ತುಪ್ಪ vs ಸಾಸಿವೆ ಎಣ್ಣೆ, ಆರೋಗ್ಯಕ್ಕೆ ಯಾವುದು ಹೆಚ್ಚು ಉತ್ತಮ?

By Reshma
Jun 26, 2024

Hindustan Times
Kannada

ಭಾರತದಲ್ಲಿ ಬಹುತೇಕ ಆಹಾರ ಪದಾರ್ಥಗಳ ತಯಾರಿಕೆಗೆ ಎಣ್ಣೆ ಬಳಸುತ್ತಾರೆ. ಪ್ರಾಚೀನ ಕಾಲದಿಂದಲೂ ಸಾಸಿವೆ ಎಣ್ಣೆ ಬಳಸುವ ರೂಢಿ ಇದೆ. 

ತುಪ್ಪದ ಬಳಕೆ ಕೂಡ ಭಾರತದಲ್ಲಿ ಹೆಚ್ಚಿದೆ. ತುಪ್ಪವನ್ನು ಅಡುಗೆಗೂ ಬಳಸುತ್ತಾರೆ. ಹಾಗಾದರೆ ತುಪ್ಪ ಹಾಗೂ ಸಾಸಿವೆ ಎಣ್ಣೆ ನಡುವೆ ಯಾವುದು ಆರೋಗ್ಯಕ್ಕೆ ಉತ್ತಮ, ಇವುಗಳ ಪ್ರಯೋಜನವೇನು ತಿಳಿಯಿರಿ. 

ತಜ್ಞರ ಪ್ರಕಾರ ಸಾಸಿವೆ ಎಣ್ಣೆ ಹಾಗೂ ತುಪ್ಪ ಎರಡೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದಾಗ್ಯೂ ಪೋಷಕಾಂಶ ಉಪಸ್ಥಿತಿ ಹಾಗೂ ಅನುಪಸ್ಥಿತಿಯನ್ನು ಅವಲಂಬಿಸಿ ಸಾಸಿವೆ ಎಣ್ಣೆ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ನಂಬಲಾಗಿದೆ. 

ಆರೋಗ್ಯ ತಜ್ಞರ ಪ್ರಕಾರ ಸಾಸಿವೆ ಎಣ್ಣೆಯಲ್ಲಿ ಹೆಚ್ಚಿನ ಪ್ರಮಾನ ಕೊಬ್ಬಿನಾಮ್ಲಗಳಿವೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಾಸಿವೆ ಎಣ್ಣೆಗೆ ಹೋಲಿಸಿದರೆ ತುಪ್ಪದಲ್ಲಿ ಕೊಬ್ಬಿನಾಮ್ಲ ಕಡಿಮೆ ಇರುತ್ತದೆ. 

ಸಾಸಿವೆ ಎಣ್ಣೆಯಲ್ಲಿ ಆರೋಗ್ಯಕ್ಕೆ ಅವಶ್ಯವಿರುವ ಏಕಪರ್ಯಾಪ್ತ ಹಾಗೂ ಬಹುಪರ್ಯಾಪ್ತ ಕೊಬ್ಬಿನಾಂಶವಿದೆ. ತುಪ್ಪವು ಶೇ 60 ರಿಂದ 70 ರಷ್ಟು ಸ್ಯಾಚುರೇಟೆಡ್‌ ಕೊಬ್ಬನ್ನು ಹೊಂದಿರುತ್ತದೆ. ಇದು ಹೃದಯಕ್ಕೆ ಅಪಾಯಕಾರಿ. 

ಕಾಲಕಾಲಕ್ಕೆ ಎರಡನ್ನೂ ಸೇವಿಸಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ನೀವು ಆಹಾರ ಪದಾರ್ಥಗಳನ್ನು ಹುರಿಯಲು ತುಪ್ಪವನ್ನು ಬಳಸಬಹುದು, ಇದು ಪ್ರಯೋಜನಕಾರಿ ಎನ್ನುವುದು ತಜ್ಞರ ಅಭಿಪ್ರಾಯ.

ಆದರೆ ಸಾಸಿವೆ ಎಣ್ಣೆಯಾಗಲಿ ತುಪ್ಪವನ್ನಾಗಲಿ ಅತಿಯಾಗಿ ಬಳಸುವುದು ಒಳ್ಳೆಯದಲ್ಲ. ತುಪ್ಪ ಹಾಗೂ ಎಣ್ಣೆಯನ್ನು ಹೆಚ್ಚು ಬಳಸುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಏರಿಕೆಯಾಗುತ್ತದೆ. ಇದರಿಂದ ಹೃದ್ರೋಗದ ಅಪಾಯ ಹೆಚ್ಚು.

ಮಾರುಕಟ್ಟೆಯಲ್ಲಿ ಸಿಗುವ ತುಪ್ಪದಲ್ಲಿ ಅಥವಾ ಎಣ್ಣೆಯಲ್ಲಿ ಕಲಬೆರಕೆ ಇರುವ ಕಾರಣ ಇದು ಆರೋಗ್ಯಕ್ಕೆ ತುಂಬಾ ಹಾನಿಕರ. 

ತಜ್ಞರ ಪ್ರಕಾರ ಅಡುಗೆ ಮಾಡಲು ಒಂದೇ ರೀತಿಯ ಎಣ್ಣೆಗಳನ್ನು ದೀರ್ಘಕಾಲದವರೆಗೆ ಬಳಸುವ ಬದಲು ವಿವಿಧ ರೀತಿ ಎಣ್ಣೆಗಳನ್ನು ಬಳಸುವುದು ಉತ್ತಮ. 

ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. 

ಮಳೆಗಾಲದಲ್ಲಿ ಪೇರಲೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ 

Pexels