್‌ ಅಂಶ ಶಕ್ತಿಯನ್ನು ವೃದ್ಧಿಸಿ ದೇಹ, ಮನಸ್ಸಿಗೆ ಚೈತನ್ಯ ನೀಡುತ್ತದೆ. ಇದರಲ್ಲಿರುವ ಪಾಲಿಫೆನಾಲ್‌ ಅಂಶ ಆಕ್ಸಿಡೇಟಿವ್‌ ಒತ್ತಡವನ್ನು ನಿವಾರಿಸುತ್ತದೆ. ಇದು ದೇಹದ ಕಾರ್ಯವನ್ನು ಸುಧಾರಿಸುತ್ತದೆ. 

ಕುಂಬಳಕಾಯಿ ಬೀಜ: ಕುಂಬಳಕಾಯಿ ಬೀಜದಲ್ಲಿ ಫ್ಯಾಟಿ ಆಸಿಡ್‌ ಹಾಗೂ ನಾರಿನಾಂಶ ಸಮೃದ್ಧವಾಗಿರುತ್ತದೆ. ಇದು ದೇಹಕ್ಕೆ ಅಗತ್ಯ ಶಕ್ತಿಯನ್ನು ಒದಗಿಸುತ್ತದೆ. 

ಬೀಟ್‌ರೂಟ್‌: ಬೀಟ್‌ರೂಟ್‌ ದೇಹಕ್ಕೆ ಆಂಟಿಆಕ್ಸಿಡೆಂಟ್‌ ಹಾಗೂ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ರಕ್ತದ ಹರಿವು ಹಾಗೂ ಶಕ್ತಿಯನ್ನು ವೃದ್ಧಿಸುತ್ತದೆ. 

ಪನೀರ್‌: ಸಾಕಷ್ಟು ಕಬ್ಬಿಣಾಂಶ ಹೊಂದಿರುವ ಪನೀರ್‌ ಸಸ್ಯಹಾರಿಗಳಿಗೆ ಹೇಳಿ ಮಾಡಿಸಿದ್ದು, ಇದು ದೇಹದ ತ್ರಾಣವನ್ನು ಹೆಚ್ಚಿಸಿ, ದೇಹಕ್ಕೆ ಅಗತ್ಯ ಶಕ್ತಿಯನ್ನು ಪೂರೈಸುತ್ತದೆ. 

ರೆಡ್‌ ಮೀಟ್‌: ಕುರಿ, ಮೇಕೆಯಂತಹ ಕೆಂಪು ಮಾಂಸವು ದೇಹದ ತ್ರಾಣ ಹೆಚ್ಚುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ಮೊಸರು: ನೈಸರ್ಗಿಕವಾಗಿ ಪ್ರೊಟೀನ್‌, ಕೊಬ್ಬು, ಕಾರ್ಬೊಹೈಡ್ರೇಟ್‌ ಅಂಶಗಳನ್ನು ಹೊಂದಿರುವ ಮೊಸರು ದೇಹದಲ್ಲಿ ತ್ರಾಣ ಹೆಚ್ಚಿಸುವ ಕೆಲಸ ಮಾಡುತ್ತದೆ. 

ಒಣಹಣ್ಣುಗಳು: ಇದರಲ್ಲೂ ಪ್ರೊಟೀನ್‌, ಕೊಬ್ಬು, ಕಾರ್ಬೋಹೈಡ್ರೇಟ್‌ ಅಂಶ ಸಮೃದ್ಧವಾಗಿರುವ ಜೊತೆಗೆ ವಿಟಮಿನ್‌, ಮಿನರಲ್ಸ್‌ ಕೂಡ ಇರುತ್ತದೆ. 

ಸೊಪ್ಪು: ಪಾಲಕ್‌, ಕೇಲ್‌, ಮೆಂತ್ಯೆಯಂತಹ ಸೊಪ್ಪು ತಕರಾರಿಗಳು ದೇಹದಲ್ಲಿ ನೈಸರ್ಗಿಕವಾಗಿ ಸ್ಟ್ಯಾಮಿನಾ ಹೆಚ್ಚಲು ಸಹಾಯ ಮಾಡುತ್ತವೆ. 

ಓಟ್‌ಮೀಲ್‌: ಇದರಲ್ಲಿ ನಾರಿನಾಂಶ ಸಮೃದ್ಧವಾಗಿದ್ದು ದೇಹಕ್ಕೆ ತ್ರಾಣ ಒದಗಿಸುತ್ತದೆ. 

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna